ವಿಶ್ವಕರ್ಮ ಸಮಾಜಕ್ಕೆ ಸಾಮಾಜಿಕ ನ್ಯಾಯ ಒದಗಿಸಲು ಒತ್ತಾಯ

ತಾಳಿಕೋಟೆ:ಸೆ.22:ಮುಖ್ಯಮಂತ್ರಿ ಬಸವರಾಜ ಬೋಮ್ಮಾಯಿಯವರು ತಮ್ಮ ಸಂಪುಟ ವಿಸ್ತರಣೆಯಲ್ಲಿ ವಿಶ್ವಕರ್ಮ ಮಹಾಸಭಾದ ರಾಜ್ಯಾಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಕೆ ಪಿ ನಂಜುಂಡಿಯವರನ್ನು ಈ ಬಾರಿಯಾದರೂ ಕ್ಯಾಬಿನೇಟ್ ದರ್ಜೇ ಸಚೀವ ಸ್ಥಾನ ನೀಡಿ ಗೌರವಿಸಬೇಕು ಎಂದು ಆಗ್ರಹಿಸಿ ತಾಳಿಕೋಟೆ ವಿಶ್ವಕರ್ಮ ಸಮಾಜ ಬಾಂಧವರು ವಿಜಯಪುರ ಜಿಲ್ಲಾ ಬಿಜೆಪಿ ಅಧ್ಯಕ್ಷ ಆರ್.ಎಸ್.ಪಾಟೀಲ(ಕೂಚಬಾಳ) ಅವರ ಮುಖಾಂತರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಹಾಗೂ ಬಾಜಪ ರಾಜ್ಯಾಧ್ಯಕ್ಷ ನಳಿನಕುಮಾರ ಕಟೀಲ ಅವರಿಗೆ ಮಂಗಳವಾರ ಮನವಿ ಸಲ್ಲಿಸಲಾಯಿತು.

