ವಿಶ್ವದಲ್ಲಿ ಒಂದೇ ದಿನ ೫ ಲಕ್ಷ ಮಂದಿಗೆ ಸೋಂಕು

ವಾಷಿಂಗ್ಟನ್, ಅ.೩೦- ಕೊರೊನಾ ಸೋಂಕಿಗೆ ಲಸಿಕೆ ಬರಲಿದೆ ಎನ್ನುವ ಮಾತುಗಳು ಕೇಳಿ ಬಂದಿರುವ ನಡುವೆಯೇ ವಿಶ್ವದಲ್ಲಿ ಸೋಂಕಿತರ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗುತ್ತಿದ್ದು ಒಂದೇ ದಿನ ದಾಖಲೆ ಪ್ರಮಾಣದಲ್ಲಿ ೫ ಲಕ್ಷ ಮಂದಿಗೆ ಸೋಂಕು ತಗಲಿದೆ.
ಕಳೆದ ಕೆಲವು ವಾರಗಳಿಂದ ಈಚೆಗೆ ಪ್ರತಿದಿನ ಸರಾಸರಿ ನಾಲ್ಕು ಲಕ್ಷ ಮಂದಿಗೆ ಸೋಂಕು ಕಾಣಿಸಿಕೊಳ್ಳುತ್ತಿತ್ತು. ನಿನ್ನೆ ಒಂದೇ ದಿನ ೫ ಲಕ್ಷ ಮಂದಿಗೆ ಸೋಂಕು ಕಾಣಿಸಿಕೊಂಡು ಮತ್ತಷ್ಟು ಆತಂಕ ಸೃಷ್ಟಿ ಮಾಡಿದೆ.
ಕಳೆದ ೨೪ ಗಂಟೆಗಳಲ್ಲಿ ಶೇಕಡಾ ೨೫ರಷ್ಟು ಮಂದಿಗೆ ಹೊಸದಾಗಿ ಸೋಂಕು ವಿಶ್ವದಲ್ಲಿ ಕಾಣಿಸಿಕೊಂಡಿದೆ. ಇದು ಇನ್ನಷ್ಟು ಆತಂಕ ಸೃಷ್ಟಿ ಮಾಡಿದೆ ಎಂದು ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ.
ಮೊದಲು ದಾಖಲಾದ ಒಟ್ಟು ಸೋಂಕಿತರ ಆಯ್ಕೆ ಲ್ಯಾಟಿನ್ ಅಮೆರಿಕ ಹಾಗೂ ಪಾಶ್ಚಿಮಾತ್ಯ ದೇಶಗಳಲ್ಲಿ ಅತ್ಯಧಿಕ ದೃಢಪಟ್ಟಿದೆ ಇದು ಕಳೆದ ಕೆಲವು ದಿನಗಳಿಗೆ ಹೋಲಿಸಿದರೆ ಅತಿಹೆಚ್ಚಿನ ಪ್ರಮಾಣದ ಸೋಂಕು ಎಂದು ಅಮೆರಿಕದ ಜಾನ್ ಹಾಪ್ ಕಿನ್ಸ್ ವಿಶ್ವ ವಿದ್ಯಾಲಯ ತಿಳಿಸಿದೆ.
ಭಾರತ- ಅಮೆರಿಕ ಸೇರಿದಂತೆ ಜಗತ್ತಿನ ಹಲವು ದೇಶಗಳು ಸೋಂಕು ತಡೆಗಟ್ಟಲು ಅನೇಕ ಕ್ರಮಗಳನ್ನು ಕೈಗೊಂಡಿವೆ. ಇದರ ಹೊರತಾಗಿಯೂ ಪ್ರತಿನಿತ್ಯ ಸೋಂಕಿನ ಪ್ರಮಾಣ ಹೆಚ್ಚಾಗುತ್ತಿರುವುದು. ಆಯಾ ದೇಶಗಳ ಸರ್ಕಾರಗಳು ಮತ್ತು ತಜ್ಞರ ಆತಂಕವನ್ನು ಇನ್ನಷ್ಟು ಹೆಚ್ಚಿಸಿದೆ.
