ವಿಶ್ವದಲ್ಲೇ ಮೊದಲ ಲಸಿಕೆ ಪಡೆದ ವ್ಯಕ್ತಿ ನಿಧನ

ಲಂಡನ್, ಮೇ.26- ವಿಶ್ವದಲ್ಲೇ ಪ್ತಥಮ ಬಾರಿಗೆ ಕೊರೊನಾ ಲಸಿಕೆ ಹಾಕಿಸಿಕೊಂಡ ವ್ಯಕ್ತಿ ಎಂಬ ಕೀರ್ತಿಗೆ ಭಾಜನರಾಗಿದ್ದ ಬ್ರಿಟನ್ ದೇಶದ ವಿಲಿಯಂ ಷೇಕ್ಸ್‌ಪಿಯರ್ ಅನಾರೋಗ್ಯದಿಂದ ನಿಧನ ರಾಗಿದ್ದಾರೆ. ಅವರಿಗೆ 81 ವರ್ಷ ವಯಸ್ಸಾಗಿತ್ತು.
2020ರ ಡಿಸೆಂಬರ್ 8ರಂದು ಕೊರೊನಾ‌ ಲಸಿಕೆ ಹಾಕಿಸಿಕೊಂಡ ಜಗತ್ತಿನ ಮೊದಲ ವ್ಯಕ್ತಿ ಎನಿಸಿದ್ದರು.
ವಿಶ್ವವಿದ್ಯಾಲಯ ಆಸ್ಪತ್ರೆ ಕೋವೆಂಟ್ರಿ ಅಂಡ್‌ ವಾರ್ವಿಕ್‌ಶೈರ್‌ನಲ್ಲಿ ಅವರು ಜರ್ಮನಿಗೆ ಸೇರಿದ ಬಯೋಎನ್‌ಟೆಕ್‌, ಅಮೆರಿಕಾ ಔಷಧ ಸಂಸ್ಥೆ ಫಿಜರ್ ಜಂಟಿಯಾಗಿ ಅಭಿವೃದ್ದಿ ಪಡಿಸಿದ್ದ ಕೊರೋನಾ ಲಸಿಕೆ ಹಾಕಿಸಿಕೊಂಡಿದ್ದರು.
ಅನಾರೋಗ್ಯ ಸಮಸ್ಯೆಗಳಿಂದ ಇದೇ ಆಸ್ಪತ್ರೆಗೆ ಸೇರಿದ್ದ ಷೇಕ್ಸ್‌ಪಿಯರ್ ಈ ತಿಂಗಳ 20 ರಂದು ಮೃತಪಟ್ಟರು ಎಂದು ಅವರ ಸ್ನೇಹಿತ ಜೈನ್ ಇನ್ನೆಸ್ ತಿಳಿಸಿದ್ದಾರೆ.
ಇದೇ ಆಸ್ಪತ್ರೆಯಲ್ಲಿ 91ವರ್ಷದ ಮಾರ್ಗರೇಟ್ ಕೀನನ್ ಎಂಬುವರು ಕೊರೊನಾ ಲಸಿಕೆ ಮೊದಲ ಮಹಿಳೆಯಾಗಿದ್ದಾರೆ.