ವಿಶ್ವಕ್ಕೆ ಶಾಂತಿ ಸಂದೇಶ ಸಾರಿದ ಭಗವಾನ ಮಹಾವೀರ

ಶಹಾಬಾದ:ಎ.4:ಜೈನ ಧರ್ಮದ 24ನೇ ತೀರ್ಥಂಕರರು ಭಗವಾನ ಮಹಾವೀರ ಇವರನ್ನು ವರ್ಧಮಾನ, ಸನ್ಮತಿ ನಾಯಕ, ವೀರ, ಮಹಾ ವೀರಾಧಿವೀರ, ಶ್ರಮನ ಹೀಗೆ ಕರೆಯುತ್ತಾರೆ. ಇಡೀ ವಿಶ್ವಕ್ಕೆ ಶಾಂತಿ ಮಂತ್ರ ಸಂದೇಶ ಸಾರುವ ಮೂಲಕ ಮಾನವೀಯತೆಯಲ್ಲಿ ಎತ್ತಿಹಿಡಿದ ಮಹಾನ ಶಕ್ತಿಯಾದರು ಎಂದು ಸವಿತಾ ಬೆಳಗುಂಪಿ ಹೇಳಿದರು. ಅವರು ನಗರದ ಚವ್ಹಾಣ್ ಶಿಕ್ಷಣ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಶ್ರೀಮತಿ ನಾಗಮ್ಮ ಚನ್ನಮ್ಮ ಇಂಗಿನಶೆಟ್ಟಿ ಹಾಗೂ ನಂದ ಗೋಕುಲ ಶಾಲೆಯಲ್ಲಿ ನಡೆದ ಭಗವಾನ ಮಹಾವೀರ ಜಯಂತಿ ಚಾಲನೆ ನೀಡಿ ಮಾತನಾಡಿದರು. ಭಗವಾನ ಮಹಾವೀರರು ಆಧ್ಯಾತ್ಮೀಕ ಮಾರ್ಗದರ್ಶಕರಾಗಿದ್ದರು. ಇವರ ಬೋಧನೆಗಳಲ್ಲಿ 5 ಅಂಶಗಳಾದ ಸತ್ಯ, ಅಹಿಂಸೆ, ಆಚೌರ್ಯ, ಬ್ರಹ್ಮಚರ್ಯ, ಅಪರಿಗ್ರಹ ಇವು ಮಹಾವ್ರತಗಳಾಗಿದರು. ಪ್ರತಿಯೊಬ್ಬರು ಎಲ್ಲ ಜೀವಿಗಳನ್ನು ಪ್ರೀತಿ ಮತ್ತು ಗೌರವದಿಂದ ಕಾಣಬೇಕು ಎಂದು ಮಹಾವೀರರು ಇಡೀ ವಿಶ್ವಕ್ಕೆ ಅತೀ ಅವಶ್ಯಕವಾಗಿ ಸಂದೇಶವನ್ನು ನೀಡಿದರು. ಹಿರಿಯ ಶಿಕ್ಷಕಿ ಪಾರ್ವತಿ ಚಟ್ಟಿ ಮಾತನಾಡಿ ಮಹಾವೀರರು ಅಹಿಂಸೆಯ ಪ್ರತಿಪಾದಕರು. ಮಹಾವೀರರ ಜಯಂತಿಯನ್ನು ಆಚರಿಸುವ ಮೂಲ ಉದ್ದೇಶ ಪ್ರತಿಯೊಬ್ಬರೂ ಅಹಿಂಸಾ ಮಾರ್ಗದಲ್ಲಿ ನಡೆಯಬೇಕು ಎಂದು ಸರ್ವರಿಗೂ ತಿಳಿಸಿ ಕೊಡುವುದಾಗಿದೆ ಎಂದು ಹೇಳಿದರು. ಶಿಕ್ಷಕಿಯರಾದ ಸುಜಾತ ಕುಂಬಾರ, ನಿರ್ಮಲಾ ಬಿರಾದರ, ಲಕ್ಷ್ಮೀ, ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದರು.