
ಜೇವರ್ಗಿ:ಜು.19 : ಈ ವಿಶ್ವಕ್ಕೆ ಶಾಂತಿಯ ಮಂತ್ರ ಸಾರಿದ್ದು, ಸಕಲ ಜೀವರಾಶೀಗಳಿಗು ಲೇಸನ್ನೆ ಬಯಸಬೆಕೇಂದು ಹೆಳಿದ್ದು, ಅಸತ್ಯದಿಂದ ಸತ್ಯದ, ಮಧ್ಯಮ ಮಾರ್ಗದ ಬದುಕಿನೇಡೆಗೆ ಸಾಗಲು ತಿಳಿಸದವರು ಮಹಾಥ್ಮ ಗೌಥಮ ಬುದ್ಧರು ಎಂದು ಶ್ರೀಲಂಕಾದ ಬಂತೇ ಧರ್ಮ ವಿಜಯ ಬಂತೇಜೀ ಉಪಾಸನೆ ನೇಡಿದರು
ಪಟ್ಟಣದ ಡಾ. ಬಿ. ಆರ್. ಅಂಬೇಡ್ಕರ್ ಭವನದ ಆವರಣದಲ್ಲಿ ಮಂಗಳವಾರ ಬೆಳಿಗ್ಗೆ 10 ಕ್ಕೆ ಅರಳಿ ಮರ ನೇಡುವ ಹಾಗೂ ದಮ್ಮ ಉಪಾಸನೆ ಕಾರ್ಯಕ್ರಮ ನಡೆಯಿತು.
ಬಂತೇ ಧರ್ಮವಿಜಯ ಬಂತೇಜೀ ಉಪಾಸನೆ ಮಾಡಿದ ಅವರು ಈ ವಿಶ್ವಕ್ಕೆ ಶಾಂತಿ ಸಂದೇಶ ಸಾರಿದವರು ಗೌಥಮ ಬುದ್ಧರು. ಸತ್ಯಧ ಧರ್ಮ, ಮಧ್ಯಮ ಮಾರ್ಗದ ಧರ್ಮ, ಸಕಲ ಜೀವರಾಶಿಗಳಿಗು ಲೇಸನ್ನೆ ಬಯಸುವ ಧರ್ಮವನ್ನು ನಮಗೆ ಪರಿಚಯಿಸಿದವರು. ಅವರ ತ್ರೀಸರಣ ಪಂಚಶೀಲವನ್ನು ನಾವುಗಳು ಪಾಲಿಸಬೇಕು. ನಮ್ಮ ಕತ್ತಲಿನ ಬದಿಕಿಗೆ ಬೆಳಕು ತೋರಿಧ ಧರ್ಮ ಬೌಧ್ಧ ಧರ್ಮ. ನಾನು ಈ ಭಾರತ ದೇಶಕ್ಕೆ ಬಂದಿರುವುದ ತುಂಬಾ ಸಂತೋಷ ತಂದಿದೆ. ಬುದ್ದರ ನಾಡು ಭಾರತ, ಈಡಿ ಪ್ರಪಂಚವೆ ಭಾರತವನ್ನು ಬುದ್ಧ ಭೂಮಿ ಎಂದು ಗುರುತಿಸುತ್ತೆ. ಬುದ್ದರ ತತ್ವ ಸಿದ್ದಾಂತವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಅಣದೂರ ಬುದ್ಧ ವಿಹಾರದ ಬಂತೇಜೀ ವರಜ್ಯೋತಿ ಬಂತೇಜೀ, ಭಾರತಿಯ ಬೌದ್ಧ ಮಹಾಸಭಾ ತಾಲೂಕ ಅಧ್ಯಕ್ಷ ಮಲ್ಲಣ ಕೋಡಚಿ, ಜಿ. ಪಂ. ಮಾಜಿ ಸದಸ್ಯರುಗಳಾದ ಚಂದ್ರಶೇಖರ ಹರನಾಳ, ಮರೇಪ್ಪ ಬಡಿಗೇರ, ಮುಖಂಡ ಭೀಮರಾಯ ನಗನೂರ, ಸುಭಾಷ ಚನ್ನೂರ, ಪುಂಡಲಿಕ್ ಗಾಯಕ್ವಾಡ್, ರಾಜಶೇಖರ ಶಿಲ್ಪಿ, ರಾಯಪ್ಪ ಬಾರಿಗೀಡ, ಮಲ್ಲಿಕಾರ್ಜುನ ಹಬ್ಬಳ್ಳಿ, ರವಿಕುಮಾರ ಕುಳಗೇರಿ, ಶ್ರೀಹರಿ ಕರಕಿಹಳ್ಳಿ, ಯಶವಂತ ಬಡಿಗೇರ, ಸಂಗಮೇಶ ಕೊಂಬಿನ್, ಮಹೇಶ ಕೋಕಿಲೆ, ಸಿದ್ದು ಮೈಂದ್ರಗಿ, ರಾಯಪ್ಪ ಕೊಳಕೂರ, ಶ್ರೀಮಂತ ಕಿಲೇದಾರ, ಮಿಲಿಂದ ಸಾಗರ, ಶರಣು ಬಡಿಗೇರ, ಸಿದ್ದು ಶರ್ಮಾ, ಭೀಮಾಶಂಕರ ಬಡಿಗೇರ, ಕಿರಣ ದೊಡ್ಮನಿ, ನಿತೀಷ, ಗಿರೀಶ ಕೋಡಚಿ ಇದ್ದರು.