ವಿಶ್ವಕರ್ಮ ಪೂಜಾ ಮಹೋತ್ಸವ

ಕಲಬುರಗಿ,ಸೆ.20-ನಗರದ ಸೇಡಂ ರಸ್ತೆಯ ವೀರೇಂದ್ರ ಪಾಟೀಲ ಬಡಾವಣೆಯಲ್ಲಿರುವ ವರಸಿದ್ಧಿ ಹನುಮಾನ್ ಮಂದಿರದÀ ಉದ್ಯಾನವನದಲ್ಲಿ ಸೃಷ್ಟಿಕರ್ತ ಭಗವಾನ್ ವಿಶ್ವಕರ್ಮ ಪೂಜಾ ಮಹೋತ್ಸವವನ್ನು ಧರ್ಮ ಗುರುಗಳಾದ ಸುರೇಂದ್ರ ಮಹಾಸ್ವಾಮಿಗಳು ಮತ್ತು ದೇವೇಂದ್ರ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಹಾಗೂ ಕಾರ್ಯಕ್ರಮದ ರೂವಾರಿಗಳಾದ ಮಾರುತಿ ಎಂ.ಕಮ್ಮಾರ್ ಅವರ ನೇತೃತ್ವದಲ್ಲಿ ನೆರವೇರಿಸಲಾಯಿತು.
ಸಾನಿಧ್ಯ ವಹಿಸಿದ ಪೂಜ್ಯರು ಮಾತನಾಡಿ, ಭಗವಾನ್ ವಿಶ್ವಕರ್ಮ ಪರಮೇಶ್ವರ ಕೇವಲ ವಿಶ್ವಕರ್ಮ ಸಮಾಜಕ್ಕೆ ಸೀಮಿತವಲ್ಲ. ಲೋಕದ ಸಕಲ ಜೀವ ರಾಶಿಗಳಿಗೆ ಚೇತನಾ ಸ್ವರೂಪನಾಗಿ, ಸಮಸ್ತ ದೇವತೆಗಳ ಒಡೆಯನಾಗಿ, ಜನಕನಾಗಿ ವಿಶ್ವದ ಕರ್ಮಕಲಾಪಗಳಿಗೆ ಮೂಲ ಪುರುಷನಾಗಿದ್ದಾನೆ. ಇಂತಹ ಪರಬ್ರಹ್ಮನ ಪೂಜೆ ಎಲ್ಲರೂ ಮಾಡಿ ಕೃತಾರ್ಥರಾಗಬೇಕು ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಮಹಾನಗರ ಪಾಲಿಕೆ ಶಾಂತಾಬಾಯಿ ಹಾಲಮಠ ಅವರು ಮಾತನಾಡಿ, ವಿಶ್ವಕರ್ಮ ಪೂಜೆ ಗೊಂಡಿರುವ ಈ ಪುಣ್ಯ ಭೂಮಿ ವಿಶ್ವಕರ್ಮ ಉದ್ಯಾನವೆಂದು ನಾಮಕರಣ ಮಾಡಲು ಪ್ರಯತ್ನಿಸುವೆ ಮತ್ತು ಉದ್ಯಾನವನ್ನು ಅಭಿವೃದ್ಧಿ ಮಾಡಿಸುತ್ತೇನೆ ಎಂದು ಹೇಳಿದರು.
ಅತಿಥಿಯಾಗಿ ಆಗಮಿಸಿದ ಉಮೇಶೆಟ್ಟಿ ಅವರು ಮಾತನಾಡಿ ವಿಶ್ವಕ್ಕೆ ವಿಶ್ವಕರ್ಮರ ಕೊಡುಗೆ ಅಪಾರವಾದದು,್ದ ಹಿಂದೂ ಸನಾತನ ಧರ್ಮ ಪ್ರಪಂಚಕ್ಕೆ ಸಂಸ್ಕøತಿ, ನಾಗರಕತೆಯನ್ನು ದಯಪಾಲಿಸಿ ಪಂಚ ಕಸಬಗಳಿಂದ ನಮ್ಮೆಲ್ಲರ ಕಾಪಾಡುವವರೇ ವಿಶ್ವಕರ್ಮ ಸಮಾಜ ಬಾಂಧವರೆಂದು ತಿಳಿಸಿದರು. ಈ ಕಾರ್ಯಕ್ರಮದಲ್ಲಿ ಜಿಲ್ಲಾ ವಿಶ್ವಕರ್ಮ ನೌಕರರ ಸಂಘದ ಪದಾಧಿಕಾರಿಯಾಗಿಗಳಾದ ಸಿ.ಕೆ. ಪತ್ತರ್. ಗಂಗಾಧರ್ ಪುದ್ದಾರ, ಪ್ರಾಣೇಶ್ ಬಡಿಗೇರ, ಶಿವರಾಜ್ ಪತ್ತಾರ, ಸರಾಫ್ ಬಜಾರ್ ವ್ಯಾಪಾರಿಗಳಾದ ಲಕ್ಷ್ಮಿಕಾಂತ್ ಸೀತನೂರು, ಶಂಭುಲಿಂಗಯ್ಯ ಹಿರೇಮಠ್, ರೇವಣಸಿದ್ಧ ಕಲ್ಲ, ಈರಣ್ಣ ಬಣಗಾರ, ಮೌನೇಶ ಕಮ್ಮಾರ, ನರಸಿಂಹಚಾರ್ಯ, ಮಹಿಳಾ ಸಂಘಟನೆಯ ಗೀತಾ ಸುರೇಂದ್ರ ಸ್ವಾಮೀಜಿ, ಜಯಂತಿ ಹೇಮನೂರು, ಸುವರ್ಣ ಹೇಮನೂರ್, ಶ್ರೀದೇವಿ ಡಿ ಪತ್ತಾರ, ಪಾರ್ವತಿ ಕಮ್ಮಾರ, ಸಂಗೀತ ಮಾರುತಿ ಎಂ ಕಮ್ಮಾರ್, ಶೃತಿ ಎಂ ಕಮ್ಮಾರ್ ಬಡಾವಣೆಯ ಹಲವಾರು ಗಣ್ಯ ವ್ಯಕ್ತಿಗಳು ಉಪಸ್ಥಿತರಿದ್ದರು.