
ಸಂಜೆವಾಣಿ ವಾರ್ತೆ
ಸಂಡೂರು :ಮೇ: 19: ತೋರಣಗಲ್ಲು ಗ್ರಾಮದ ಸೂರ್ಯನಾರಾಯಣ ರಾವ್ ಭವನದಲ್ಲಿ 138ನೇ ವಿಶ್ವ ಕಾರ್ಮಿಕರ ದಿನಾಚರಣೆ ಆಚರಣೆ ಮಾಡಲಾಯಿತು. ಧ್ವಜಾರೋಹಣವನ್ನು ಹಿರಿಯ ಕಾರ್ಮಿಕರ ಮುಖಂಡರಾದ ರಾಮಲಿ ರವರು ನೆರವೇರಿಸಿದರು. ಮುಖ್ಯ ಅಥಿತಿಗಳಾಗಿ ಭಾಗವಹಿದ ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜೆ. ಎಂ. ಚನ್ನಬಸಯ್ಯ ಮಾತನಾಡಿ ಮೇ ದಿನವು ಸಮಾಜಕ್ಕೆ ಕಾರ್ಮಿಕರ ಕೊಡುಗೆ ಹಾಗೂ ತ್ಯಾಗ ಬಲಿದಾನವನ್ನು ನೆನೆಯುವ ದಿನವಾಗಿದೆ. ವಿಶ್ವ ಕಾರ್ಮಿಕರ ದಿನಾಚರಣೆ 8 ಘಂಟೆಯ ಕೆಲಸದ ಅವಧಿಯ ಬೇಡಿಕೆಯನ್ನು ಮುಂದಿಟ್ಟುಕೊಂಡು 1886 ರ ಮೇ ಒಂದರಂದು ಅಮೇರಿಕಾದ ಚಿಕಾಗೋದ ನಗರದಲ್ಲಿ ಕಾರ್ಮಿಕ ಸಂಘಟನೆಗಳ ನೇತೃತ್ವದಲ್ಲಿ ಲಕ್ಷಾಂತರ ಸಂಖ್ಯೆಯ ಶೋಷಿತ ಕಾರ್ಮಿಕರು ನಡೆಸಿದ ಅಭೂತಪೂರ್ವ ಹೋರಾಟ ದಿನ. ಕಾರ್ಮಿಕರ ಕಾನೂನುಗಳ ಬದಲಾವಣೆ, ಕಾರ್ಮಿಕರ ಹಕ್ಕುಗಳ ಉಲ್ಲಂಘನೆ, ಕೆಲಸದ ಅವಧಿ ಹೆಚ್ಚಳ ಮುಂತಾದ ಕಾರ್ಮಿಕ ವಿರೋಧಿ ನೀತಿಗಳನ್ನು ಆಳುವ ಸರ್ಕಾರಗಳು ಅನುಸರಿಸುತ್ತಿವೆ. ನೂರಾರು ವರ್ಷಗಳ ತ್ಯಾಗ ಬಲಿದಾನಗಳಿಂದ ಪಡೆದ ಹಕ್ಕುಗಳನ್ನು ಕಿತ್ತುಕೊಳ್ಳಲಾಗುತ್ತಿದೆ. ಇದರ ಬಗ್ಗೆ ಜಾಗೃತಿ ಮೂಡಿಸಿ ಕಾರ್ಮಿಕರ ಹಕ್ಕುಗಳ ರಕ್ಷಣೆಗಾಗಿ ಬಲಿಷ್ಠ ಐಕ್ಯ ಚಳುವಳಿ ನಡೆಸಲಾಗುವದು ಎಂದು ತಿಳಿಸಿದರು. ಸಿಪಿಐ ಎಂ. ತಾಲೂಕು ಕಾರ್ಯದರ್ಶಿ ಎ. ಸ್ವಾಮಿ ಮೇ ದಿನದ ಶುಭಕೋರಿ ಮಾತನಾಡಿದರು. ಕಟ್ಟಡ ನಿರ್ಮಾಣ ಕಾರ್ಮಿಕರ ಸಂಘದ ತಾಲೂಕ ಅಧ್ಯಕ್ಷ ವಿ. ದೇವಣ್ಣ ವಿಶ್ವ ಕಾರ್ಮಿಕರ ದಿನಾಚರಣೆಯ ಇತಿಹಾಸ ತಿಳಿಸುತ್ತಾ ಕಾರ್ಮಿಕರ ಚಳುವಳಿ ನಡೆದು ಬಂದ ವಿವರ ತಿಳಿಸಿದರು. ತಾಲ್ಲೂಕಿನ ಸಂಚಾಲಕ ಮಲ್ಲಿಕಾರ್ಜುನ ಸ್ವಾಗತಕೋರಿ ಕಾರ್ಯಕ್ರಮ ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ಪಂಪನ ಗೌಡ, ಆಙಈI ತಾಲ್ಲೂಕ ಕಾರ್ಯದರ್ಶಿ ಶಿವರೆಡ್ಡಿ, ಹಳೆ ದರೋಜಿ ತಿಮ್ಮಪ್ಪ, ಗಂಗಮ್ಮ, ಹಂಪಮ್ಮ ಕೆ ದೇವ ಕೆ. ಸಿದ್ದಪ್ಪ, ಕೆ. ಸ್ವಾಮಿ, ಅಖಿಲ ಕಾರ್ಯಕರ್ತರು ಉಪಸ್ಥಿತರಿದ್ದರು