   ಸಧ್ಯ ಕಳೇದ 3 ವರ್ಷಗಳಿಂದ ಕೋರೋನಾ ಹೊಡೆತಕ್ಕೆ ರಾಜ್ಯದಲ್ಲಿರುವ ವಿಶ್ವಕರ್ಮ ಸಮಾಜದ ಪಂಚಕಸುಬಗಳ ವೃತ್ತಿದಾರರ ಬದುಕು ತೀವೃ ಸಂಕಷ್ಟಕ್ಕೆ ಸಿಲುಕಿ ಚಿಂತಾಜನಕ ಸ್ಥೀತಿಯಲ್ಲಿದ್ದಾರೆ. ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಬಿ.ಎಸ್ ಯಡಿಯೂರಪ್ಪನವರಿಗೇ ಹಾಗೂ ಹಾಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೂ ಸರಕಾರದಿಂದ ಸ್ಥಾಪಿತಗೊಂಡ ಕರ್ನಾಟಕ ವಿಶ್ವಕರ್ಮ ಸಮಾಜ ಅಭಿವೃದ್ಧಿ ನಿಗಮದ ಸಂಪೂರ್ಣ ಸಾಲ ಮನ್ನಾಡುವ ಮೂಲಕ ಪಂಚಕುಸುಬಗಳ ಮಾಡುವ ವಿಶ್ವಕರ್ಮ ಕಾರ್ಮಿಕರಿಗೆ ಆರ್ಥಿಕ ಸಹಾಯಧನದ ವಿಶೇಷ ಪ್ಯಾಕೇಜ ಘೋಷಿಸಬೇಕು ಜೊತೆಗೆ ವಿಶ್ವಕರ್ಮ ಸಮಾಜದ ನಾಯಕ ಹಾಗೂ ವಿಧಾನ ಪರಿಷತ್ ಸದಸ್ಯ ಕೆ ಪಿ ನಂಜುಂಡಿಯವರನ್ನು ಕ್ಯಾಬಿನೇಟ ದರ್ಜೇಯ ಸಚೀವ ಸ್ಥಾನ ನೀಡಬೇಕು, ಹಾಗೂ ಕಳೇದ ಹಲವು ವರ್ಷಗಳಿಂದ ಸಮಾಜ ಸಂಘಟನೆಯಲ್ಲಿ ತೊಡಗಿಸಿಕೊಂಡಿರುವ ಇನ್ನೋರ್ವ ಸಮಾಜದ ಮುಖಂಡ ಲೋಹಿತ ಕಲ್ಲೂರ ಅವರನ್ನು ವಿಶ್ವಕರ್ಮ ಅಭಿವೃದ್ದಿ ನಿಗಮದ ನೂತನ ಅಧ್ಯಕ್ಷರನ್ನಾಗಿ ಘೋಷಣೆ ಮಾಡಬೇಕು  ಎಂದು ಮನವಿ ಸಲ್ಲಿಸುವ ಮೂಲಕ ಒತ್ತಾಯಿಸಲಾಗಿತ್ತು. ಆದರೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ನಮ್ಮ ಯಾವ ಮನವಿಗೂ ಸ್ಪಂದಿಸದೇ  ನಮಗೆ ಯಾವ ಸಾಮಾಜಿಕ ನ್ಯಾಯ ನೀಡದೇ ಪದೆ ಪದೆ ನಮ್ಮ ಸಮಾಜವನ್ನು ಕಡೆಗಣಿಸುತ್ತಿರುವುದು ರಾಜ್ಯದಲ್ಲಿ 40 ಲಕ್ಷ ಜನ ಸಂಖ್ಯೆಯನ್ನು ಹೊಂದಿದ ವಿಶ್ವಕರ್ಮ ಸಮಾಜಕ್ಕೆ ಮೋಸ ಮಾಡಿದಂತಾಗಿದೆ.
  ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಈ ಬಾರಿಯಾದರೂ ನಮ್ಮ ಸಮಾಜದ ಈ ಬೇಡಿಕೆ ಇಡೇರಿಸುವ ಮೂಲಕ  ಸಾಮಾಜಿಕ ನ್ಯಾಯ ಒದಗಿಸಬೇಕು ಇಲ್ಲವಾದರೇ ಮುಂದಿನ ಎಲ್ಲ ಚುನಾವಣೆಗಳಲ್ಲಿ ಇಡೀ ರಾಜ್ಯದ ಎಲ್ಲ ವಿಶ್ವಕರ್ಮಸಮಾಜ ಬಾಂಧವರೆಲ್ಲರೂ ಒಗ್ಗಟ್ಟಾಗಿ ನಮ್ಮ ನಾಯಕರಾದ ಕೆ.ಪಿ ನಂಜುಂಡಿಯವರನ್ನು ಒತ್ತಾಯಿಸಿ ಬಿಜೆಪಿ ಪಕ್ಷಕ್ಕೆ ರಾಜೀನಾಮೆ ಕೊಡಿಸಿ ಬೇರೆ ನಿರ್ಧಾರ  ತೆಗೆದುಕೊಳ್ಳಬೇಕಾಗುತ್ತದೆ ನಮ್ಮ ತಾಳ್ಮೇಯ ಕಟ್ಟೆಯೋಡೆದು ಹೋಗಿದೆ ಕಾರಣ ನಮ್ಮ ಬೇಡಿಕೆ ಇಡೇರಿಸುವಲ್ಲಿ ಮನಸ್ಸು ಮಾಡಬೇಕು ಎಂದಿದ್ದಾರೆ.

ಈ ಸಮಯದಲ್ಲಿ ಅಧ್ಯಕ್ಷರಾದ ಶ್ರೀನಿವಾಸ ಸೋನಾರ, ಪ್ರಭು ಹಿಪ್ಪರಗಿ, ಶಶಿಧರ ಪತ್ತಾರ, ಎಮ್ ಎಸ್ ಪತ್ತಾರ, ಗಂಗಾಧರ ಬಡಿಗೇರ, ಈರಣ್ಣಾ ಇಂಗಳಗೇರಿ, ಸುರೇಶ ಸೋಮನಾಳ, ವಿವೇಕ ಪತ್ತಾರ, ನಾಗಣ್ಣ ಪತ್ತಾರ, ಜಗಧೀಶ ಸೋಮನಾಳ, ಪ್ರಭು ಇಂಗಳಗೇರಿ, ಮುತ್ತು ಸೋಮನಾಳ, ಗಂಗಾಧರ ಹೆಬ್ಬಾಳ, ಮೌನೇಶ ಗುತ್ಯಾಳ, ರಾಜು ಸಾಲವಾಡಗಿ, ಸುನೀಲ ವರದಪ್ಪನವರ, ಮೌನೇಶ ಬಡಿಗೇರ, ಶ್ರೀನಿವಾಸ ಪತ್ತಾರ, ಸಂತೋಷ ಚಿಕ್ಕೋಡಿ, ಮನೋಹರ ಪತ್ತಾರ, ಭೀಮಣ್ಣ ಬಡಿಗೇರ, ಮೊದಲಾದವರು ಇದ್ದರು.