ವಿಶ್ವಕರ್ಮ ಸಮುದಾಯ ಕೊಡುಗೆ ಅಪಾರ

ಚನ್ನಪಟ್ಟಣ.ಸೆ೧೯: ಪರಿಸರದ ಸುಂದರತೆ ಮತ್ತು ಸಮಾಜದಲ್ಲಿನ ಎಲ್ಲಾ ಸಮುದಾಯಕ್ಕೆ ವಿಶ್ವಕರ್ಮ ಸಮುದಾಯದ ಕೊಡುಗೆ ಅಪಾರವಾಗಿದೆ ಎಂದು ಗ್ರೇಡ್ ತಹಸೀಲ್ದಾರ್ ಲಕ್ಷ್ಮಿದೇವಮ್ಮ ಅವರು ಬಣ್ಣಿಸಿದರು.
ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಪಟ್ಟಣದ ತಾಲೂಕು ಕಚೇರಿಯಲ್ಲಿ ಆಯೋಜಿಸಿದ್ದ ವಿಶ್ವಕರ್ಮ ಜಯಂತಿ ಸಮಾರಂಭದಲ್ಲಿ ಅವರು ಮಾತನಾಡಿದರು. ವಿಶ್ವಕರ್ಮ ಸಮುದಾಯ ಸಮಾಜದಲ್ಲಿ ಐದು ವಿಭಾಗದಲ್ಲಿ ಕೆಲಸ ಮಾಡುವ ಮೂಲಕ ಪ್ರಕೃತಿಗೆ ಸುಂದರತೆಯನ್ನು ನೀಡಿದ್ದಾರೆ. ನಮ್ಮ ದೇಶದಲ್ಲಿನ ಪ್ರವಾಸಿ ತಾಣಗಳು, ಪಟ್ಟಣದಲ್ಲಿನ ಬಹುಮಹಡಿ ಕಟ್ಟಡಗಳು ಸೇರಿದಂತೆ ಹಳ್ಳಿಯಿಂದ-ದಿಲ್ಲಿಯವರೆಗೆ ಪ್ರಕೃತಿಗೆ ಸುಂದರವಾದ ರೂಪ ನೀಡುವಲ್ಲಿ ಸಮುದಾಯದ ಕೊಡುಗೆ ಅಪಾರವಾಗಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ವಿಶ್ವಕರ್ಮ ಸಮುದಾಯದ ಮುಖಂಡರಾದ ಜೆ.ಎಸ್. ರಾಜು ಅವರು ಮಾತನಾಡಿ, ಒಂದು ಹಳ್ಳಿ ನಿರ್ಮಾಣ ಆಗಿದೆ ಎಂದರೆ ಅಲ್ಲಿ ವಿಶ್ವಕರ್ಮ ಸಮುದಾಯದ ಕೊಡುಗೆ ಇದೆ ಎಂಬುದನ್ನು ಮರೆಯುವಂತಿಲ್ಲ. ರೈತರು ಕೃಷಿಗೆ ಬಳಸುವ ಉಳುಮೆಯ ನೇಗಿಲಿನಿಂದ ಹಿಡಿದು ದೇವಸ್ಥಾನಗಳ ನಿರ್ಮಾಣ, ವಿಗ್ರಹಗಳ ಕೆತ್ತನೆ, ಚಿನ್ನಾಭರಣಗಳ ತಯಾರಿಕೆ, ಕಟ್ಟಡದ ಸಾಮಾಗ್ರಿಗಳು ಹೀಗೆ ಪ್ರತಿ ಕ್ಷೇತ್ರದಲ್ಲಿ ವಿಶ್ವಕರ್ಮ ಸಮುದಾಯದ ಕೊಡುಗೆ ಇದ್ದು ಇದನ್ನು ಗುರುತಿಸಿರುವ ಸರ್ಕಾರ ವಿಶ್ವಕರ್ಮ ಜಯಂತಿಯನ್ನು ರಾಷ್ಟ್ರೀಯ ಹಬ್ಬವನ್ನಾಗಿ ಆಚರಿಸಲು ಕ್ರಮಕ್ಕೆ ಮುಂದಾಗಲು ನಮ್ಮ ನಾಯಕರಾದ ಕೆ.ಪಿ.ನಂಜುಂಡಿ ಅವರ ಶ್ರಮ ಹೆಚ್ಚಿದೆ. ಇಂದು ವಿಶ್ವಕರ್ಮ ಸಮುದಾಯದಲ್ಲಿನ ಎಲ್ಲಾ ಉದ್ಯಮದಲ್ಲಿ ಆಧುನಿಕತೆ, ಮತ್ತು ಕಂಪ್ಯೂಟರ್ ಡಿಸೈನ್‌ನ ಹಾವಳಿ ಹೆಚ್ಚಾಗಿದ್ದು ಈ ನಿಟ್ಟಿನಲ್ಲಿ ಸಮುದಾಯದ ಯುವಕರು ಸಹ ಇದೀಗ ಸಮುದಾಯದ ಉದ್ಯಮದತ್ತ ಮುಖ ಮಾಡುತ್ತಿರುವುದು ಸ್ವಾಗತಾರ್ಹವಾಗಿದೆ ಎಂದು ಹೇಳಿದರು.
