ವಿಶ್ವಕರ್ಮ ಸಮುದಾಯ ಭವನದಲ್ಲಿ ಸರಳವಾಗಿ ಜಯಂತಿ ಆಚರಣೆ

ಹಗರಿಬೊಮ್ಮನಹಳ್ಳಿ:ಸೆ.18 ಪಟ್ಟಣದ ವಿಶ್ವಕರ್ಮ ಸಮುದಾಯ ಭವನದ ಅಮರ ಶಿಲ್ಪಿ ಜಕಣಾಚಾರಿ ವೇದಿಕೆಯಲ್ಲಿ ಶುಕ್ರವಾರ ವಿಶ್ವಕರ್ಮ ಜಯಂತ್ಯೋತ್ಸವನ್ನು ಸರಳವಾಗಿ ಆಚರಿಸಲಾಯಿತು.
ಶ್ರೀವಿರಾಟ ವಿಶ್ವಕರ್ಮ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ ಬಳಿಕ, ಯುವ ಘಟಕದ ಅಧ್ಯಕ್ಷ ಬಿ.ಬಸವರಾಜ ಮಾತನಾಡಿ, ಸಮುದಾಯವು ನಾನಾ ವೃತ್ತಿಗಳನ್ನು ಆಯ್ಕೆಮಾಡಿಕೊಂಡು ಚದುರಿದ್ದಾರೆ. ವೃತ್ತಿ ಏಟಿಇ ಇರಲಿ ಅದು ಹೊಟ್ಟೆಪಾಡಿಗಾಗಿ, ಒಗ್ಗಟ್ಟಾಗಿ ಸಮುದಾಯದ ಪ್ರತಿಯೊಬ್ಬರು ಸ್ವಇಚ್ಛೆಯಿಂದ ಪಾಲ್ಗೊಳ್ಳಬೇಕು ಆಗಲೇ ಸಮುದಾಯದ ಏಳ್ಗೆಗಾಗಿ ಚಚೆಗಳು ನಡೆಯಬೇಕು, ಸಮುದಾಯದ ಮಕ್ಕಳು ಶೈಕ್ಷಣಿಕವಾಗಿ ಮತ್ತು ಆರ್ಥಿಕವಾಗಿ ಸಮಾಜಮುಖಿಯಾದಲ್ಲಿ ಸಮಾಜದಲ್ಲಿ ಗೌರವ ದೊರೆಯುತ್ತದೆ ಎಂದರು.
ವಿಶ್ವಕರ್ಮ ಸಮುದಾಯದ ತಾಲೂಕು ಅಧ್ಯಕ್ಷ ಲಕ್ಷ್ಮಣ, ಉಪಾಧ್ಯಕ್ಷ ಬಡಿಗೇರ್ ನಾಗಪ್ಪ, ಸಮುದಾಯದ ನೌಕರರ ಸಂಘದ ಅಧ್ಯಕ್ಷ ನಿವೃತ್ತ ಶಿಕ್ಷಕ ಎ.ಮೌನೇಶ, ಮಾಜಿ ಅಧ್ಯಕ್ಷ ಸಿದ್ದಪ್ಪ, ಬಿ.ಜಿ.ಬಡಿಗೇರ್, ಕೆ.ಮಂಜುನಾಥ, ಹೋಟಲ್ ಸಿದ್ದಣ್ಣ, ಬಿ.ಮಾನಪ್ಪ ಆಚಾರಿ, ವೀರೇಶ್, ರಾಘವೇಂದ್ರ, ಚಿಂತ್ರಪಳ್ಳಿ ಮಂಜುನಾಥ, ಸಿದ್ದರಾಮ್ ಆಚಾರಿ, ಧನಂಜಯ, ಮಾರುತಿ ಆಚಾರಿ, ಬಡಿಗೇರ್ ನಿಂಗಪ್ಪ, ನಕ್ಷತ್ರಪ್ಪ ಹಾಗೂ ಗಣೇಶಪ್ಪ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.
ಕುಮಾರ್ ಆಚಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ಶಿವಪ್ರಕಾಶ, ಎಸ್.ವೀರಣ್ಣ ಆಚಾರಿ ನಿರ್ವಹಿಸಿದರು.