ವಿಶ್ವದೆಲ್ಲೆಡೆ ೫೩.೩ ಕೋಟಿ ಫೇಸ್‌ಬುಕ್ ಖಾತೆಗಳ ದತ್ತಾಂಶಗಳ ಸೋರಿಕೆ;

ವಾಷಿಂಗ್ಟನ್, ಏ. ೦೪: ವಿಶ್ವದ ಸೈಬರ್ ಕ್ರೈಂ ತಜ್ಱರು ಆತಂಕದ ಸಂಗತಿಯೊಂದನ್ನು ಹೊರಹಾಕಿದ್ದಾರೆ. ಇಮೇಲ್ ವಿಳಾಸ, ದೂರವಾಣಿ ಸಂಖ್ಯೆ ಸೇರಿದಂತೆ ೫೩.೦೩ ಫೇಸ್ಬುಕ್ ಬಳಕೆದಾರರ ದತ್ತಾಂಶವನ್ನು ೨೦೧೯ರಲ್ಲಿ ಆನ್ ಲೈನ್ ವೇದಿಕೆಯಲ್ಲಿ ಸೋರಿಕೆ ಮಾಡಲಾಗಿತ್ತು ಎಂದು ಸೈಬರ್ ಕ್ರೈಂ ತಜ್ಱರು ಹೇಳಿರುವುದು ಬಹಿರಂಗಗೊಂಡಿದೆ.
ಎಲ್ಲಾ ೫೩.೩ ಕೋಟಿ ಫೇಸ್ಬುಕ್ ಬಳಕೆದಾರರ ದತ್ತಾಂಶವನ್ನು ಸೋರಿಕೆ ಮಾಡಲಾಗಿತ್ತು ಎಂದು ಹಡ್ಸನ್ ರಾಕ್ ಸೈಬರ್ ಕ್ರೈಮ್ ಇಂಟೆಲಿಜೆನ್ಸ್ ಸಂಸ್ಥೆಯ ಮುಖ್ಯ ತಂತ್ರಜ್ನಾನ ಅಧಿಕಾರಿ ಅಲನ್ ಗಾಲ್ ಈ ಬಗ್ಗೆ ಟ್ವೀಟ್ ಮಾಡಿದ್ದಾರೆ.
ದತ್ತಾಂಶ ಸೋರಿಕೆಗೆ ಫೇಸ್ಬುಕ್ನ ನಿರ್ಲಕ್ಷ್ಯವೇ ಕಾರಣವಾಗಿತ್ತು ಎಂದು ಆರೋಪಿಸಿರುವ ಅವರು, ಸಾಮಾಜಿಕ ಮಾಧ್ಯಮ ಸಂಸ್ಥೆಯ ನಿರ್ಲಕ್ಷ್ಯವನ್ನು ತೀವ್ರವಾಗಿ ಖಂಡಿಸಿದ್ದಾರೆ.
ಬ್ಯುಸಿನೆಸ್ ಇನ್ ಸೈಡರ್ ವರದಿ ಪ್ರಕಾರ ಸೋರಿಕೆಯಾಗಿರುವ ಕೆಲವು ದತ್ತಾಂಶಗಳು ಈಗಲೂ ಪ್ರಸುತ್ತವೆಂದು ಹೇಳಲಾಗಿದೆ. ಆದರೆ, ಇದನ್ನು ಧೃಡೀಕರಿಸುವುದು ಎಎಫ್ ಪಿಗೆ ಸಾಧ್ಯವಾಗಿಲ್ಲ. ಸೋರಿಕೆಯಾದ ಹಲವು ದೂರವಾಣಿ ಸಂಖ್ಯೆಗಳು ಫೇಸ್ಬಕ್ ಖಾತೆ ಹೊಂದಿರುವವರು ಈಗಲೂ ಬಳಸುತ್ತಿರುವುದಾಗಿದೆ ಎಂದು ಗಾಲ್ ಹೇಳಿದ್ದಾರೆ.
ಆದರೆ, ಗಾಲ್ ಹೇಳಿಕೆಯನ್ನು ಫೇಸ್ ಬುಕ್ ಅಲ್ಲಗಳೆದಿದೆ. ಈ ವರದಿ ತುಂಬಾ ಹಳೆಯದ್ದು ಎಂದು ಪ್ರತಿಕ್ರಿಯಿಸಿದೆ. ಇದು ೨೦೧೯ರ ಆಗಸ್ಟ್ ನಲ್ಲಿ ನಮ್ಮ ಗಮನಕ್ಕೆ ಬಂದಿದ್ದು, ಆಗಲೇ ಸಮಸ್ಯೆಯನ್ನು ಸರಿಪಡಿಸಿದ್ದೇವೆ ಎಂದು ಫೇಸ್ಬುಕ್ ವಕ್ತಾರರು ಎಎಫ್ ಪಿಗೆ ತಿಳಿಸಿದ್ದಾರೆ.