ವಿಶ್ವದಲ್ಲಿಯೇ ಬೃಹತ್ ಲಿಖಿತ ಸಂವಿಧಾನ:ಈರಣ್ಣಾ ಪೂಜಾರ

ಇಂಡಿ:ಜ.27: ಶಮ್ಸ ಆಂಗ್ಲಮಾಧ್ಯಮ ಹಾಗೂ ಉರ್ದು ಮಾಧ್ಯಮ ಹಿರಿಯ ,ಪ್ರಾಥಮಿಕ ಪ್ರೌಢ ಶಾಲೆ ಇಂಡಿಯಲ್ಲಿ ಇಂದು ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಆದರ್ಶ ಚಿತ್ರಕಲಾಮಹಾವಿಧ್ಯಾಲಯದ ಪ್ರಾಂಶುಪಾಲ ಆಯ್,ಸಿ ಪೂಜಾರ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು ವಿಶ್ವದಲ್ಲಿ ಅತೀ ದೊಡ್ಡ ಲಿಖಿತ ಸಂವಿಧಾನ ಹೊಂದಿದ ದೇಶ ಭಾರತ.ಪ್ರಜೆಗಳಿಂದ ಪ್ರಜೆಗಳಿಗಾಗಿ ಪ್ರಜೆಗಳಿಗೋಸ್ಕರ ನಡೆಸುವ ಆಡಳಿತ ಪ್ರಜಾಪ್ರಭುತ್ವ ಜಾತ್ಯಾತೀತ ಅಭಿಪ್ರಾಯಗಳನ್ನು ಸಾರುವ ಸಂವಿಧಾನ ವಿಶ್ವದಲ್ಲಿಯೇ ಶ್ರೇಷ್ಠವಾಗಿದೆ. ವಿಧ್ಯಾರ್ಥಿಗಳು ದೇಶಾಭಿಮಾನವನ್ನು ಬೆಳೆಸಿಕೊಂಡು ಸತ್ಪ್ರಜೆಗಳಾಗಿ ಶಾಲೆಯ ಕೀರ್ತಿ ತರಬೇಕು ಎಂದು ಆಯ್,ಸಿ ಪೂಜಾರ ಹೇಳಿದರು.
ದೇಶದಲ್ಲಿ ಕಾರ್ಯಾಂಗ ಶಾಸಕಕಾಂಗ ನ್ಯಾಯಾಂಗ ಒಳಗೊಂಡಂತೆ ಎಲ್ಲ ಸಮುದಾಯಗಳನ್ನು ಕೇಂದ್ರೀಕರಿಸಿ ರಚಿಸಲಾದ ಸಂವಿಧಾನದ ರೂವಾರಿ ಡಾ.ಬಿ.ಆರ್ ಅಂಬೇಡ್ಕರವರ ಪರೀಶ್ರಮದಿಂದ ದೇಶದ ಜನತೆ ಬಡವನಿಂದ ಹಿಡಿದು ಶ್ರೀಮಂತರಾದಿಯಾಗಿ ತಮ್ಮ ಬದುಕನ್ನು ರೂಪಿಸಿಕೊಳ್ಳಲು ನ್ಯಾಯಪರತೆಯಿಂದ ಬಾಳಲು ಅವಕಾಶ ಮಾಡಿಕೊಟ್ಟಿದೆ ಎಂದರು.
ಶಮ್ಸ ಶಾಲೆಯ ಅಧ್ಯಕ್ಷ ಸಿಕಿಂದರಬಾದಷಾ ಅರಬ, ಮುಖ್ಯ ಗುರು ಫಯಾಜ ಟಾಂಗೇವಾಲೆ, ಕಾರಿಮಸೀಉಲ್ಲಾ, ಮಹೆಬೂಬ ಮಕಂದರ್, ಮುಜೀಬ ಬೇನೂರ ಶಾಲಾ ಆಡಳಿತ ಮಂಡಳಿ ಸಿಬ್ಬಂದಿ ಸೇರಿದಂತೆ ವಿಧ್ಯಾರ್ಥಿ,ವಿಧ್ಯಾರ್ಥಿನಿಯರು ಇದ್ದರು.