ವಿಶ್ವದಲ್ಲಿ ೧೦೦ ಕೋಟಿಗೂ ಅಧಿಕ ಮಂದಿಗೆ ಲಸಿಕೆ

ನವದೆಹಲಿ,ಏ.೨೫- ಜಗತ್ತಿನಲ್ಲಿ ದಿನೇ ದಿನೇ ಕೊರೊನಾ ಸೋಂಕು ಸಂಖ್ಯೆ ಗಣನೀಯವಾಗಿ ಹೆಚ್ಚಾಗುತ್ತಿದೆ.ಅದರದಲ್ಲಿಯೂ ಭಾರತದಲ್ಲಿ ಸೋಂಕಿನ ನಾಗಾಲೋಟ ಮುಂದುವರಿದಿದ್ದು ವಿಶ್ವದಲ್ಲಿ ಕೊರೊನಾ ಸೋಂಕಿಗೆ ಇದುವರೆಗೆ ಹಾಕಲಾಗಿದೆ.
ಈ ಪೈಕಿ ಭಾರತ ಒಂದರಲ್ಲಿ ೧೪ ಕೋಟಿ ಮಂದಿಗೆ ಲಸಿಕೆ ಹಾಕಲಾಗಿದೆ. ಇನ್ನುಳಿದಂತೆ ಅಮೇರಿಕಾ, ಇಂಗ್ಲೆಂಡ್, ಚೀನಾ, ದಕ್ಷಿಣ ಆಫ್ರಿಕಾ, ಜರ್ಮನಿ ಸೇರಿದಂತೆ ೨೭ ಪ್ರಮುಖ ದೇಶಗಳಲ್ಲಿ ನಿನ್ನೆ ತನಕ ೧೦೦ ಕೋಟಿ ೨೯ ಲಕ್ಷ ೩೮ ಸಾವಿರ ೫೪೦ ಮಂದಿಗೆ ಲಸಿಕೆ ಹಾಕಲಾಗಿದೆ ಎಂದು ಮೂಲಗಳು ತಿಳಿಸಿವೆ.
ಜೊತೆಗೆ ವಿಶ್ವದಲ್ಲಿ ನಿನ್ನೆ ಒಂದೇ ದಿನ ಸರಿ ಸುಮಾರು ೯ ಲಕ್ಷ ಮಂದಿಗೆ ಹೊಸದಾಗಿ ಸೋಂಕು ಕಾಣಿಸಿಕೊಂಡಿದೆ.ವಿಶ್ವದಲ್ಲಿ ಕಾಣಿಸಿಕೊಂಡ ಒಟ್ಟಾರೆ ಸೋಂಕಿನ ಪೈಕಿ ಭಾರತ ಒಂದರಲ್ಲಿ ಮೂರನೇ ಒಂದು ಭಾಗಕ್ಕೆ ಸೋಂಕು ನಿನ್ನೆ ಒಂದೇ ದಿನ ಧೃಢಪಟ್ಟಿದೆ.
ಕಳೆದ ನಾಲ್ಕು ದಿನಗಳಲ್ಲಿ ಭಾರತದಲ್ಲಿ ದಾಖಲೆಯ ಮೇಲೆ ದಾಖಲೆಯ ಸೋಂಕು ಕಾಣಿಸಿಕೊಳ್ಳುತ್ತಿದೆ. ಇದು ಸಹಜವಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನು ಆತಂಕ್ಕೆ ಸಿಲುಕುವಂತೆ ಮಾಡಿದೆ.
ಥಾಯ್ ಲ್ಯಾಂಡ್‌ನಲ್ಲಿಯೂ ಕೂಡ ಸೋಂಕಿತರು ಆಸ್ಪತ್ರಗೆ ದಾಖಲಾಗಲು ಮತ್ತು ಚಿಕಿತ್ಸೆ ಪಡೆಯಲು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಪ್ರಧಾನಿ ಪ್ರಯೂಚ್ ಚಾನ್ ಒ ಚಾನ್ ಅವರು ಸೋಂಕು ನಿಗ್ರಹ ಮಾಡಲು ಹಲವು ಬಿಗಿ ಕ್ರಮಗಳನ್ನು ಕೈಗೊಂಡಿದ್ದಾರೆ. ಆದರೂ ಸೋಂಕು ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿರುವುದು ಪ್ರಧಾನಿಯನ್ನು ಆತಂಕಕ್ಕೆ ಸಿಲುಕುವಂತೆ ಮಾಡಿದೆ.
ಬ್ರೆಜಿಲ್‌ನಲ್ಲಿಯೂ ಕೂಡ ಸಾವು ಮತ್ತು ಸೋಂಕು ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದೆ ಇದು ಸಹಜವಾಗಿ ಬ್ರೆಜಿಲ್ ಸರ್ಕಾರವನ್ನು ಮತ್ತಷ್ಟು ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದೆ.
ಜಗತ್ತಿನ ಅನೇಕ ದೇಶಗಳಲ್ಲಿ ಸೋಂಕು ನಿತ್ಯ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಆಮ್ಲಜನಕ, ಔಷಧಿ ಸೇರಿದಂತೆ ವಿವಿಧ ಸಮಸ್ಯೆಗಳು ಎದುರಾಗಿದೆ.