
ಬೀದರ್ :ಮಾ.02: ರಾಮಾಯಣ ಎಂಬ ಮಹಾ ಗ್ರಂಥದ ಮೂಲಕ ವಿಶ್ವಕ್ಕೆ ಸಂಸ್ಕøತಿಯ ದರ್ಶನ ಮಾಡಿಸಿದ ಶ್ರೇಯಸ್ಸು ಆದಿಕವಿ ಮಹರ್ಷಿ ವಾಲ್ಮೀಕಿ ಗುರುಗಳಿಗೆ ಸಲ್ಲುತ್ತದೆ ಎಂದು ಮಾಜಿ ಸಚಿವರು, ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕರು, ಜೆಡಿಎಸ್ ಕೋರ್ ಕಮಿಟಿಯ ಅಧ್ಯಕ್ಷರು, ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ಬಂಡೆಪ್ಪ ಖಾಶೆಂಪುರ್ ರವರು ಹೇಳಿದರು.
ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಕಾರಪಾಕಪಳ್ಳಿಯಲ್ಲಿ ಬುಧವಾರ ನಡೆದ ಮಹರ್ಷಿ ವಾಲ್ಮೀಕಿ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಮತ್ತು ಕಳಸರೋಹಣ ಹಾಗೂ ಮೂರ್ತಿ ಉದ್ಘಾಟನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಹರ್ಷಿ ವಾಲ್ಮೀಕಿಯವರು ಸಾವಿರಾರು ವರ್ಷಗಳ ಹಿಂದೆ ರಚಿಸಿದ ರಾಮಾಯಣ ಇಂದಿಗೂ ಆದರ್ಶವಾಗಿದೆ ಎಂದರು.
ನಮ್ಮ ಸಂಸ್ಕøತಿ, ನಮ್ಮ ಸಭ್ಯತೆ, ನಮ್ಮ ನಡವಳಿಕೆ ಇವೇ ನಮ್ಮ ದೇಶದ ಆಸ್ತಿಯಾಗಿವೆ. ನಮ್ಮ ಭಾಗಕ್ಕೂ ರಾಮ ಲಕ್ಷ್ಮಣ ಬಂದು ಹೋಗಿದ್ದಾರೆ ಎಂಬುದಷ್ಟೆ ನಮಗೆ ಗೋತ್ತಿದೆ. ರಾಮ, ಲಕ್ಷ್ಮಣ, ಸೀತೆ, ಲವ ಕುಶ, ಶಬರಿಯಂತವರು ಹೇಗೆ ಇರಬೇಕು ಎಂಬುದನ್ನು ಮಹಾನ್ ಗ್ರಂಥದ ಮೂಲಕ ತಿಳಿಸಿಕೊಟ್ಟ ಮಹಾನ್ ವ್ಯಕ್ತಿ ಮಹರ್ಷಿ ವಾಲ್ಮೀಕಿಯವರಾಗಿದ್ದಾರೆ. ಅಂತಹ ಮಹಾತ್ಮರ ದೇವಸ್ಥಾನ ನಿರ್ಮಿಸಿರುವುದು ಒಳ್ಳೆಯ ಕೆಲಸವಾಗಿದೆ.
ಅಂಬಿಗರ ಚೌಡಯ್ಯರವರು ಈ ಸಮಾಜದ ಶಕ್ತಿ ಏನೆಂಬುದನ್ನು ತೋರಿಸಿಕೊಟ್ಟಿದ್ದಾರೆ. ಮಹಾನ್ ಪುರುಷರು ಅವರವರ ಕಾಲದಲ್ಲಿ ಸಾಧನೆ ಮಾಡಿದ್ದಾರೆ. ಅವರು ಯಾರು ಕೂಡ ಕೇವಲ ಒಂದು ಜಾತಿ, ಒಂದು ಧರ್ಮಕ್ಕೆ ಸೀಮಿತವಾಗಿ ಕೆಲಸ ಮಾಡಿಲ್ಲ. ಮಾನವ ಕುಲದ ಒಳಿತಿಗಾಗಿ ಶ್ರಮಿಸಿದ್ದಾರೆ. ಹಾಗಾಗಿ ನಾವೆಲ್ಲರೂ ಅಂತವರ ತತ್ವಸಿದ್ದಾಂತಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಂಡು ಸಾಗಬೇಕಾಗಿದೆ ಎಂದು ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಹೇಳಿದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಲಿಂಗೋಳ ವಿಠಲಪೂರದ ಮಾತಾ ಮಾಣಿಕೇಶ್ವರಿ ಆಶ್ರಮದ ಪೂಜ್ಯ ಸದ್ಗುರು ಶಾಂತಿಬಾಬಾರವರು, ಹಳ್ಳಿಖೇಡ್ (ಕೆ) ಶ್ರೀ ಮಹರ್ಷಿ ವಾಲ್ಮೀಕಿ ಆಶ್ರಮದ ಪೂಜ್ಯ ದತ್ತಾತ್ರೇಯ ಗುರೂಜೀರವರು, ರೇಕುಳಗಿ ವಾಲ್ಮೀಕಿ ಆಶ್ರಮ (ನಿರ್ಣಾ ಕ್ರಾಸ್) ಪೂಜ್ಯರಾದ ಭಕ್ಕಪ್ಪ ಗುರುಜೀರವರು ವಹಿಸಿದ್ದರು. ಮಾಜಿ ಶಾಸಕರಾದ ಅಶೋಕ್ ಖೇಣಿ, ಕೆಎ????ಐಡಿಸಿ ಅಧ್ಯಕ್ಷರಾದ ಡಾ. ಶೈಲೇಂದ್ರ ಬೆಲ್ದಾಳೆ, ಎಎಪಿಯ ನಸೀಮೊದ್ದೀನ್ ಪಟೇಲ್, ಜಿಲ್ಲಾ ಟೋಕರೆ ಕೋಳಿ ಸಮಾಜ ಸಂಘದ ಅಧ್ಯಕ್ಷರಾದ ಜಗನ್ನಾಥ ಜಮಾದಾರ್, ಪ್ರಮುಖರಾದ ಶಿವರಾಜ ಜಾಗೀರದಾರ, ಸುನೀಲ್ ಖಾಶೆಂಪುರ್, ಅಪ್ಪರಾವ್ ಬ್ಯಾಲಹಳ್ಳಿ, ಸಂತೋಷ ರಾಸೂರು, ಸಂತೋಷ ಚೌಕಿ, ಪುಂಡಲೀಕಪ್ಪ ನಿಂಗಬಾಡಿ, ರಾಜಕುಮಾರ ಬೋರಾಳ್, ಶರಣಪ್ಪ ಖಾಶೆಂಪುರ್, ರವಿ ಗಾರ್ಲೆ, ಅಶೋಕ್ ಕಾಗೆ, ಶಿವರಾಜ ಬಂಬಳಗಿ, ಮಾಣಿಕ್ ನೆಳ್ಗೆರವರು ಸೇರಿದಂತೆ ಅನೇಕರಿದ್ದರು.