ವಿಶ್ವದಲ್ಲಿ 5 ಕೋಟಿ ಯತ್ತ ಸಾಗಿದ ಸೋಂಕಿತರ ಸಂಖ್ಯೆ

ವಾಷಿಂಗ್ಟನ್. ನವೆಂಬರ್ ೭. ಜಗತ್ತಿನಾದ್ಯಂತ ಸಾಂಕ್ರಾಮಿಕ ರೋಗ ಕೊರೋನಾರೋನ ಅಬ್ಬರ ಮುಂದುವರೆದಿದ್ದು ಸೋಂಕಿತರ ಸಂಖ್ಯೆ ಸುಮಾರು ೫ಕೋಟಿ ಯತ್ತ ಸಾಗುತ್ತಿರುವುದು ಶೋಚನೀಯ ಸಂಗತಿಯಾಗಿದೆ. ಇದುವರೆಗೂ ೧೨ ಲಕ್ಷಕ್ಕೂ ಹೆಚ್ಚು ಜನರು ಸೋಂಕಿಗೆ ಬಲಿಯಾಗಿದ್ದಾರೆ.

ಇದುವರೆಗೂ ಜಗತ್ತಿನಲ್ಲಿ ೪೯ ಕೋಟಿ ೬ಲಕ್ಷ ೪೫ ಸಾವಿರದ ೮೪೭ ಕ್ಕೆ ತಲುಪಿದೆ. ಮಹಾಮಾರಿ ಸೋಂಕಿನಿಂದ ಗುಣಮುಖರಾಗದೆ ಇರುವರೆಗೂ ೧೨ ಲಕ್ಷದ ೪೭ ಸಾವಿರದ ೯೭೧ ಮಂದಿ ಸಾವನ್ನಪ್ಪಿದ್ದಾರೆ.

ಕೋರೋನಾ ವೈರಸ್ ವರ್ದೋ ಮೀಟರ್ ಮೂಲಗಳು ತಿಳಿಸಿರುವಂತೆ ಮೂರುವರೆ ಕೋಟಿ ಸೋಂಕಿತರು ಇದುವರೆಗೂ ಚೇತರಿಸಿಕೊಂಡಿದ್ದಾರೆ. ಸುಮಾರು ಒಂದೂವರೆ ಕೋಟಿ ಸಕ್ರಿಯ ಪ್ರಕರಣಗಳು ದಾಖಲಾಗಿದೆ.

ವಿಶ್ವದಲ್ಲಿ ಅತಿ ಹೆಚ್ಚು ಬಾಧಿತ ಅಮೆರಿಕವೊಂದರಲ್ಲೇ ಒಂದು ಕೋಟಿ ೫೫ ಸಾವಿರದ ೬೮೦ ಜನರು ಸೋಂಕಿನಿಂದ ಬಳಲುತ್ತಿದ್ದಾರೆ. ಈ ದೇಶದಲ್ಲಿ ಇದುವರೆಗೂ ಸುಮಾರು ಎರಡೂವರೆ ಲಕ್ಷ ಸೋಂಕಿತರು ಗುಣಮುಖವಾಗಿದೆ ಸಾವನ್ನಪ್ಪಿದ್ದಾರೆ.

ಅಮೆರಿಕದಲ್ಲಿ ಸುಮಾರು ೬೫ ಲಕ್ಷ ಸೋಂಕಿತರು ವೈದ್ಯರು ನೀಡಿದ ಚಿಕಿತ್ಸೆಯಿಂದ ಚೇತರಿಸಿಕೊಂಡಿದ್ದಾರೆ . ಭಾರತದಲ್ಲಿ ಸೋಂಕಿತರ ಸಂಖ್ಯೆ ೮೪ಲಕ್ಷ ದಾಟಿದ್ದರೆ,ಬ್ರೆಜಿಲ್ ದೇಶದಲ್ಲಿ ೫೬ ಲಕ್ಷಕ್ಕೂ ಅಧಿಕ ಸೋಂಕಿತ ರಿದ್ದಾರೆ.

ರಷ್ಯಾದಲ್ಲಿ ೧೭ ಲಕ್ಷಕ್ಕೂ ಅಧಿಕ ಕೊಲಂಬಿಯಾದಲ್ಲಿ ೧೧ ಲಕ್ಷಕ್ಕೂ ಅಧಿಕ , ಸೋಂಕು ಪ್ರಕರಣಗಳು ದಾಖಲಾಗಿದ್ದು ಸಂಬಂಧಿತ ರೋಗಿಗಳನ್ನು ಬದುಕಿಸಿಕೊಳ್ಳಲು ವೈದ್ಯಕೀಯ ಸಮುದಾಯ ಹಗಲಿರುಳು ಶ್ರಮಿಸುತ್ತಿದೆ.