ವಿಶ್ವಕ್ಕೆ ಪ್ರಜಾಪ್ರಭುತ್ವದ ವ್ಯವಸ್ಥೆ ಪರಿಚಯಿಸಿದ್ದು ಕನ್ನಡ ನಾಡು; ಬಿ. ವಾಮದೇವಪ್ಪ. 

ಸಂಜೆವಾಣಿ ವಾರ್ತೆ

ದಾವಣಗೆರೆ.ಜು.೨; ನಗರದ ಈಶ್ವರಮ್ಮ ಶಾಲೆಯಲ್ಲಿ ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಬಿ. ವಾಮದೇವಪ್ಪನವರು 2023-24ನೇ ಶೈಕ್ಷಣಿಕ ಸಾಲಿನಲ್ಲಿ ಆಯ್ಕೆಯಾದ ಮಂತ್ರಿಮAಡಲವು ಯಶಸ್ವಿಯಾಗಿ ಕಾರ್ಯನಿರ್ವಹಿಸಲಿ ಮುಂದಿನ ವರ್ಷದ ಮಕ್ಕಳಿಗೆ ಮಾದರಿಯಾಗಲಿ ಎಂದು ಶುಭ ಹಾರೈಸಿದರು. ಶಾಲಾ ಮಂತ್ರಿ ಮಂಡಲದ ಪ್ರತಿಜ್ಞಾ ಸ್ವೀಕಾರ ಮತ್ತು ವಿದ್ಯಾರ್ಥಿ ಸಂಘಗಳ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು ನೂತನ ಸಚಿವ ಸಂಪುಟದ ನೂತನ ಮುಖ್ಯ ಮಂತ್ರಿಗಳು ಪ್ರಜಾಪ್ರಭುತ್ವದ ವ್ಯವಸ್ಥೆಯಂತೆ ಆಯ್ಕೆಯಾಗಿದ್ದಾರೆ. ಇಡೀ ವಿಶ್ವಕ್ಕೆ ಪ್ರಜಾಪ್ರಭುತ್ವದ ವ್ಯವಸ್ಥೆಯನ್ನು ಪರಿಚಯಿಸಿದ ನಾಡು ನಮ್ಮ ಕನ್ನಡ ನಾಡು. 12ನೇ ಶತಮಾನದಲ್ಲಿ ಅನುಭವ ಮಂಟಪದಲ್ಲಿ ಎಲ್ಲ ಶಿವಶರಣರು ಮುಕ್ತವಾಗಿ ಚರ್ಚಿಸಲು ಅವಕಾಶವಿತ್ತು. ಅನುಭವ ಮಂಟಪವನ್ನು ಜಗತ್ತಿನ ಮೊದಲನೇ ಪಾರ್ಲಿಮೆಂಟ್ ಎಂದು ಕರೆಯಲಾಗಿದೆ. ಬ್ರಿಟಿಷರ ಗುಲಾಮಗಿರಿಯಿಂದ ಮುಕ್ತವಾಗಿ ಸ್ವತಂತ್ರ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸ್ವತಂತ್ರವಾಗಿ ಶಾಂತಿಯುತವಾಗಿ ಬದುಕುತ್ತಿದ್ದೇವೆ. ಅದರ ಪ್ರತಿರೂಪವೇ ನಿಮ್ಮ ಶಾಲಾ ಮಂತ್ರಿಮAಡಲವಾಗಿದೆ. ಗುರುಗಳ ಮಾರ್ಗದರ್ಶನದಂತೆ ನಡೆದು ಶಾಲೆಗೆ ಪೋಷಕರಿಗೆ ದೇಶಕ್ಕೆ ಕೀರ್ತಿ ತರುವಂತಹ ಮಕ್ಕಳಾಗಿರಿ ಎಂದು ತಿಳಿಸಿದರು. ಪಠ್ಯ ಮತ್ತು ಪಠ್ಯೇತ್ತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಸರ್ವತೋಮುಖ ಬೆಳವಣಿಗೆಯನ್ನು ಹೊಂದಿ ಉತ್ತಮ ಚಾರಿತ್ರö್ಯವನ್ನು ಬೆಳೆಸಿಕೊಳ್ಳುವಂತೆ ಮಕ್ಕಳಿಗೆ ಕರೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶಾಲಾಡಳಿತ ಮಂಡಳಿಯ ಅಧ್ಕಕ್ಷರಾದ ಶ್ರೀಮತಿ ಕೆ.ಆರ್.