
ಆಳಂದ: ಮಾ.28:ವಿಶ್ವಕರ್ಮಕರು ಧಾರ್ಮಿಕ ಸಂಸ್ಕಾರದೊಂದಿಗೆ ಶೈಕ್ಷಣಿಕ ಹಾಗೂ ಸಾಮಾಜಿಕವಾಗಿ ಅಭಿವೃದ್ಧಿ ಸಾಧಿಸಲು ಮುಂದಾಗಬೇಕು ಎಂದು ಅಫಜಲಪೂರ ಮೂರುಝಾವಧೀಶ್ವರ ಮಠದ ಶ್ರೀ ಚಕ್ಕೇಂದ್ರ ಮಹಾಸ್ವಾಮಿಗಳ ಕರೆ ನೀಡಿದರು.
ಪಟ್ಟಣದ ವಿಶ್ವಕರ್ಮ ಸಮಾಜ ಹಾಗೂ ಕಾಳಿಕಾದೇವಿ ದೇವಸ್ಥಾನ ಟ್ರಸ್ಟ್ ಆಶ್ರಯದಲ್ಲಿ ಭಾನುವಾರ ನಡೆದ ಶ್ರೀ ಕಾಳಿಕಾದೇವಿ ಜಾತ್ರಾ ಮಹೋತ್ಸವ ಪ್ರವಚನ ಮಹಾಂಗಲ, ಪಲ್ಲಕ್ಕಿ ಉತ್ಸವ ಬಳಿಕ ನಡೆದ ಧಾರ್ಮಿಕ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಸಮಾಜ ಬಾಂಧವರು ಭಗವಾನ ವಿಶ್ವಕರ್ಮರ, ತಿಂಥಣಿಯ ಮೌನೇಶ್ವರ, ಕಾಳಿಕಾದೇವಿಯ ತತ್ವಗಳ ಆರಾಧನೆ ಮಾಡಿ ಸರ್ವರು ಒಗ್ಗಟ್ಟಿನಿಂದ ಸಾಗಿ ಉದ್ಯೋಗ ವ್ಯಾಪಾರ, ಶಿಕ್ಷಣ ಮತ್ತು ಅಧಿಕಾರಕ್ಕೆ ಬರಬೇಕು ಎಂದು ಹೇಳಿದರು.
ಇನ್ನೋರ್ವ ಶ್ರೀ ಬ್ರಹ್ಮಾನಂದ ಮಹಾಸ್ವಾಮಿಗಳು, ಪ್ರವಚನ ಸಂಪನಗೊಳಿಸಿದ ಆಲಮೇಲ ಮಠದ ಶ್ರೀ ಚನ್ನವೀರ ಮಹಾಸ್ವಾಮಿಗಳು ಮಾತನಾಡಿದರು.
ಕೆಎಂಎಫ್ ಅಧ್ಯಕ್ಷ ಆರ್. ಕೆ.ಪಾಟೀಲ ಸನ್ಮಾನ ಸ್ವೀಕರಿಸಿ ಮಾತನಾಡಿ, ಧಾರ್ಮಿಕ ಕಾರ್ಯಗಳಿಂದ ಸಮಾಜದಲ್ಲಿ ಶಾಂತಿ ನೆಮ್ಮದಿಗೆ ಕಾರಣವಾಗಿದೆ. ಸರ್ವರು ಸನ್ಮಾರ್ಗದಲ್ಲಿ ಸಾಗಲು ಇಂತಹ ಕಾರ್ಯಕ್ರಮಗಳು ನಿರಂತರವಾಗಿ ಸಾಗಲು ಸರ್ವ ರೀತಿಯಿಂದಲೂ ಸಹಕರಿಸಲಾಗುವುದು ಎಂದರು.
ವೀರಶೈವ ಸಮಾಜ ಯುವ ಅಧ್ಯಕ್ಷ ಲಿಂಗರಾಜ ಪಾಟೀಲ, ರಾಹುಲ ಪಾಟೀಲ ಕೆರೂರ, ದೇವಸ್ಥಾನ ಟ್ರಸ್ಟ್ ಕಮೀಟಿ ಅಧ್ಯಕ್ಷ ಮಹಾದೇವ ಕೆ. ಪೋದ್ದಾರÀ, ಉಪಾಧ್ಯಕ್ಷ ಶಿವರಾಜ ಬಿ. ಪೋದ್ದಾರ, ಕಾರ್ಯದರ್ಶಿ ಸಿದ್ಧರಾಮ ಎಸ್. ಪೋದ್ದಾರ, ವಿಶ್ವಕರ್ಮ ಸಮಾಜ ಅಧ್ಯಕ್ಷ ಸಂಪತಕುಮಾರ ವೇದಪಾಠಕ, ವೀರಭದ್ರ ಸುತಾರ, ಸೂರ್ಯಕಾಂತ ಸೂನಾರ, ಸಮಾಜ ಮಹಿಳಾ ಅಧ್ಯಕ್ಷೆ ವೈಶಾಲಿ ಅಶೋಕ ಪೋದ್ದಾರ, ಮುಖಂಡ ಬಾಹುಸಾಹೇಬ ಎಸ್. ಪೋದ್ದಾರ, ಸುರೇಶ ಎಂ. ಪೋದ್ದಾರ, ಶಿವುಕುಮಾರ ಹಡಲಗಿ, ಸಚೀನ ಡಿ. ಪೋದ್ದಾರ, ಪ್ರಕಾಶ ಎನ್. ಪೋದ್ದಾರ, ಬಸವರಾಜ ಎನ್. ಪೋದ್ದಾರ, ಸುಭಾಷ ಪೋದ್ದಾರ ಸೇರಿದಂತೆ ಮತ್ತಿತರು ಗಣ್ಯರು ಇದ್ದರು.
ವೇದಿಕೆಯಲ್ಲಿ ವಿಶ್ವಕರ್ಮ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹಾಗೂ ಆಯೋಜಿಸಿದ್ದ ವಿವಿಧ ಸ್ಪರ್ಧೆ ವಿಜೇತರಿಗೆ ಗಣ್ಯರಿಗೆ ಗೌರವ ಸನ್ಮಾನ ಕೈಗೊಳ್ಳಲಾಯಿತು.
ಲಕ್ಷ್ಮಣ ಟಿ. ಪೋದ್ದಾರ ಸ್ವಾಗತಿಸಿದರು. ಶಿಕ್ಷಕ ಸಂತೋಷ ವೇದಪಾಠಕ ನಿರೂಪಿಸಿದರು. ದೇವಿಂದ್ರ ಎಸ್. ಪೋದ್ದಾರ ಖಂಡಾಳ ವಂದಿಸಿದರು. ಮುನ್ನದಿನ ಅಫಜಲಪೂರ ಮೌನೇಶ್ವರ ಶ್ರೀಗಳು, ಪ್ರಣವನಿರಂಜನ ಶ್ರೀಗಳು ಭಾಗವಹಿಸಿದ್ದರು.