ವಿಶ್ವದಲ್ಲಿ 1 ಕೋಟಿ 77 ಲಕ್ಷಕ್ಕೂ ಅಧಿಕ ಮಂದಿಗೆ ಸೋಂಕು

ವಾಷಿಂಗ್ಟನ್, ಆ. ೧- ಕೊರೊನಾ ಸೋಂಕು ವಿಶ್ವದಲ್ಲಿ ದಿನೇ ದಿನೇ ಗಣನೀಯವಾಗಿ ಏರಿಕೆಯಾಗುತ್ತಿದ್ದು, ಒಟ್ಟಾರೆ 1 ಕೋಟಿ 77 ಲಕ್ಷದ 59 ಸಾವಿರ ಮಂದಿಗೆ ಸೋಂಕು ಕಾಣಿಸಿಕೊಂಡಿದ್ದು, ಇದುವರೆಗೂ 1 ಕೋಟಿ 11 ಲಕ್ಷದ 62 ಸಾವಿರ ಮಂದಿ ಆಸ್ಪತ್ರೆಯಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.
ಸದ್ಯ ವಿಶ್ವದಲ್ಲಿ 59 ಲಕ್ಷದ 14 ಸಾವಿರದ 285 ಮಂದಿ ಸಕ್ರಿಯ ಪ್ರಕರಣಗಳಿವೆ. ಒಟ್ಟಾರೆ ಸೋಂಕಿತರ ಅಮೆರಿಕವೊಂದರಲ್ಲೇ 47 ಲಕ್ಷದ 6 ಸಾವಿರ ಮಂದಿಗೆ ಸೋಂಕು ಕಾಣಿಸಿಕೊಂಡಿದ್ದು, 1 ಲಕ್ಷದ 56 ಸಾವಿರದ 747 ಮಂದಿ ಮೃತಪಟ್ಟಿದ್ದಾರೆ.
ಸದ್ಯ 23 ಲಕ್ಷದ 27 ಸಾವಿರದ 572 ಮಂದಿ ಚೇತರಿಸಿಕೊಂಡಿದ್ದು, 22 ಲಕ್ಷದ 21 ಸಾವಿರದ 570 ಮಂದಿ ಅಮೆರಿಕದಲ್ಲಿ ಸಕ್ರಿಯ ಪ್ರಕರಣಗಳಿವೆ. ಬ್ರೆಜಿಲ್‌ನಲ್ಲಿ 26 ಲಕ್ಷದ 66 ಸಾವಿರದ 298 ಮಂದಿ ಸೋಂಕಿತರಿದ್ದು, 92 ಸಾವಿರದ 568 ಮಂದಿ ಮೃತಪಟ್ಟಿದ್ದಾರೆ.
ಭಾರತದಲ್ಲಿ 16 ಲಕ್ಷದ 97 ಸಾವಿರದ 54 ಮಂದಿಗೆ ಸೋಂಕು ಕಾಣಿಸಿಕೊಂಡಿದ್ದು, 36 ಸಾವಿರದ 551 ಮಂದಿ ಮೃತಪಟ್ಟಿದ್ದಾರೆ. ಉಳಿದಂತೆ ರಷ್ಯಾ, ದಕ್ಷಿಣ ಆಫ್ರಿಕಾ, ಮೆಕ್ಸಿಕೊ, ಪೆರು, ಚಿಲಿ, ಸ್ಪೇನ್,ಇರಾನ್, ಇಂಗ್ಲೆಂಡ್, ಕೊಲಂಬಿಯಾ, ಪಾಕಿಸ್ತಾನ, ಸೌದಿ ಅರೇಬಿಯಾ, ಇಟಲಿ, ಬಾಂಗ್ಲಾದೇಶ, ಟರ್ಕಿ, ಜರ್ಮನಿ, ಅಂರ್ಜೆಟೇನಾ, ಫ್ರಾನ್ಸ್, ಇರಾಕ್, ಕೆನಡಾ, ಕತಾರ್, ಇಂಡೋನೇಷ್ಯಾ,ಈಜಿಪ್ಟ್ ಸೇರಿದಂತೆ ಜಗತ್ತಿನ ವಿವಿಧ ಭಾಗಗಳಲ್ಲಿ ಸಾವು ಮತ್ತು ಸೋಂಕಿನ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದೆ.