೪.೪೭ ಕೋಟಿಗೆ ಸೋಂಕು
ವಿಶ್ವದಲ್ಲಿ ೪ ಕೋಟಿ ೪೭ ಲಕ್ಷ ಮಂದಿಗೆ ಸೋಂಕು ಈವರೆಗೆ ಕಾಣಿಸಿಕೊಂಡಿದೆ. ಸೋಂಕಿನಿಂದ ೧೧.೭ ಲಕ್ಷ ಮಂದಿ ಮೃತಪಟ್ಟಿದ್ದಾರೆ.
ಜಗತ್ತಿನ ಒಟ್ಟಾರೆ ಸೋಂಕಿತರ ಪೈಕಿ ಯುರೋಪ್ ಉತ್ತರ ಅಮೆರಿಕಾ ಮತ್ತು ಲ್ಯಾಟಿನ್ ಅಮೆರಿಕಾದಲ್ಲಿ ಇದರ ಪ್ರಮಾಣ ಶೇಕಡ ೬೬ ರಷ್ಟಿದೆ. ವಿದೇಶಗಳಲ್ಲಿ ಸೋಂಕಿನಿಂದ ಸಾವನ್ನಪ್ಪುತ್ತಿರುವವರ ಪ್ರಮಾಣ ಶೇಕಡಾ ೭೬ರಷ್ಟು ಇದೆ.
ಯುರೋಪಿನ ದೇಶಗಳಲ್ಲಿ ಪ್ರತಿದಿನ ಎರಡು ಲಕ್ಷದ ಐವತ್ತು ಸಾವಿರ ಮಂದಿಗೆ ಹೊಸ ಪ್ರಕರಣಗಳು ಕಾಣಿಸಿಕೊಳ್ಳುತ್ತಿವೆ ಈ ವಲಯದಲ್ಲಿ ಇದುವರೆಗೂ ಸರಿಸುಮಾರು ಒಂದು ಕೋಟಿ ಮಂದಿಗೆ ಕಾಣಿಸಿಕೊಂಡಿದ್ದು ೨.೬೧ ಲಕ್ಷ ಮಂದಿ ಸಾವನ್ನಪ್ಪಿದ್ದಾರೆ..
ಫ್ರಾನ್ಸ್ ನಲ್ಲಿ ಪ್ರತಿದಿನ ೫೦ಸಾವಿರಕ್ಕೂ ಅಧಿಕ ಮಂದಿಗೆ ಸೋಂಕು ಕಾಣಿಸಿಕೊಳ್ಳುತ್ತಿದೆ. ಭಾರತದಲ್ಲಿ ಸೋಂಕಿನ ಸಂಖ್ಯೆ ದಿನದಿಂದ ದಿನಕ್ಕೆ ಗಣನೀಯವಾಗಿ ಏರಿಕೆಯಾಗುತ್ತಿದೆ ಇದುವರೆಗೂ ೮೦ ಲಕ್ಷ ಮಂದಿಗೆ ಹೋಗಲಿದೆ ಏಷ್ಯಾ ರಾಷ್ಟ್ರಗಳಲ್ಲಿ ಒಂದು ಕೋಟಿಗೂ ಹೆಚ್ಚು ಮಂದಿಗೆ ಸೋಂಕು ಧೃಡಪಟ್ಟಿದೆ.
ದೇಶದ ಪ್ರತಿಯೊಬ್ಬ ಜನರಿಗೆ ಕೊರೋನಾ ಲಸಿಕೆ ತಲುಪಿಸುವ ಕೆಲಸ ಮಾಡಲಾಗುವುದು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಭರವಸೆ ನೀಡಿದ್ದಾರೆ