ವಿಶ್ವಕರ್ಮ ನಿಗಮಮಂಡಳಿಗೆ ಅಧ್ಯಕ್ಷ ಸ್ಥಾನ ನೀಡುವಂತೆ ಒತ್ತಾಯ

ಮಾನ್ವಿ,ಜೂ.೦೮-
ಕಳೆದ ನಲ್ವತ್ತು ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ನಿಷ್ಠಾವಂತ ಕಾರ್ಯಕರ್ತರಾಗಿ ಸಣ್ಣ ನೀರಾವರಿ ಸಚಿವರಾದ ಎನ್.ಎಸ್ ಬೋಸರಾಜ ಅವರ ಆತ್ಮೀಯರಾಗಿ ವಿಶ್ವಕರ್ಮ ಸಮಾಜದ ಜಿಲ್ಲಾ ಉಪಾಧ್ಯಕ್ಷ ಹಾಗೂ ರಾಜ್ಯ ನಾಮನಿರ್ದೇಶನ ಸದಸ್ಯರಾಗಿ ಸೇವೆ ಸಲ್ಲಿಸಿರುವ ಅಂಬಣ್ಣ ಸಾಹುಕಾರ್ ಮದ್ಲಾಪೂರು ಇವರನ್ನು ರಾಜ್ಯ ವಿಶ್ವಕರ್ಮ ಸಮಾಜದ ನಿಗಮ ಮಂಡಳಿಯ ಅಧ್ಯಕ್ಷರನ್ನಾಗಿ ಆಯ್ಕೆ ಮಾಡುವಂತೆ ಕರ್ನಾಟಕ ರಾಜ್ಯ ಸರ್ಕಾರಕ್ಕೆ ಹಾಗೂ ಸಣ್ಣ ನೀರಾವರಿ ಸಚಿವರಿಗೆ ಒತ್ತಾಯ ಮಾಡಲಾಗುತ್ತದೆ ಎಂದು ವಿಶ್ವಕರ್ಮ ಸಮಾಜ ಹಿರಿಯ ಮುಖಂಡ ಮನೋಹರ ವಿಶ್ವಕರ್ಮ ವಕೀಲರು ಒತ್ತಾಯಿಸಿದರು.
ಪಟ್ಟಣದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತಾನಾಡಿದ ಅವರು ಅಂಬಣ್ಣ ಸಾಹುಕಾರ್ ಮದ್ಲಾಪೂರು ಇವರು ಕಳೆದ ನಲ್ವತ್ತು ವರ್ಷಗಳಿಂದ ನಮ್ಮ ವಿಶ್ವಕರ್ಮ ಸಮಾಜದ ಏಳಿಗೆಗಾಗಿ ಹಗಲಿರುಳು ಶ್ರಮಿಸಿದ್ದಾರೆ ಈ ಮೊದಲು ಕೂಡ ರಾಜ್ಯ ನಾಮನಿರ್ದೇಶಕರಾಗಿ ಸದಸ್ಯರಾಗಿ ದುಡಿದಿರುವ ಅನುಭವವನ್ನು ಹೊಂದಿರುವ ಇವರಿಗೆ ಕಾಂಗ್ರೆಸ್ ಸರ್ಕಾರ ಹಾಗೂ ಪಕ್ಷದ ವರಿಷ್ಠರು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಅಂಬಣ್ಣ ಮದ್ಲಾಪೂರು ಇವರನ್ನು ರಾಜ್ಯ ಅಧ್ಯಕ್ಷ ಸ್ಥಾನಕ್ಕೆ ನೇಮಕ ಮಾಡಬೇಕು ಹಾಗೂ ಇದಕ್ಕೆ ಸ್ಥಳೀಯ ಕಾಂಗ್ರೆಸ್ ಪಕ್ಷದ ನಾಯಕರು ಇದನ್ನು ಬೆಂಬಲಿಸುವಂತೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಆಕಾಂಕ್ಷಿ ಅಂಬಣ್ಣ ಸಾಹುಕಾರ್ ಮದ್ಲಾಪೂರು, ಜಿಲ್ಲಾ ಕಾರ್ಯದರ್ಶಿ ಮೌನೇಶ ಸಲಾವಾಡಗಿ, ಪ್ರವೀಣ್ ಜಂಬಲದಿನ್ನಿ, ಸತೀಶ್ ವಿಶ್ವಕರ್ಮ ತಾಲೂಕ ಅಧ್ಯಕ್ಷ, ಮಾನಯ್ಯ ಬಡಿಗೇರಾ, ವಿ ಮೋಹನ್, ಮಲ್ಲಿಕಾರ್ಜುನ ಕವಿತಾಳ, ಮಾನಯ್ಯ, ರಮೇಶ ಸಾಹುಕಾರ, ಮೋನಪ್ಪ, ಮಹೇಶ ನೀರಮಾನವಿ ಸೇರಿದಂತೆ ಅನೇಕರು ಇದ್ದರು.