ವಿಶ್ವಗುರು ಬಸವ ಜಯಂತಿ ಆಚರಣೆ

ಗಬ್ಬೂರು,ಏ.೨೪-ದೇವದುರ್ಗ ತಾಲ್ಲೂಕಿನ ಮಲದಕಲ್ ಗೆಳೆಯರ ಬಳಗದ ವತಿಯಿಂದ ಭಾನುವಾರ ವಿಶ್ವಗುರು ಬಸವಣ್ಣನ ಜಯಂತಿ ಆಚರಣೆ ಮಾಡಿದರು.
ಇಲ್ಲಿನ ಸಹಾಯಕ ಪ್ರಾಧ್ಯಾಪಕರಾದ ಡಾ.ಮಾರುತಿ ಕುಮಾರ ನಾಯಕ ಅವರು ಸರಕಾರಿ ಶಾಲೆಯಲ್ಲಿ ಬಸವಣ್ಣನ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಬಸವ ಜಯಂತಿ ಆಚರಿಸಿದರು.
ನಂತರ ಮಾದನಾಡಿದ ಡಾ.ಮಾರುತಿ ಕುಮಾರ ನಾಯಕ ಅವರು ’ಇವನಾರವ ಇವನಾರವ ಎನ್ನಿಸದೇ ಇವನಮ್ಮವ ಇವನಮ್ಮವ ಎಂದೆನಿಸಯ್ಯ’ ಎಂದು ಬಸವಣ್ಣನವರು ಹೇಳಿದಂತೆ ಎಲ್ಲರನ್ನೂ ಸಮಾನವಾಗಿ ಕಾಣಬೇಕು.ಮೇಲು ಕೀಳಿನ ವಿರುದ್ಧ ಹೋರಾಡಿದ ಅವರು ತತ್ವಾದರ್ಶಗಳನ್ನು ಪಾಲಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಕಾನೂನು ಸಲಹೆಗಾರರಾದ ಶಿವರಾಜ ವಕೀಲರು ಮಲದಕಲ್,ಊರಿನ ಮುಖಂಡರಾದ ಉಮಣ್ಣ ನಾಯಕ,ಅಂಬಣ್ಣ ಹಾಲುಮತ, ರವಿಕುಮಾರ್ ಬಾಡ್ಲಾ,ಹೆಚ್.ಎಲ್.ಬಾಲಯ್ಯ ನಾಯಕ, ಶಿವನಂದ ನಾಯಕ ಬುದ್ದಿನ್ನಿ, ಗ್ರಂಥಾಲಯ ಮೇಲ್ವಿಚಾರಕ ಗಂಗಪ್ಪ ಭೋವಿ,ಗೋವಿಂದಪ್ಪ ತಿಪ್ಪನದಿನ್ನಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.