ವಿಶ್ವಗುರು ಬಸವಣ್ಣ ಆಗಲೂ ಈಗಲೂ ಪ್ರಸ್ತುತ

ಇಂಡಿ:ಜೂ.5:ಇವನಾರವ ಇವನಾರವ ನೆಂದಿಸದಿರಯ್ಯಾ, ಇವ ನಮ್ಮವ ಇವ ನಮ್ಮವ ನೆಂದನಿಸಯ್ಯ ಕೂಡಲ ಸಂಗಮದೇವಾ ನಿಮ್ಮ ಮಹಾಮನೆಯ ಮಗನೆಂದನಿಸಯ್ಯ ಎಂದು 12 ನೇ ಶತಮಾನದಲ್ಲಿಯೇ ಸಾಮಾಜಿಕ ಕ್ರಾಂತಿಗೆ ನಾಂದಿ ಹಾಡಿದವರು ವಿಶ್ವಗುರು ಬಸವಣ್ಣನವರು ಎಂದು ಶ.ಸಾಪದ ಯುವ ಸಂಚಾಲಕ ಎಸ್.ಐ.ಸುಗುರ ಹೇಳಿದರು.

ಪಟ್ಟಣದ ಸಾಯಿ ಇಂಗ್ಲೀಷ ಶಾಲೆಯಲ್ಲಿ ಕದಳಿ ವೇದಿಕೆಯಿಂದ ಮನೆ ಮನೆಗಳಲ್ಲಿ ಶರಣರ ಸಂದೇಶ,ದತ್ತಿ ಉಪನ್ಯಾಸ ಮತ್ತು ವಿಶ್ವ ಗುರು ಬಸವಣ್ಣ ಎಂಬ ವಿಷಯದ ಮೇಲೆ ಮಾತನಾಡುತ್ತಿದ್ದರು.

ಅಂದಿನ ಕಾಲಕ್ಕೆ ಪ್ರಜಾಪ್ರಭುತ್ವ, ಕಾಯಕ, ಸ್ತ್ರೀ ಸಮಾನತೆ ಮಹತ್ವ ಕೊಡುವ ಮೂಲಕ ಜಾತಿಯತೆ ಅಳಿಸಲು ಪ್ರಧಾನ ಆಧ್ಯತೆ ನೀಡಿ ಭಕ್ತಿ ಮಾರ್ಗವನ್ನು ಪ್ರತಿಪಾದಿಸಿದ ಅಪರೂಪದ ವಿಶ್ವಗುರು ಬಸವಣ್ಣ ಎಂದರು.

ದಿ. ಭೌರಮ್ಮ ಗಿರಿಮಲ್ಲಪ್ಪ ಗಲಿಗಲಿಯವರ ಕುರಿತು ಕದಳಿ ವೇದಿಕೆ ಅಧ್ಯಕ್ಷೆ ಗಂಗಾಬಾಯಿ ಗಲಗಲಿ ಮಾತನಾಡಿದರು.

ಸಂಶೋಧಕ ಡಿ.ಎನ್.ಅಕ್ಕಿ, ಬಿ.ಎಸ್.ಪಾಟೀಲ, ನಿವೃತ್ತ ಮುಖ್ಯ ಶಿಕ್ಷಕ ಅಂಬಣ್ಣ ಸುಣಗಾರ, ಭವಾನಿ ಗುಳೆದಗುಡ್ಡ, ಎಸ್.ಎಸ್.ಈರನಕೇರಿ, ಶಶಿಕಲಾ ಬೇಟಗೇರಿ, ಬಿ.ಎಸ್.ಪೋಲಿಸ ಪಾಟೀಲ, ದಾನಮ್ಮ ಹಿರೇಮಠ, ಜಯಶ್ರೀ ಬಿರಾದಾರ ಮಾತನಾಡಿದರು.

ಶಿಕ್ಷಕ ವೃತ್ತಿಯಲ್ಲಿದ್ದು ನಿವೃತ್ತರಾದ ಪ್ರಕಾಶ ಮದಭಾವಿ ದಂಪತಿಗಳು, ಅಂಬಣ್ಣ ಸುಣಗಾರ ದಂಪತಿಗಳು,ಎಸ್.ಎಂ.ಬಿರಾದಾರ,ಸುಮಂಗಲಾ ನಿಂಬಾಳ,ಶ್ರೀಮತಿ ಮನಗೂಳಿ ಇವರನ್ನು ಸನ್ಮಾನಿಸಲಾಯಿತು.

ಸಮಾರಂಭದಲ್ಲಿ ಬಿ.ಈ.ಹಿರೇಮಠ,ರಾಜಶ್ರೀ ಕ್ಷತ್ರಿ,ರೇಣುಕಾ ಸಂಖ,ನಿರ್ಮಲಾ ತೇಲಿ,ವಿಜಯಲಕ್ಷ್ಮೀ ದೇಸಾಯಿ,ಶಶಿಕಲಾ ಮದಭಾವಿ ಮತ್ತಿತರಿದ್ದರು.