
ಸಂಜೆವಾಣಿ ವಾರ್ತೆ
ಹಗರಿಬೊಮ್ಮನಹಳ್ಳಿ.ಫೆ.26ಮೂಢನಂಬಿಕೆಯಿಂದ ಹೊರಬಂದು ಒಳ್ಳೆಯ ಶಿಕ್ಷಣ ಕಲಿತರೆ ಸಮುದಾಯವನ್ನು ಜಾಗೃತಗೊಳಿಸಲು ಸಾಧ್ಯ ಎಂದು ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ರಾಜ್ಯದ್ಯಕ್ಷ ಕೆ ಪಿ ನಂಜುಂಡಿ ಹೇಳಿದರು.
ಪಟ್ಟಣದ ವಿಶ್ವಕರ್ಮ ಭವನದಲ್ಲಿ 25ನೇ ವರ್ಷದ ಮೌನೇಶ್ವರ ಮಹೋತ್ಸವ ಅದು ಜನಜಾಗೃತಿ ಸಮಾವೇಶವನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದರು ವಾಸ್ತವಿಕವಾಗಿ ನಾವು ಪ್ರಜಾಪ್ರಭುತ್ವದಲ್ಲಿ ಏನೋ ತಿಳಿದುಕೊಳ್ಳಬೇಕು ಅದನ್ನು ಮರೆತು ಬಿಡುತ್ತೇವೆ. ಭಾರತ ದೇಶದಲ್ಲಿ ಕಟ್ಟಿರುವ ಗುಡಿ ಗೋಪುರ ವಿಶ್ವಕರ್ಮ ಸಮಾಜ ಆದರೆ ಈ ಸಮಾಜಕ್ಕೆ ನ್ಯಾಯ ಸಿಕ್ಕಿಲ್ಲ. ಪ್ರಜಾಪ್ರಭುತ್ವದಲ್ಲಿ ನಾವು ಎಲ್ಲಿ ಇದ್ದೇವೆ ಎಂಬುದು ತಿಳಿದುಕೊಳ್ಳಲು ಸಂವಿಧಾನ ಓದಬೇಕು, ಮೀಸಲಾತಿ ಮಹತ್ವ ತಿಳಿಯಬೇಕು ಜೊತೆಗೆ ಇಂಥ ಜಾಗೃತಿ ಕಾರ್ಯಕ್ರಮ ನಡೆಯಬೇಕು. ವಿಶ್ವಕರ್ಮ ಸಮಾಜದ ಬಲಹೀನತೆ ಏನು? ಇತಿಹಾಸವನ್ನು ಸಾರುವಂತಹ ಸಮಾಜ ನಮ್ಮದು. ಸಾಮಾಜಿಕ ನ್ಯಾಯ ಬಂದಿದೆ ಎಂದರೆ ವಿಶ್ವಕರ್ಮ ಕುಲಕಸಬಿನಿಂದ ಬಂದಿದೆ. ಸಮಾಜದಲ್ಲಿ ರಾಜಕೀಯವಾಗಿ ಆರ್ಥಿಕವಾಗಿ ಶೈಕ್ಷಣಿಕವಾಗಿ ಮುಂದೆ ಬಂದಿಲ್ಲ. ಕಾರಣ ಮೀಸಲಾತಿ ನಮ್ಮ ಸಮುದಾಯವನ್ನು ಎಸ್ ಟಿ ವರ್ಗಕ್ಕೆ ಸೇರ್ಪಡೆ ಅತ್ಯವಶ್ಯವಾಗಿದೆ. ನಾವು ಬ್ರಾಹ್ಮಣರಲ್ಲ ವಿಶ್ವ ಬ್ರಾಹ್ಮಣ ಪಂಗಡದಲ್ಲಿ ಬರುತ್ತೇವೆ 39 ಪಂಗಡಗಳು ಸೇರಿ ವಿಶ್ವಕರ್ಮ ಜಾತಿಯ ಹೆಸರಿದೆ ಎಂದರು.
ಸಂದರ್ಭದಲ್ಲಿ ವಿಶ್ವಕರ್ಮ ಸಮುದಾಯದ ಗುರುನಾಥ್ ಸ್ವಾಮೀಜಿ, ಪುರೋಹಿತರಾದ ಬಸವರಾಜ ಕಲ್ಲಳ್ಳಿ, ಕಾರ್ಯದರ್ಶಿ ಬ್ರಹ್ಮ ಗಣೇಶ್,ಜಿಲ್ಲಾಧ್ಯಕ್ಷ ಬಿಜಿ ಬಡಿಗೇರ್ ತಾಲೂಕ ಅಧ್ಯಕ್ಷ ಬಡಿಗೇರ್ ಬಸವರಾಜ್ ಗೌರವಾಧ್ಯಕ್ಷ ಸಿಎಚ್ ಸಿದ್ದರಾಜು ನೌಕರರ ಸಂಘದ ತಾಲೂಕ ಘಟಕದ ಅಧ್ಯಕ್ಷ ಎ. ರಾಘವೇಂದ್ರ ಯುವ ಘಟಕದ ಅಧ್ಯಕ್ಷ ಕೆ ಮಂಜುನಾಥ ಪ್ರಮುಖರಾದ ಸಿದ್ದಪ್ಪ ಬಡಿಗೇರ್, ಮಂಜುನಾಥ್ ಚಿoತ್ರಪಳ್ಳಿ, ಮುತ್ತು, ಬಿ ವಿರೇಶ್, ಎ. ರಮೇಶ್ ಪಿ ಸಂತೋಷ, ಮೌನೇಶ್ ಇತರರಿದ್ದರು.
ಪ್ರಾರ್ಥನೆ ಕವಿತಾ ರಮೇಶ್, ಸ್ವಾಗತ ಕುಮಾರ್ ಆಚಾರ್, ನೆರವೇರಿಸಿದರು.