ವಿಶ್ವಕರ್ಮ ಸಮುದಾಯದಿಂದ ಜನಜಾಗೃತಿ, ಎಸ್ ಟಿ ಮೀಸಲಾತಿಗೆ ಒತ್ತಾಯ


ಸಂಜೆವಾಣಿ ವಾರ್ತೆ
ಹಗರಿಬೊಮ್ಮನಹಳ್ಳಿ. ಫೆ.25 ಕಾಯಕವನ್ನೇ ನಂಬಿಕೊಂಡು ಜೀವನ ನಿರ್ವಹಿಸುವ ವಿಶ್ವಕರ್ಮ ಸಮುದಾಯಕ್ಕೆ ಎಸ್ ಟಿ ಮೀಸಲಾತಿ ನೀಡಬೇಕು ಎಂದು ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ಪ್ರಧಾನ ಕಾರ್ಯದರ್ಶಿ ಬ್ರಹ್ಮ ಗಣೇಶ್ ಹೇಳಿದರು.
 ಪಟ್ಟಣದ ವಿಶ್ವಕರ್ಮ ಭವನದಲ್ಲಿ ಜನಜಾಗೃತಿ ಸಮಾವೇಶ ಪೂರ್ವಭಾವಿ ಸಭೆಯ ಯಲ್ಲಿ ಭಾಗವಹಿಸಿ ಪತ್ರಿಕೆಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿ ಮೊದಲಿನಿಂದಲೂ ನಮ್ಮ ಸಮಾಜ ಹಿಂದುಳಿದ ಸಮಾಜವಾಗಿದೆ ಮಕ್ಕಳಿಗೆ ಶೈಕ್ಷಣಿಕ ಉದ್ದೇಶಕ್ಕಾಗಿ ನಾವು ಎಸ್ಟಿ ಮೀಸಲಾತಿ ಕೇಳುತ್ತಿದ್ದೇವೆ. ಕುಲ ಕಸವನ್ನೇ ನಂಬಿ ಜೀವನ ಮಾಡುವಂತ ನಮ್ಮವರಿಗೆ ಮಿಷಿನರಿಯಿಂದ  ಈಗ ಕೆಲಸವಿಲ್ಲದೆ ನಿರುದ್ಯೋಗದಿಂದ ಪರದಾಡುವಂತಾಗಿದೆ. ಹಂಪಿ ಉತ್ಸವದಲ್ಲಿ ಶಿಲ್ಪಿಗಳಿಗೆ  ಕನಿಷ್ಠ ಗೌರವ ನೀಡದೆ ಸರ್ಕಾರ ನಿರ್ಲಕ್ಷ್ಯ ಮಾಡುತ್ತಿದೆ. ಯುನೆಸ್ಕಾ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಹಂಪಿಯ ವಾಸ್ತು ಶಿಲ್ಪ ವೈಭವಕ್ಕೆ ವಿಶ್ವಕರ್ಮರೇಕಾರಣಿಭೂತರು ಎಂಬುವುದು ಮರೆಯಬಾರದು ಎಂದರು.
 ಇದೇ ಫೆ.26 ರಂದು ಪಟ್ಟಣದ ವಿಶ್ವಕರ್ಮ ಭವನದ ಹತ್ತಿರ ಜನ ಜಾಗೃತಿ ಸಮಾವೇಶ ನಡೆಯಲಿದೆ. ಸಮಾವೇಶಕ್ಕೆ ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ, ಸಮುದಾಯದ ರಾಜ್ಯದ್ಯಕ್ಷ ಕೆಪಿ ನಂಜುಂಡಿ ಪಾಲ್ಗೊಳ್ಳಲಿದ್ದಾರೆ. ವಿಶ್ವಕರ್ಮ ಏಕದಂಡೆಗೆ ಮಠ ಶ್ರೀ ಗುರುನಾಥ ಸ್ವಾಮೀಜಿ ನಂದಿಪುರ ಡಾ. ಮಹೇಶ್ವರ ಸ್ವಾಮೀಜಿ ಹಂಪಸಾಗರ ಶಿವಲಿಂಗ ರುದ್ರ ಮುನಿ ಸ್ವಾಮೀಜಿ , ಹಾಲಸಿದ್ದೇಶ್ವರ ಸ್ವಾಮೀಜಿ ಸಾನಿಧ್ಯ ವಹಿಸಲಿದ್ದಾರೆ. ಶಾಸಕ ಎಸ್ ಭೀಮ ನಾಯ್ಕ್ ಉಪಸ್ಥಿತರಿರಲಿದ್ದಾರೆ ಎಂದರು.
 ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಬಿಜಿ ಬಡಿಗೇರ್ ತಾಲೂಕ ಅಧ್ಯಕ್ಷ ಬಡಿಗೇರ್ ಬಸವರಾಜ್ ಗೌರವಾಧ್ಯಕ್ಷ ಸಿಎಚ್ ಸಿದ್ದರಾಜು ನೌಕರರ ಸಂಘದ ತಾಲೂಕ ಘಟಕದ ಅಧ್ಯಕ್ಷ ಎ. ರಾಘವೇಂದ್ರ ಯುವ ಘಟಕದ ಅಧ್ಯಕ್ಷ ಕೆ ಮಂಜುನಾಥ ಪ್ರಮುಖರಾದ ಸಿದ್ದಪ್ಪ ಬಡಿಗೇರ್, ಕಮ್ಮಾರ್ ಮಂಜುನಾಥ್, ಚಿoತ್ರಪಳ್ಳಿ ಮುತ್ತು, ಬಿ ವಿರೇಶ್, ಎ. ರಮೇಶ್ ಪಿ ಸಂತೋಷ, ಮೌನೇಶ್ ಇತರರಿದ್ದರು 

One attachment • Scanned by Gmail