ವಿಶ್ವಕರ್ಮ ಯೋಜನೆ: ಮೋದಿಗೆ ಉಮೇಶ್ ಅಭಿನಂದನೆ

ಬೆಂಗಳೂರು, ಆ, ೧೮; ವಿಶ್ವಕರ್ಮ ಯೋಜನೆಯನ್ನು ಘೋಷಿಸಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ವಿಶ್ವ ಕರ್ಮ ಬಾಂಧವರು ಹಾಗೂ ವಿಶ್ವ ಕರ್ಮ ಸೇವಾ ಪ್ರತಿಷ್ಠಾನದ ಪರವಾಗಿ ಅಭಿನಂದನೆ ಸಲ್ಲಿಸಿರುವ ವಿಶ್ವಕರ್ಮ ನಾಡೋಜ ಮತ್ತು ಶ ವಿಶ್ವಕರ್ಮ ಸೇವಾ ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಡಾ.ಎಂ.ಬಿ.ಉಮೇಶ್ ಕುಮಾರ್, ಈ ಯೋಜನೆ ನಮ್ಮ ಸಮುದಾಯದ ಬೆಳವಣಿಗೆ ಅತ್ಯಂತ ಮಹತ್ವದ್ದಾಗಿದೆ ಎಂದು ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಶ್ವಕರ್ಮ ಸಮುದಾಯದ ಪಂಚ ಕಸುಬುಗಳ ಪುನರುತ್ಥಾನಕ್ಕೆ ಮೈಲಿಗಲ್ಲಾಗುವ ಯೋಜನೆ ಇದಾಗಿದೆ. ಸಮುದಾಯದ ಬೆಂಬಲಕ್ಕೆ ಪ್ರಧಾನಿ ನಿಂತಿರುವುದು ಶ್ಲಾಘನೀಯ. ತಮ್ಮ ಬೆಂಬಲ ಇದೆ ರೀತಿ ಮುಂದುವರಿಯಲಿ ಎಂದರು.
ದೇಶ ಸ್ವಾತಂತ್ರ್ಯದ ಅಮೃತ ಮಹೋತ್ಸವದಿಂದ ಅಮೃತ ಕಾಲದತ್ತ ಸಾಗುತ್ತಿರುವ ಈ ಸುಸಂದರ್ಭದಲ್ಲಿ ಕೇಂದ್ರ ಸರ್ಕಾರ ಇದೇ ಮೊದಲ ಬಾರಿಗೆ ಕರಕುಶಲ ಮತ್ತು ಕುಶಲ ಕರ್ಮಿಗಳಿಗೆ ವರದಾನವಾಗುವ ವಿಶ್ವಕರ್ಮ ಜಯಂತಿಯಂದು “ಪಿಎಂ ವಿಶ್ವಕರ್ಮ’ ಯೋಜನೆ ಜಾರಿಗೊಳಿಸುತ್ತಿರುವುದು ಅತ್ಯಂತ ಮಹತ್ವದ ಬೆಳವಣಿಗೆಯಾಗಿದೆ ಎಂದು ಹೇಳಿದರು.
ವಿಶ್ವಕರ್ಮ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಪ್ರಭಾಕರ್ ಐ.ಎ.ಎಸ್ (ನಿ) ವಿಶ್ವಕರ್ಮ ಸಮುದಾಯದ ವೇದಮೂರ್ತಿ ಕೆ.ಎ.ಎಸ್ (ನಿ) ಶಿಲ್ಪಿ ಹೊನ್ನಪ್ಪ ಆಚಾರ್, ಚಂದ್ರಶೇಖರ್ ಹಾಗೂ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಮಾಜಿ ಅಧ್ಯಕ್ಷರಾದ ಡಾ. ಸಿ ಸೋಮಶೇಖರ ಐ.ಎ.ಎಸ್ (ನಿ) ಮತ್ತಿತರರು ಉಪಸ್ಥಿತರಿದ್ದರು.