ವಿಶ್ವದಲ್ಲಿಯೇ ಮಹಿಳೆಯರಿಗೆ ಸ್ವಾತಂತ್ರ್ಯ-ಸಮಾನತೆ ನೀಡಿದವರಲ್ಲಿ ಬಸವಣ್ಣನವರೇ ಮೊದಲಿಗರು

ಶಹಾಬಾದ:ಜು.30:ಇಡೀ ವಿಶ್ವದಲ್ಲಿಯೇ ಮಹಿಳೆಯರಿಗೆ ನೂರಕ್ಕೆ ನೂರರಷ್ಟು ಸ್ವಾತಂತ್ರ್ಯ ಮತ್ತು ಅವಕಾಶ ನೀಡಿದವರಲ್ಲಿ ಬಸವಣ್ಣನವರೇ ಮೊದಲಿಗರು ಎಂದು ಗದುಗಿನ ಪ್ರವಚನಕಾರರಾದ ಶರಣೆ ಗಿರಿಜಕ್ಕ ಹೇಳಿದರು.

ಅವರು ಶುಕ್ರವಾರ ಭಂಕೂರ ಬಸವ ಸಮಿತಿಯಲ್ಲಿ ಶ್ರಾವಣ ಮಾಸದ ಪ್ರಯುಕ್ತ ಒಂದು ತಿಂಗಳ ಪರ್ಯಂತ ಆಯೋಜಿಸಲಾದ ಬಸವ ತತ್ವ ಪ್ರವಚನ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.

ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯರು ನಲುಗಿ ಹೋಗಿದ್ದರು.ಆದರೆ 12ನೇ ಶತಮಾನದಲ್ಲಿ ಪುರುಷರಿಗೆ ಕೊಡುವ ಸ್ಥಾನಮಾನವನ್ನು ಮಹಿಳೆಯರಿಗೆ ನೀಡಲಾಗಿತ್ತು. ಇಂದು ಮಹಿಳೆಯರು ಬಸವಣ್ಣನವರನ್ನು ಸದಾಕಾಲ ಸ್ಮರಿಸಲೇಬೇಕು.ಇಲ್ಲದಿದ್ದರೇ ನಾವು ಕೃತಜ್ಞಹೀನರಾಗುತ್ತೆವೆ ಎಂದು ಹೇಳಿದರು.

