ವಿಶ್ವಕರ್ಮ ಸಮುದಾಯದ ಜನಜಾಗೃತಿ ಕಾರ್ಯಕ್ರಮ


ಸಂಜೆವಾಣಿ ವಾರ್ತೆ
ಹಗರಿಬೊಮ್ಮನಹಳ್ಳಿ. ಫೆ.26 ಪಟ್ಟಣದಲ್ಲಿ ಇಂದು ವಿಶ್ವಕರ್ಮ ಜನಜಾಗೃತಿ ಸಮಾವೇಶ ಹಾಗೂ ಜಗದ್ಗುರು ಶ್ರೀ ಮೌನೇಶ್ವರ ಮಹೋತ್ಸವ ಮೆರವಣಿಗೆ ಅದ್ದೂರಿಯಾಗಿ ಜರುಗಿತು.
ಕಾರ್ಯಕ್ರಮದಲ್ಲಿ ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ರಾಜ್ಯಾಧ್ಯಕ್ಷ ಕೆ ಪಿ ನಂಜುಂಡಿ ಭಾಗವಹಿಸುವ ಮೂಲಕ ಸಮುದಾಯಕ್ಕೆ ಬಲ ತಂದರು. ಆರಂಭದಲ್ಲಿ ಹಗರಿ ಆಂಜನೇಯ ದೇವಸ್ಥಾನ   ಬಸವೇಶ್ವರ ಬಜಾರ ಮೂಲಕ ವಿಶ್ವಕರ್ಮ ಸಮುದಾಯ ಭವನದವರೆಗೆ  ಜಗದ್ಗುರು ಮೌನೇಶ್ವರ ಭಾವಚಿತ್ರವನ್ನು ಮೆರವಣಿಗೆ ನಡೆಸಲಾಯಿತು. ಕುಂಭ, ಕಳಸ  ಹೊತ್ತ ಮಹಿಳೆಯರು  ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು. ನಂದಿಕೋಲು ಸಮಾಳ ವಾದ್ಯಗಳೊಂದಿಗೆ 25ನೇ ವರ್ಷದ ಮೌನೇಶ್ವರ ಮಹೋತ್ಸವ ಆಚರಿಸಿದರು.
ಈ  ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಬಿಜಿ ಬಡಿಗೇರ್ ತಾಲೂಕ ಅಧ್ಯಕ್ಷ ಬಡಿಗೇರ್ ಬಸವರಾಜ್ ಗೌರವಾಧ್ಯಕ್ಷ ಸಿಎಚ್ ಸಿದ್ದರಾಜು ನೌಕರರ ಸಂಘದ ತಾಲೂಕ ಘಟಕದ ಅಧ್ಯಕ್ಷ ಎ. ರಾಘವೇಂದ್ರ ಯುವ ಘಟಕದ ಅಧ್ಯಕ್ಷ ಕೆ ಮಂಜುನಾಥ ಪ್ರಮುಖರಾದ ಸಿದ್ದಪ್ಪ ಬಡಿಗೇರ್, ಕಮ್ಮಾರ್ ಮಂಜುನಾಥ್, ಚಿoತ್ರಪಳ್ಳಿ ಮುತ್ತು, ಬಿ ವಿರೇಶ್, ಎ. ರಮೇಶ್ ಪಿ ಸಂತೋಷ, ಮೌನೇಶ್ ಇತರರಿದ್ದರು