
ವಿಜಯಪುರ:ಎ.25: ಕರ್ನಾಟಕ ದಲಿತ ಸಂಘರ್ಷ ಸಮಿತಿ ನೇತೃತ್ವದಲ್ಲಿ ಡಾ. ಬಿ.ಆರ್. ಅಂಬೇಡ್ಕರವರ 132ನೇ ಹಾಗೂ ವಿಶ್ವಗುರು ಬಸವಣ್ಣನವರ 890ನೇ ಜಯಂತ್ಯೋತ್ಸವ ನಿಮಿತ್ಯ ಸಂವಿಧಾನ ಮತ್ತು ಪ್ರಜಾಪ್ರಭುತ್ವ ಅಪಾಯದಲ್ಲಿ ಕುರಿತು ಜಿಲ್ಲಾ ಮಟ್ಟದ ವಿಚಾರ ಸಂಕಿರಣ ನಗರದ ಹೊಟೇಲ್ ಮಧುವನ ಹಾಲ್‍ನಲ್ಲಿ ಹಮ್ಮಿಕೊಳ್ಳಲಾಗಿತ್ತು.
ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕರು ಹೆಣ್ಣೂರ ಶ್ರೀನಿವಾಸ ಮತ್ತು ಬಿ.ಗೋಪಾಲ ರಾಜ್ಯ ಉಪಾದ್ಯಕ್ಷರು ಮಾತನಾಡಿ 10-5-2023 ರಾಜ್ಯದಲ್ಲಿ ನಡೆಯುತ್ತಿರುವ ಚುನಾವಣೆಯಲ್ಲಿ ಜೆಡಿಎಸ್ ಎಸ್.ಡಿ.ಪಿ.ಅಯ್. ಪಕ್ಷಗಳಿಗೆ ಮತ ನೀಡದೆ ಕಾಂಗ್ರೇಸ್ ಪಕ್ಷಕ್ಕೆ ಬೆಂಬಲಿಸಬೇಕು, ರಾಜ್ಯದ ಶೋಷಿತರು ಹಿಂದುಳಿದವರು ಅಬಲೆಯರು ಇವತ್ತು ಸಂವಿಧಾನ ಸಂರಕ್ಷಣೆ ಮಾಡುವ ಜವಾಬ್ದಾರಿಯಿದೆ. ಇವತ್ತು ಕೇಳ ಕಂಡರಿಯದಂತ ಭಯದ ವಾತಾವರಣ ನಿರ್ಮಾಣವಾಗಿದೆ ಎಂದರು.
ಸುಧಾಮದಾಸ ಆಯ್.ಆರ್.ಎಸ್. ಅಫೀಸರ, ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕರು ಅಶೋಕ ಚಲವಾದಿ ಮಾತನಾಡಿ ಬಿಜೆಪಿ ಕೊಮುವಾದಿ ಸಂಘಪರಿವಾರದ ಪಕ್ಷವನ್ನು ಸೋಲಿಸುವ ಮುಲಕ ಈ ರಾಜ್ಯದಲ್ಲಿ ಸಂವಿದಾನವನ್ನು ರಕ್ಷಣೆ ಮಾಡುವಂತದಾಗಬೇಕು. ಒಳಮಿಸಲಾತಿ ವಿಚಾರದಲ್ಲಿ ಸುಳ್ಳ ಪ್ರಚಾರ ಮಾಡುತ್ತ ನಾಗಮೋಹನದಾಸ ವರದಿ ಶೆಡ್ಯಲ್ ನ್ಯಾಯಾಲಯಕ್ಕೆ ಸಲ್ಲಿಸದೆ ಮೋಸ ಮಾಡಿರುವುದು ಇಡಿ ರಾಜ್ಯ ಎಲ್ಲ ವರ್ಗದವರಿಗೆ ಬಿಜೆಪಿ ಮಾಡುತ್ತಿರುವ ಹುನ್ನಾರ. ಮತ್ತು ಮುಸಲ್ಮಾನರಿಗೆ ವಿಶೇಷವಾಗಿ 4% ಮೀಸಲಾತಿ ಕಿತ್ತಾಗಿದನ್ನು ವಿರೋಧಿಸಿ ಜೆಡಿಎಸ್ ಮತ್ತು ಎಸ್‍ಡಿಪಿಆಯ್ ಪಕ್ಷಗಳಿಗೆ ಮತನೀಡದೆ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲಿಸಲುಬೇಕೆಂದು ತಿಳಿಸಿದರು
ಈ ಸಂದರ್ಭದಲ್ಲಿ ಮಹೇಶ ನಾಗಣ್ಣವರ, ಅಂಬಣ್ಣ ಅಡವಳಿಕರ, ಬಸವರಾಜ ಕವತಾಳ, ವಿನಾಯಕ ಗುಣಸಾಗರ, ತಮ್ಮಣ್ಣ ಕಾನಗಡ್ಡಿ, ಪರಸರಾಮ ದಿಂಡವಾರ, ಯಶೋಧಾ ಮಹಿಳಾ ಜಿಲ್ಲಾ ಸಂಚಾಲಕರು, ರಾಜು ತೊರವಿ, ರೇಣುಕಾ ಮಾದರ, ಸುಭದ್ರಾ ಮೇಲಿನಮನಿ, ಶರಣು ಸಿಂಧೆ, ಪ್ರಕಾಶ ಗುಡಿಮನಿ, ಮಂಜು ಯಂಟಮಾನ, ರಾಜು ಸಿಂದಗೇರಿ, ಚಂದ್ರಶೇಖರ ಕೆಳಗಿನಮನಿ, ವಿನೋದ ಚೊಳಗಿ, ರವಿ ತಳಕೇರಿ, ರಾಹುತ ಮಾಗೇರ, ಬಸವರಾಜ ಚಲವಾದಿ, ಮುತ್ತು ಬಿದರಿ, ಸುಧೀರ ಚಲವಾದಿ, ರಾಜು ದಿಂಡವಾರ ಮತ್ತಿತರರು ಉಪಸ್ಥಿತರಿದ್ದರು.