ವಿಶ್ವಕರ್ಮ ಕಾರ್ಮಿಕರಿಗೆ ಬಡಿಗೆತನ ಮಳಿಗೆಗಾಗಿ ಸ್ಥಳ ಮಂಜೂರಿಗಾಗಿ ಮನವಿ

ಬೀದರ:ಮಾ.29:ವಿಶ್ವಕರ್ಮ ಕಾರ್ಮಿಕರಿಗೆ ಬಡಿಗೆತನ ( ಕಾಪೆರ್ಂಟರ್ ) ಕೆಲಸ ಮಾಡಲು ಮಳಿಗೆಗಳಿಗಾಗಿ ಸ್ಥಳ (ಜಾಗ) ಮಂಜೂರು ಮಾಡಬೇಕೆಂದು ಬೀದರ ಜಿಲ್ಲಾ ವಿಶ್ವಕರ್ಮ ಸಮಾಜ ಸಮಿತಿ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.

ಬಡಿಗೆಗ ಕೆಲಸ ಮಾಡುವ ನಾವು, ರಂಧ್ರ, ಮನ್, ಪದ ಮಷಿನ್, ಬವಾರು ಯಂತ್ರೋಪಕರಣೆಗಳ ಕರ್ಕಷ ಪಬ್ದಗಳಿಂದ, ಅದರಿಂದ ಬರುವ ವಾಯುಮಾಲಿನ್ಯ ಮತ್ತು ಶಬ್ದಮಾಲಿನ್ಯ, ಅಕ್ಕಪಕ್ಕದ ಮಳಿಗೆಗಳಿಗೆ ಕೆಲಸ ಮಾಡುವಾಗ ತುಂಬಾ ತೊಂದರೆಯಾಗುತ್ತಿದೆ. ಅಕ್ಕ ಪಕ್ಕದ ಅಂಗಡಿಯ ಜನರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದು ಜಿಲ್ಲಾ ವಿಶ್ವಕರ್ಮ ಸಮಾಜ ಸಮಿತಿಯ ಗೌರವ ಅಧ್ಯಕ್ಷರು ಶ್ರೀನಿವಾಸ ವಿಶ್ವಕರ್ಮ, ಬೀದರ್ ಜಿಲ್ಲಾ ವಿಶ್ವಕರ್ಮ ಸಮಾಜ ಸಮಿತಿಯ ಅಧ್ಯಕ್ಷರಾದ ಮಹೇಶ್ ಪಂಚಾಳ ಮತ್ತು ಪ್ರಧಾನ ಕಾರ್ಯದರ್ಶಿ ವಿಶ್ವಕರ್ಮ ಶಿವಾನಂದ, ಉಪಾಧ್ಯಕ್ಷರಾದ ಪಾಂಡುರಂಗ ವಿಶ್ವಕರ್ಮ,ದತ್ತಾತ್ರಿ ವಿಶ್ವಕರ್ಮ, ಖಜಾಂಚಿ ನಾರಾಯಣ ವಿಶ್ವಕರ್ಮ , ಬೀದರ್ ವಿಶ್ವಕರ್ಮ ಸಮಾಜದ  ಹಿರಿಯರು, ಬಾಬುರಾವ್ ವಿಶ್ವಕರ್ಮ ಚಾಂಬೋಳ,  ಮೋನಪ್ಪ ಇರಪಲ್ಲಿ , ಬಡಿಗೇರ್, ಸಿದ್ಧಾರೂಢ ವಿಶ್ವಕರ್ಮ,ಬಾಬುರಾವ್ ಚಿಮಕೊಡ್, ಗುರುನಾಥ್ ವಿಶ್ವಕರ್ಮ ಇಪ್ಪೇಪಲ್ಲಿ, ರಾಜಕುಮಾರ್ ಹಳದಕೆರಿ,ಕೃಷ್ಣ ವಿಶ್ವಕರ್ಮ,ಮೋನಪ್ಪ ಶಾಮರಾವ್ ವಿಶ್ವಕರ್ಮ, ಅಮೂಲ ವಿಶ್ವಕರ್ಮ,ನಾಗೇಶ್ ಚಾಂಬೋಳ,ವಿಜಯಕುಮಾರ್ ಹಲಬರ್ಗ,ಗಣಪತಿ ವಿಶ್ವಕರ್ಮ ಹಳದಕೆರಿ.ಮನೋಹರ್ ಮಡಕಿ ತಿಳಿಸಿದ್ದಾರೆ
ಮಳಿಗೆ ಮಾಲೀಕರು ಬಾಡಿಗೆ ನೀಡಲು ನಿರಾಕರಿಸುತ್ತಿದ್ದಾರೆ. ಅಲ್ಲದೆ ಬಾಡಿಗೆ ದರ ಕೂಡ ಬೇಕಾಬಿಟ್ಟಿಗೆ ಮಾಡುತ್ತಿರುವುದರಿಂದ ಮಳಿಗೆÀಗಳ ಬಾಡಿಗೆ ನಿರ್ವಹಣೆ ಮಾಡಲು ಆಗುತ್ತಿಲ್ಲಾ ಇದದಿಂದ ಬೆಸತ್ತು  ಸೂಮಾರು ಕಾರ್ಮಿಕರಿಗೆ ಬಹಳಷ್ಟು ತೊಂದರೆಯಾಗುತ್ತಿದೆ ಎಂದು ಅವರು ಮನವಿ ಪತ್ರದಲ್ಲಿ ತಮ್ಮ ಗೋಳು ತೊಡಿಕೊಂಡಿದ್ದಾರೆ.

ಬಂಡಿಗತನ ( ಕಾಪೆರ್ಂಟರ್ ) ಕಲಸ ಮಾಡುವವರಿಗೆ 4 ಎಕರೆ ಜಮಿನನ್ನು ಸಮಾಜಕ್ಕೆ ಮಳಿಗೆಗಳನ್ನು ನಿರ್ಮಿಸಿಕೊಳ್ಳಲು ಸರಕಾರಿ ಜಮಿನನ್ನು ಮಂಜೂರು ಮಾಡಿಕೊಡಬೇಕೆಂದು ಅವರು ಮನವಿ ಮಾಡಿದ್ದಾರೆ.