ಬ್ರೆಜಿಲ್‌ನಲ್ಲಿ ಇದುವರೆಗೂ 18.84 ಲಕ್ಷ, ಭಾರತದಲ್ಲಿ 10.96 ಲಕ್ಷ, ರಷ್ಯಾದಲ್ಲಿ 6.38 ಲಕ್ಷ, ದಕ್ಷಿಣ ಆಫ್ರಿಕಾದಲ್ಲಿ 3.26 ಲಕ್ಷ, ಮೆಕ್ಸಿಕೊದಲ್ಲಿ 2.79 ಲಕ್ಷ, ಪೆರುನಲ್ಲಿ 2.89 ಲಕ್ಷ, ಚಿಲಿಯಲ್ಲಿ 3.28 ಲಕ್ಷ, ಇರಾನ್‌ನಲ್ಲಿ 2.64 ಲಕ್ಷ, ಕೊಲಂಬಿಯಾದಲ್ಲಿ 1.54 ಲಕ್ಷ, ಪಾಕಿಸ್ತಾನದಲ್ಲಿ 2.47 ಲಕ್ಷ, ಸೌದಿಅರೆಬಿಯಾದಲ್ಲಿ 2ಯ36 ಲಕ್ಷ, ಇಟಲಿಯಲ್ಲಿ 2 ಲಕ್ಷ, ಬಾಂಗ್ಲಾದಲ್ಲಿ 1.35 ಲಕ್ಷ, ಟರ್ಕಿಯಲ್ಲಿ 2.15 ಲಕ್ಷ, ಜರ್ಮನಿಲ್ಲಿ 1.94 ಲಕ್ಷ, ಅರ್ಜೆಂಟೈನಾದಲ್ಲಿ 84 ಸಾವಿರ, ಫ್ರಾನ್ಸ್‌ನಲ್ಲಿ 82 ಸಾವಿರ, ಇರಾಕ್‌ನಲ್ಲಿ 88 ಸಾವಿರ, ಕೆನಡಾದಲ್ಲಿ 1.02 ಲಕ್ಷ, ಕತಾರ್‌ನಲ್ಲಿ 1.08 ಲಕ್ಷ, ಇಂಡೋನೇಷ್ಯಾದಲ್ಲಿ 66 ಸಾವಿರ ಸೇರಿದಂತೆ ವಿವಿಧ ದೇಶಗಳಲ್ಲಿ ಚೇತರಿಕೆ ಪ್ರಮಾಣವು ಹೆಚ್ಚಾಗಿದೆ.

ದೇಶ ಸೋಂಕು ಸಾವು
ಅಮೆರಿಕ – 47,05,889-1,56,747
ಬ್ರೆಜಿಲ್ – 26,66,298-92,568
ಭಾರತ – 16,97,054-36,551
ರಷ್ಯಾ -8,39,981-13,963
ದಕ್ಷಿಣ ಆಫ್ರಿಕಾ – 4,93,183-8005
ಮೆಕ್ಸಿಕೊ – 4,24,637-46,688
ಪೆರು – 4,07,492-19,021
ಚಿಲಿ – 3,55,667-9,457
ಸ್ಪೇನ್ – 3,35,602-28,445
ಇರಾನ್ – 3,04,204-16,766
ಇಂಗ್ಲೆಂಡ್ – 3,03,181-46,119
ಕೊಲಂಬಿಯಾ – 2,95,508-10,105
ಇಟಲಿ – 2,47,537-35,141
ಫ್ರಾನ್ಸ್ – 1,87,919-30,265‌