ಶರಣರು ಅರಿವಿಗೆ ಎಷ್ಟು ಪ್ರಾಮುಖ್ಯತೆ ಕೊಟ್ಟರೋ, ಅಷ್ಟೇ ಆಚಾರಕ್ಕೂ ಕೊಟ್ಟರು.ಶರಣರ ಜೀವನವನ್ನು ನೋಡಿದರೆ ಅಂತರಂಗ ಹಾಗೂ ಬಹಿರಂಗವನ್ನು ಶುದ್ಧಿಗಾಗಿ ನಡೆದ ಅನುಭಾವದ ಜೀವನ.ಅಂತಹ ಶರಣರ ಬದುಕು, ಬಸವ ತತ್ವದ ಜೀವನ ನಮ್ಮದಾಗಬೇಕಿದೆ. ಕಣ್ಣಿನಿಂದ ಏನೇನೋ ನೋಡುವುದಕ್ಕಿಂತ ಅರಿವು ನೀಡಿದ ಗುರು, ಹಿರಿಯರನ್ನು ನೋಡುವಂತವರಾಗಬೇಕು.ಕಿವಿಯಿಂದ ಕಟ್ಟದನ್ನು ಕೇಳುವ ಬದಲು ಒಳ್ಳೆಯ ಹಿತನುಡಿಗಳನ್ನು ಕೇಳುವವರಾಗಬೇಕು.ನಮ್ಮದು ಜೀವಿಸುವ ಜೀವನ ಆಗಬೇಕೆಂದು ಶರಣೆ ಅಕ್ಕಮಹಾದೇವಿ ತಮ್ಮ ವಚನದಲ್ಲಿ ತಿಳಿಸಿದ್ದಾಳೆ.ನಾವೆಲ್ಲರೂ ಕಣ್ಣಿಗೆ ಕಾಣುವ ರೀತಿಯಲ್ಲಿ ಮಾತ್ರ ಜೀವಿಸುತ್ತಿದ್ದೆವೆ.ಆದರೆ ನಮಗೆ ನಿಜವಾಗಿಯೂ ಜೀವಂತಿಕೆಯಿಲ್ಲ. ಕಾರಣ ನಮ್ಮ ಬದುಕಿನಲ್ಲಿ ಉತ್ಸಾಹ, ಆಸಕ್ತಿ ಎಂಬುದೇ ಕಾಣುತ್ತಿಲ್ಲ.ನಮ್ಮ ಜೀವನ ಒತ್ತಡಮಯ ಜೀವನ ಆಗಿ ಹೋಗಿದೆ. ಶರಣರ ತತ್ವವನ್ನು ಆಲಿಸಿದರೇ ಉತ್ಸಾಹ ಪುಟಿದೇಳುತ್ತದೆ.ಬದುಕಿನಲ್ಲಿ ಉತ್ಸಾಹ ತುಂಬಿದರೇ ಜೀವನವಾಗುತ್ತದೆ.ನಿರುತ್ಸಾಹ ಉಂಟಾದರೆ ಮರಣ ಹೊಂದುತ್ತೆವೆ. ಈ ಕಾಯವನ್ನು ಒಳ್ಳೆಯದಕ್ಕೆ ಸವೆಸಿ, ಮೌಲ್ಯಗಳ ಅಳವಡಿಸಿಕೊಂಡರೆ ಮನುಷ್ಯರಾಗುತ್ತೆವೆ.ದೈವಿ ಗುಣಗಳನ್ನು ಅಳವಡಿಸಿಕೊಂಡರೇ ಶರಣರಾಗುತ್ತೆವೆ.ಆದ್ದರಿಂದ ಮೃತ್ಯು ಮುಟ್ಟದ ಮುನ್ನ ಒಳ್ಳೆಯ ಸತ್ಕಾರ್ಯ ಮಾಡಬೇಕು. ಕತ್ತಲೆಯನ್ನು ಕಳೆಯಲು ಕರೆಂಟನಿಂದ ಬಲ್ಬ ಉರಿಸಬಹುದು ಮತ್ತು ಎಣ್ಣೆಯಿಂದ ದೀಪ ಹಚ್ಚಬಹುದು.ಆದರೆ ನಮ್ಮೊಳಗಿರುವ ಅಜ್ಞಾನವೆಂಬ ಕತ್ತಲೆಯನ್ನು ಹೋಗಲಾಡಿಸಲು ಅಂತರಂಗದ ಬೆಳಕು ಬೇಕು. ಆ ಅಂತರಂಗ ಬೆಳಕು ಅಂತರಂಗದಲ್ಲಿ ಬೆಳಗಬೇಕಾದರೆ ಶರಣರ ಜೀವನ ಮತ್ತು ಶರಣರ ಅನುಭಾವವನ್ನು ಸವಿಯಬೇಕೆಂದು ಹೇಳಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮೃತ್ಯುಂಜಯ್ ಹಿರೇಮಠ, ಸಾಮಾಜಿ, ಧಾರ್ಮಿಕ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ಬಸವ ಸಮಿತಿ ಸಾಕಷ್ಟು ಕೆಲಸ ಮಾಡುತ್ತಿದೆ.ಮಕ್ಕಳಿಗೆ ಶಿಕ್ಷಣ ಕಲಿಸುವುದರ ಜತೆಗೆ ಒಳ್ಳೆಯ ಸಂಸ್ಕಾರ ಕೊಡುವುದು ಮುಖ್ಯ.ಅದನ್ನು ಬಸವ ಸಮಿತಿ ಸುಮಾರು ವರ್ಷಗಳಿಂದ ಮಾಡುತ್ತ ಬಂದಿರುವುದು ನಮ್ಮ ಕಣ್ಮುಂದೆ ಇದೆ.ತಮ್ಮದೇ ಆದ ಹಲವಾರು ಕೆಲಸ ಮಧ್ಯೆ ಪ್ರವಚನವನ್ನು ತಿಂಗಳ ಪರ್ಯಂತ ಆಯೋಜಿಸಿ ಸಮಾಜಕ್ಕೆ ಮಾನಸಿಕ ನೆಮ್ಮದಿ ನೀಡುತ್ತಿದ್ದಾರೆ ಎಂದು ಹೇಳಿದರು.

ಬಸವ ಸಮಿತಿ ಅಧ್ಯಕ್ಷ ನೀಲಕಂಠ ಮುದೋಳಕರ್ ಮಾತನಾಡಿದರು. ಗಣ್ಯರಾದ ಚನ್ನವೀರಪ್ಪ ಪಾಟೀಲ, ನಗರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಮಲ್ಲಿಕಾರ್ಜುನ ವಾಲಿ ವೇದಿಕೆಯ ಮೇಲಿದ್ದರು.À್ಬಸವ ಸಮಿತಿ ಮಾಜಿ ಅಧ್ಯಕ್ಷ ಅಮೃತ ಮಾನಕರ್ ಪ್ರಾಸ್ತಾವಿಕ ನುಡಿದರು, ಗುರಲಿಂಗಪ್ಪ ಪಾಟೀಲ ನಿರೂಪಿಸಿದರು, ಶರಣಬಸಪ್ಪ ನಾಗನಳ್ಳಿ ಸ್ವಾಗತಿಸಿದರು, ಬಿ.ಕೆ.ವೀರಣ್ಣ ವಂದಿಸಿದರು.