ವಿಶ್ವಕರ್ಮ ಜಿಲ್ಲಾಧ್ಯಕ್ಷರೆಂದು ಸುಳ್ಳು ಹೇಳಿಕೆ:ಆರೋಪ

ಬೀದರ್,ಮೇ 22: ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ಯುವ ಘಟಕದ ಜಿಲ್ಲಾಧ್ಯಕ್ಷರೆಂದು ಪ್ರಶಾಂತ್ ವಿಶ್ವಕರ್ಮ ಎಂಬುವವರು ಪತ್ರಿಕೆಯಲ್ಲಿ ಪ್ರಕಟಣೆ ನೀಡಿ ಸಮಾಜದ ಹೆಸರನ್ನು ದುರ್ಬಳಕೆ ಮಾಡುತ್ತಿದ್ದಾರೆ ಎಂದು ಬೀದರ ಜಿಲ್ಲಾ ವಿಶ್ವಕರ್ಮ ಸಮಾಜ ಸಮಿತಿ ಜಿಲ್ಲಾ ಅಧ್ಯಕ್ಷ ಮಹೇಶ್ ಪಂಚಾಳ ಆರೋಪಿಸಿದ್ದಾರೆ.
ಒಂದು ಜಿಲ್ಲೆಯಲ್ಲಿ ಅಧ್ಯಕ್ಷರಾಗಬೇಕಾದಲ್ಲಿ ಸಮಾಜದ ಗಣ್ಯರು ಹಾಗೂ ಹಿರಿಯರ ಹಾಗೂ ಬೀದರ ಜಿಲ್ಲೆಯ ಎಲ್ಲಾ ತಾಲೂಕಿನ ಸಮಾಜದ ಸಮ್ಮುಖದಲ್ಲಿ ಸಭೆಯಲ್ಲಿ ನಿರ್ಣಯ ಮಾಡಬೇಕಾಗುತ್ತದೆ.ಬೀದರ್ ನಗರದ ನಮ್ಮದೇ ಆದ ಮೂರು ದೇವಸ್ಥಾನಗಳಿದ್ದು ಜಗದ್ಗುರು ಮೌನೇಶ್ವರ ದೇವಸ್ಥಾನ, ಕಾಳಿಕಾದೇವಿ ದೇವಸ್ಥಾನ,ವಿಶ್ವಕರ್ಮ ದೇವಸ್ಥಾನದ ಅಧ್ಯಕ್ಷರಾಗಲಿ ಸಮಾಜದ ಪದಾಧಿಕಾರಿಗಳಾಗಲಿ ಸಮಾಜ ಹಿರಿಯರಾಗಲಿ, ಯಾರ ಸಮ್ಮುಖದಲ್ಲಿ ಕೂಡ ಇವರು ಯುವ ಘಟಕದ ಅಧ್ಯಕ್ಷರಾಗಿಲ್ಲ ಎಂದಿದ್ದಾರೆ.