ವಿಶ್ವಕಲಾವಿದರ ದಿನಾಚರಣೆ ಕಲಾಸಾಧಕರಿಗೆ ಸನ್ಮಾನ ಚಿತ್ರಕಲಾ ಪ್ರದರ್ಶನ

ಧಾರವಾಡ ಎ.16-ಪ್ರೊ. ಎಸ್.ಸಿ. ಪಾಟೀಲ ಆರ್ಟ ಗ್ಯಾಲರಿಯಲ್ಲಿ ರಾಷ್ಟ್ರೀಯ ದೃಶ್ಯಕಲಾ ಆಕಾಡೆಮಿ ವತಿಯಿಂದ ವಿಶ್ವಕಲಾವಿದರ ದಿನಾಚರಣೆ ನಿಮಿತ್ಯ ಕಲಾಸಾಧಕರಿಗೆ ಸನ್ಮಾನ ಹಾಗೂ ಚಿತ್ರಕಲಾ ಪ್ರದರ್ಶನ ಜರುಗಿತು.
ವಿಶ್ವಕಲಾವಿದರ ದಿನಾಚರಣೆಯ ಉದ್ಘಾಟನೆಯನ್ನು ಹಿರಿಯ ಕಲಾವಿದರಾದ ಸುರೇಶ ಹಾಲಬಾವಿಯವರು ನೆರವೇರಿಸಿದರು.ಮೇಲಿಂದ ಮೇಲೆ ಇಂತಹ ಕಾರ್ಯಕ್ರಮಗಳು ಜರುಗಬೇಕು ಅವು ಯುವ ಕಲಾವಿದರಿಗೆ ಸ್ಪೂರ್ತಿಯನ್ನು ನೀಡುತ್ತವೆ ಎಂದು ಮಾತನಾಡಿದರು. ಚಿತ್ರಕಲಾ ಪ್ರದರ್ಶನದ ಉದ್ಘಾಟನೆಯನ್ನು ಹಿರಿಯ ಕಲಾವಿದರಾದ ಎಮ್.ಎಸ್. ಚೌದರಿಯವರು ನೆರವೇರಿಸಿ ಕಲಾವಿದನಿಗೆ ಭಾವ ಮತ್ತು ಚಿತ್ತ ಕೂಡಿದಾಗ ಉತ್ತಮ ಕಲಾಕೃತಿ ಮೂಡಿ ಬರುತ್ತದೆ ಎಂದು ನುಡುದರು. ಮುಖ್ಯ ಅಥಿತಿಗಳಾಗಿ ಹಿರಿಯ ಕಲಾವಿದರಾದ ಜೇ.ವಿ. ಕಮ್ಮಾರ. ಎಫ್.ವಿ. ಚಿಕ್ಕಮಠ. ಉಪಸ್ಥತರಿದ್ದರು . ಡಿ. ವಿ. ಹಾಲಭಾವಿ ಪ್ರಶಸ್ತಿ ಪುರಸ್ಕøತರಾದ ಹಿರಿಯ ಕಲಾವಿದರಾದ ಈಶ್ವರ ಎನ್. ಜೋಶಿ. ಹಾಗೂ ಪಿಎಚ್.ಡಿ ಪದವಿ ಪಡೆದವರಾದ ಡಾ. ಬಸವರಾಜ ಎಚ್. ಕುರಿಯವರು. ಹಾಗೂ ಡಾ. ಸಿ.ವಿ ಬಡಿಗೇರ ಇವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರೋ.ಎಸ್.ಸಿ. ಪಾಟೀಲ ವಿಶ್ರಾಂತ ವಿಶೇಷಾಧಿಕಾರಿಗಳು ಕರ್ನಾಟಕ ಲಲಿತಕಲಾ ವಿಶ್ವವಿದ್ಯಾಲಯ ಬದಾಮಿ ಇವರು ಅಧ್ಯಕ್ಷೀಯ ನುಡಿಗಳನ್ನಾಡುತ್ತಾ ಲಿಯೋ ನಾರ್ಡೋ ಡ. ವಿಂಚಿಯವರ ಸಾಧನೆ ಕಲಾವಿದರಿಗೆ ಮಾದರಿಯಾಗಿದೆ. ಕಲಾಸಾಧಕರನ್ನು, ಕಲಾವಿದರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಈ ರೀತಿಯ ಕಾರ್ಯಕ್ರಮಗಳು ಮೇಲಿಂದ ಮೇಲೆ ಜರಗುತ್ತಿರಬೇಕು ಎಂದರು. ಡಾ. ಬಿ.ಎಮ್. ಪಾಟೀಲ ಇವರು ಸ್ವಾಗತಿಸಿದರು. ಬಿಎಸ್.ಬಿ ಗೌಡರ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಹಿರಿಯ ಕಲಾವಿದರಾದ ಡಿ. ಕೆ. ಕಾಮಕರ. ಜೆ.ಸಿ. ಕೋಟೂರ. ಡಾ. ವೈಶಾಲಿ ಕಾಂಬಳೆ. ಶರಣಕುಮಾರ ಹೆಡೆ. ಶರಣು ವಿಭೂತಿ. ಹಾಗೂ ಮಾಂತೇಶ ಹಿರೇಮಠ ಮುಂತಾದ ಕಲಾವಿದರು ಉಪಸ್ಥಿತರಿದ್ದರು.