ವಿಶ್ವಕರ್ಮ ಭವನಕ್ಕೆ 5 ಲಕ್ಷ ಅನುದಾನ

ಬೀದರ:ಜೂ.4: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ನೌಬಾದ್‍ನ ಆಟೊನಗರ ಹಿಂದುಗಡೆ ಚೌಳಿ ರಸ್ತೆಯಲ್ಲಿ ನಿರ್ಮಿಸುತ್ತಿರುವ ವಿಶ್ವಕರ್ಮ ಸಮುದಾಯ ಭವನಕ್ಕೆ 5 ಲಕ್ಷ ಅನುದಾನ ಮಂಜೂರು ಮಾಡಿದೆ.

ನಗರದಲ್ಲಿ ಶಾಸಕ ಬಂಡೆಪ್ಪ ಕಾಶೆಂಪೂರ್ ಅವರು ಶ್ರೀ ವಿಶ್ವಕರ್ಮ ಧರ್ಮವರ್ಧಿನಿ ಸಂಘದ ಅಧ್ಯಕ್ಷ ಶ್ರೀನಿವಾಸ ವಿಶ್ವಕರ್ಮ ಅವರಿಗೆ ಅನುದಾನ ಮಂಜೂರಾತಿ ಪತ್ರ ವಿತರಿಸಿದರು.

ಯೋಜನೆಯ ಕಲಬುರ್ಗಿ ಪ್ರಾದೇಶಿಕ ನಿರ್ದೇಶಕ ಉಮಾರಾವ್, ಬೀದರ್ ತಾಲ್ಲೂಕು ಯೋಜನಾಧಿಕಾರಿ ರಮೇಶ, ರಮೇಶ ಸೋನಾರ್, ಸುಭಾಷ, ಬಲಭೀಮರಾವ್, ಡಿ.ಬಿ. ಕುಂಬಾರ, ಪಾಂಡುರಂಗ ವಿಶ್ವಕರ್ಮ, ರಘುನಾಥರಾವ್ ವಿಶ್ವಕರ್ಮ ಇದ್ದರು.