ವಿಶ್ವಕರ್ಮ ಸಮಾಜಕ್ಕೆ ಸ್ಮಶಾನ ಜಾಗ ಮಂಜೂರು ಮಾಡಲು ಮನವಿ

ಮುದ್ದೇಬಿಹಾಳ: ಡಿ.7:ತಾಲೂಕಿನ ತಂಗಡಗಿ ಗ್ರಾಮದ ವಿಶ್ವಕರ್ಮ ಸಮಾಜಕ್ಕೆ ಸ್ಮಶಾನ ಜಾಗೆ ಮಂಜೂರು ಮಾಡುವಂತೆ ಆಗ್ರಹಿಸಿ ಅಖೀಲ ಕರ್ನಾಟಕ ವಿಶ್ವಕರ್ಮ ಮಹಾಸಭಾದ ವತಿಯಿಂದ ಸೋಮವಾರ ಶಿರಸ್ತೆದಾರ ವಿ ಸಿ ತೊನಿಶ್ಯಾಳ ಹಾಗೂ ತಾಲೂಕಾ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಅವರಿಗೆ ಮನವಿ ಸಲ್ಲಿಸಿದರು.
ಹಲವು ವರ್ಷಗಳಿಂದ ತಾಲೂಕಿನ ತಂಗಡಗಿ ಗ್ರಾಮದ ವಿಶ್ವಕರ್ಮ ಸಮಾಜ ದವರು ಹಿರಿಯ ಮರಣ ಹೊಂದಿದರೇ ಅವರ ಅಂತ್ಯಕ್ರೀಯೆ ನಡೆಸಲು ಜಾಗವಿಲ್ಲದೇ ಕೃಷ್ಣಾ ನದಿಯ ತೀರದಲ್ಲೋ ಅಥವಾ ಯಾವೂದೋ ಒಂದು ರಸ್ತೆ ಪಕ್ಷದಲ್ಲೋ ಅಂತ್ಯಸಂಸ್ಕರಾ ನಡೆಸುವಂತಾಗಿದೆ. ಆದರೇ ಇಲ್ಲಿತನಕವೂ ಸರಕಾರದಿಂದಾಗಿ ಪಂಚಾಯಿತಿಯಿಂದಾಗಲಿ ನಮಗೆ ಪ್ರತ್ಯೇಕ ಸ್ಮಶಾನ ಜಾಗ ನೀಡಿರುವುದಿಲ್ಲ. ಸಧ್ಯ ತಂಗಡಗಿ ಗ್ರಾಮದ ಸರ್ವೇ ನಂಬರ 124 ಒಂದು ಎಕರೆ 24 ಗುಂಟೆ ಸಾರ್ವಜನಿಕ ಸ್ಮಶಾನ ಜಾಗಕ್ಕಾಗಿ ಮೀಸಲಿದೇ ಕಾರಣ ಈದರಲ್ಲಿ ನಮ್ಮ ಸಮಾಜಕ್ಕೆ 15 ಗುಂಟೆ ಜಮೀನನ್ನು ಸ್ಮಶಾನಕ್ಕಾಗಿ ನೀಡಬೇಕು ಜತೆಗೆ ಆ ಜಾಗೆಯ ಸುತ್ತಲು ಕಂಪೌಂಡ್ ನಿರ್ಮಿಸಿಕೊಡಬೇಕು ಅದಲ್ಲದೇ ಸ್ಮಶಾನಕ್ಕೆ ನೀಡಿದ ಬಗ್ಗೆ ಉತಾರ ನಿರ್ಮಿಸಿಕೊಡಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಈ ವೇಳೆ ಅಖೀಲ ಕರ್ನಾಟಕ ವಿಶ್ವಕರ್ಮ ಮಹಾಸಭಾದ ತಾಲೂಕಾ ಅಧ್ಯಕ್ಷ ಮಲ್ಲಣ್ಣ ಪತ್ತಾರ(ತಾರನಾಳ), ಯುವಘಟಕದ ತಾಲೂಕಾ ಉಪಾಧ್ಯಕ್ಷ ಮುತ್ತು ಬಡಿಗೇರ, ಮುಖಂಡರಾದ ವಿಜಯಕುಮಾರ ಬಡಿಗೇರ, ಮಲ್ಲಪ್ಪ ಬಡಿಗೇರ, ರವಿ ಬಡಿಗೇರ, ಪ್ರಭು ಬಡಿಗೇರ, ಎಂ ಕೆ ಬಡಿಗೇರ, ಕಾಂತು ತಮದಡ್ಡಿ, ಮೌನೇಶ ಬಡಿಗೇರ(ಢವಳಗಿ)ಸಿ ಕೆ ಬಡಿಗೇರ, ಎಂ ಕೆ ಬಡಿಗೇರ, ಸಿ ಎಂ ಪತ್ತಾರ ಸೇರಿದಂತೆ ಹಲವರು ಇದ್ದರು.