ಸುಜಾತ ಕೃಷ್ಣ ಮಾತನಾಡಿ, ಮಂತ್ರಿಮAಡಲದ ಎಲ್ಲಾ ವಿದ್ಯಾರ್ಥಿಗಳು ಪ್ರಮಾಣ ವಚನ ಸ್ವೀಕರಿಸಿದಂತೆ, ಮೌಲ್ಯಗಳನ್ನು ಅಳವಡಿಸಿಕೊಂಡು ಬದುಕಬೇಕು, ಮಂತ್ರಿಮAಡಲದ ಉದ್ದೇಶವನ್ನು ಸಾರ್ಥಕ ಮಾಡಿಕೊಂಡು ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿಉತ್ತಮ ಫಲಿತಾಂಶ ಪಡೆಯಿರಿ. ಆಡಳಿತ ಪಕ್ಷ ಏನೇ ಮಾಡಿದರೂ ಅದನ್ನು ವಿರೋಧಿಸುವುದು ವಿರೋಧ ಪಕ್ಷದ ಕೆಲಸವಾಗಿರುತ್ತದೆ. ಆದರೆ ಶಾಲಾ ಮಂತ್ರಿಮAಡಲದ ಮುಖ್ಯಮಂತ್ರಿಗಳು ಮತ್ತು ವಿರೋಧ ಪಕ್ಷದವರು ಒಂದಾಗಿ ಶಾಲೆಯ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದೀರಿ. ಭಗವಾನ್ ಶ್ರೀ ಸತ್ಯಸಾಯಿ ಬಾಬಾರವರ ಸಂದೇಶಗಳನ್ನು ಪಾಲಿಸಿರಿ ಬಾಬಾರವರು ಹೇಳುವಂತೆ ಎಲ್ಲರನ್ನು ಪ್ರೀತಿಸಿ ಎಲ್ಲರ ಸೇವೆಯನ್ನು ಮಾಡಿರಿ. ಶಾಲೆಯ್ಲಲಿ ಮೌಲ್ಯ ಶಿಕ್ಷಣವನ್ನು ಪಡೆಯುತ್ತಿರುವ ನೀವು ನಿಮ್ಮ ಬದುಕಿನಲ್ಲಿ ಮೌಲ್ಯಗಳನ್ನು ಅಳವಡಿಸಿಕೊಂಡು ಉತ್ತಮ ನಾಗರಿಕರಾಗಿ ಬಾಳುವಂತವರಾಗಿರಿ ಎಂದು ಮಕ್ಕಳಿಗೆ ಹಿತನುಡಿಗಳನ್ನು ತಿಳಿಸಿ ಅಧ್ಯಕ್ಷೀಯ ಭಾಷಣವನ್ನು ಮಾಡಿದರು. ಚುನಾವಣೆಯಲ್ಲಿ ಅತಿ ಹೆಚ್ಚು ಮತಗಳನ್ನು ಗಳಿಸಿದ 10 ನೇ ತರಗತಿಯ ವಿದ್ಯಾರ್ಥಿನಿಯಾದ ಕು. ಶ್ರೀದೇವಿ ಹೆಚ್ ಎಂ. ಮುಖ್ಯ ಮಂತ್ರಿಯಾಗಿ, 10 ನೇ ತರಗತಿಯ ವಿದ್ಯಾರ್ಥಿ ವಿರೋಧ ಪಕ್ಷದ ನಾಯಕನಾಗಿ ಕು. ಸುಭಾಷ್ ಆರ್ ಎಲ್. ಆಯ್ಕೆಯಾಗಿದ್ದರು. ಸಹ ಶಿಕ್ಷಕಿಯಾದ ಶ್ರೀಮತಿ ಹೇಮಲತಾ ಚುನಾವಣಾ ಪ್ರಕ್ರಿಯೆಯನ್ನು ವಿವರಿಸಿದರು. 25 ಸಚಿವರನ್ನೊಳಗೊಂಡ ಶಾಲಾ ಮಂತ್ರಿ ಮಂಡಲದಲ್ಲಿ ರಾಜ್ಯಪಾಲರಾಗಿ ಪ್ರಾಂಶುಪಾಲರಾದ  ಕೆ.ಎಸ್.ಪ್ರಭುಕುಮಾರ್, ಸಭಾಪತಿಯಾಗಿ ಉಪಪ್ರಾಂಶುಪಾಲರಾದ ಶ್ರೀಮತಿ ಶಶಿರೇಖಾ ಜಿ.ಎಸ್., ಸಂಪುಟ ಕಾರ್ಯದರ್ಶಿಯಾಗಿ ಸಹ ಶಿಕ್ಷಕಿಯಾದ ರೋಹಿಣಿ ಎಂ. ಭಾವಿ ನಾಯಕರಾಗುವ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾದರು. ಸಹಶಿಕ್ಷಕಿ ಶ್ರೀಮತಿ. ರಂಜಿನಿ ವಿದ್ಯಾರ್ಥಿ ಸಂಘಗಳನ್ನು ಪರಿಚಯಿಸಿದರು. ರಾಜ್ಯಪಾಲರಾದ ಪ್ರಾಂಶುಪಾಲರು ಮಂತ್ರಿಮAಡಲದ ಎಲ್ಲ ಮಂತ್ರಿಗಳಿಗೆ ಪ್ರಮಾಣ ವಚನ ಬೋಧನೆ ಮಾಡಿದರು. ಆದರಂತೆ, ನೂತನ ಮುಖ್ಯಮಂತ್ರಿ ಮತ್ತು ಮಂತ್ರಿಮAಡಲದ ಎಲ್ಲ ಮಂತ್ರಿಗಳು ಪ್ರಮಾಣ ಸ್ವೀಕಾರ ಮಾಡಿದರು.ಕಾರ್ಯಕ್ರಮದಲ್ಲಿ ಈಶ್ವರಮ್ಮ ಟ್ರಸ್ಟ್ (ರಿ) ನ ಕಾರ್ಯದರ್ಶಿಗಳಾದ ಜಿ. ಆರ್ ವಿಜಯಾನಂದ್ ಉಪಸ್ಥಿತರಿದ್ದರು. ಕಾರ್ಯಕ್ರಮದ ಸ್ವಾಗತ ಶ್ರೀಮತಿ ಶಶಿರೇಖಾ ಜಿ.ಎಸ್. ಹಾಗೂ ವಂದನಾರ್ಪಣೆ ಶ್ರೀಮತಿ ಸವಿತ ಎನ್ ಎಸ್. ನಡೆಸಿಕೊಟ್ಟರು. ಶ್ರೀಮತಿ. ಶ್ರೀದೇವಿ ಬಿ. ಕಾರ್ಯಕ್ರಮ ನಿರೂಪಿಸಿದರು.