ವಿಶ್ವಕ್ಕೆ ಭಕ್ತಿ ಮಾರ್ಗ ತೋರಿಸಿದ ಸಂತ ಶ್ರೇಷ್ಠ ಕನಕದಾಸರು


ನವಲಗುಂದ,ಡಿ.1: ಇಡೀ ವಿಶ್ವಕ್ಕೆ ಭಕ್ತಿ ಮಾರ್ಗ ತೋರಿಸಿ ಬದುಕಿ ಬಾಳಿದ ಸಂತ ಶ್ರೇಷ್ಠ ಕನಕದಾಸರ ಆದರ್ಶವನ್ನು ಇಂದಿನ ಯುವಕರು ಅಳವಡಿಸಿಕೊಂಡು ಸುಭದ್ರ ಸಮಾಜ ನಿರ್ಮಿಸಲು ಕೈ ಜೋಡಿಸಬೇಕು ಎಂದು ಶಾಸಕ ಎನ್ ಎಚ್ ಕೋನರಡ್ಡಿ ಹೇಳಿದರು.
ಅವರು ತಾಲ್ಲೂಕಾ ಆಡಳಿತದಿಂದ ತಹಶೀಲ್ದಾರ್ ಕಚೇರಿಯಲ್ಲಿ ಹಮ್ಮಿಕೊಂಡ ದಾಸ್ ಶ್ರೇಷ್ಠ ಕನಕ ಜಯಂತೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಇದೆ ವೇಳೆ ಹಾಲುಮತ ಸಮಾಜದಿಂದ ಕನಕ ಕಲ್ಯಾಣ ಮಂಟಪಕ್ಕೆ ಸರಕಾರದಿಂದ ಹಣ ಮಂಜೂರು ಮಾಡಿಸುವಂತೆ ಶಾಸಕರಿಗೆ ಮನವಿ ಸಲ್ಲಿಸಿದರು ಮನವಿ ಸ್ವೀಕರಿಸಿದ ಶಾಸಕರು ಕನಕ ಭವನ್ ನಿರ್ಮಾಣ ಮಾಡಲು ಸೂಕ್ತ ಜಾಗೆ ನೀಡಿದ್ದಲ್ಲಿ ಪಟ್ಟಣದೊಂದಿಗೆ ಪ್ರತಿ ಗ್ರಾಮಗಳಲ್ಲೂ ಕನಕ ಭವನ ನಿರ್ಮಾಣಕ್ಕೆ ಸರ್ಕಾರದಿಂದ ಸಹಾಯ ಮಾಡಲು ಸಿದ್ದನಿದ್ದೇನೆ ಎಂದು ಹೇಳಿದರು.
ತಹಶೀಲ್ದಾರ್ ಸುಧೀರ್ ಸಾಹುಕಾರ್ ಮಾತನಾಡಿ ಕೀರ್ತನೆಗಳ ಮೂಲಕ ಜನರಲ್ಲಿ ಭಕ್ತಿ-ಭಾವ ಮೂಡಿಸಿದ ಕನಕದಾಸರ ಸಾಹಿತ್ಯವನ್ನು ಎಲ್ಲರೂ ಓದಬೇಕು. ಅದರ ಮೂಲಕ ಸುಸಂಸ್ಕೃತ ದೇಶ ನಿರ್ಮಾಣ ಮಾಡಲು ಶ್ರಮಿಸಬೇಕು ಎಂದರು.
ಈ ಸಂದರ್ಭದಲ್ಲಿ ತಹಸೀಲ್ದಾರ್ ಸುಧೀರ್ ಸಾಹುಕಾರ್, ವೆಂಕಟೇಶ ನಾಗನೂರು, ಭಾಗ್ಯಶ್ರೀ ಜಾಗೀರದಾರ, ಶಿವಾನಂದ ಮಲ್ಲಾಡ, ಪ್ರೇಮಾ ಬಸವರಾಜ್ ಹತ್ತಿ ಕಟಗಿ, ಪ್ರಕಾಶ್ ಶಿಗ್ಲಿ, ಮಹಾಂತೇಶ್ ಭೋವಿ, ಜೀವನ್ ಪವಾರ ಸೇರಿದಂತೆ ಸಮಾಜದ ಬಂದುಗಳು, ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.