ವಿಶ್ವಕರ್ಮ ಸಮುದಾಯದ ಸಿದ್ದಪ್ಪಾಜಿ ಮಾತನಾಡಿ, ವಿಶ್ವಕ್ಕೆ ಸುಂದರ ರೂಪ ನೀಡಿರುವ ವಿಶ್ವಕರ್ಮ ಸಮುದಾಯದ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಮೂಲಕ ಸುಂದರ ಬದುಕು ನಿರ್ಮಾಣ ಮಾಡುವಲ್ಲಿ ಎಡವುತ್ತಿದ್ದಾರೆ. ಚಿಕ್ಕವಯಸ್ಸಿನಲ್ಲೇ ಮಕ್ಕಳಿಗೆ ಉದ್ಯಮದತ್ತ ಸೆಳೆದು ಅವರ ವಿದ್ಯಾಭ್ಯಾಸವನ್ನು ಮೊಟಕು ಮಾಡುವ ಜೊತೆಗೆ ಮಕ್ಕಳಿಗೆ ಹಣದ ಆಸೆಯ ಬಲೆಗೆ ಸಿಲುಕಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಮುಂದಾದರು ಸಮುದಾಯದ ಜನತೆ ಎಚ್ಚೆತ್ತು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡುವಲ್ಲಿ ಮೊದಲ ಆದ್ಯತೆ ನೀಡುವಂತೆ ಎಂದು ಸಲಹೆ ನೀಡಿದರು. ಬ್ರಹ್ಮಾಚಾರ್, ಚಿನ್ನಸ್ವಾಮಾಚಾರ್, ಗುರುಮೂರ್ತಾಚಾರ್, ಕೃಷ್ಣಾಚಾರ್, ರಾಜೇಶ್, ನಿಂಗರಾಜು, , ರಾಜೇಶ್, ತಮ್ಮಯ್ಯಚಾರ್, ಗುರುರಾಜ್, ರಾಜು , ರಮೇಶ್, ಚೇತನ್, ರಾಜಶೇಖರ್, ರಾಜಶೇಖರ್ ಶಿಕ್ಷಕರು, ಶ್ರೀನಿವಾಸ್, , ಬಾಬು, ಚಂದ್ರು, ದೇವರಾಜ್, ರಾಮಣ್ಣ, ಸುರೇಶ್, , ಪ್ರಕಾಶ್, ಸುರೇಶ್, ಚಂದ್ರಶೇಖರ್, ಕೃಷ್ಣ, ಶ್ರೀನಿವಾಸ್ , ರಾಜೇಶ್, ಜಗದೀಶ್, ಸಿದ್ಪದ್ಪಾಜಿ, ಕೆಂಪಾಚಾರ್, ಸ್ವಾಮಿ, ರಾಜಣ್ಣ, ಬಾಬು, ಸುರೇಶ್, ಚಂದನ್, ಕೃಷ್ಣ, ಸ್ವಾಮಿ, ಜನಾರ್ಧನ್, ಪುಟ್ಟಸ್ವಾಮಿ, ರಾಜು, ಗುರುಬಸವಚಾರ್, ಚಂದು, ರವಿ, ನಾಗಣ್ಣ, ನಾಗರಾಜು ಇನ್ನು ಮುಂತಾದವರು ಉಪಸ್ಥಿತರಿದ್ದರು.