ವಿಶ್ವಕರ್ಮ ಅಮರ ಶಿಲ್ಪಿ ಜಕಣಾಚಾರಿ ಜಯಂತಿ

ಕಂಪ್ಲಿ ಜ 01 : ಪಟ್ಟಣದ ತಾಲೂಕು ಕಚೇರಿ ಸಭಾಂಗಣ ಆವರಣದಲ್ಲಿ ಶುಕ್ರವಾರ ವಿಶ್ವಕರ್ಮ ಅಮರ ಶಿಲ್ಪಿ ಜಕಣಾಚಾರಿ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಶಿರಸ್ತೇದಾರ ರೇಖಾ ಮಾತನಾಡಿ, ದೇಶದ ಯಾವುದೇ ಶಾಸನ, ಶಿಲ್ಪಕಲೆ ನೋಡಿದರೆ ವಿಶ್ವಕರ್ಮ ಸಮುದಾಯದ ನೆನಪಾಗುತ್ತದೆ. ಇಂಥದ್ದೊಂದು ವೈಶಿಷ್ಟ್ಯವುಳ್ಳ ಸಮುದಾಯಕ್ಕೆ ಚಲನೆಶೀಲತೆ ಹೆಚ್ಚಿಸುವ ನಿಟ್ಟಿನಲ್ಲಿ ಅಮರಶಿಲ್ಪಿ ಜಕಣಾಚಾರಿ ಜಯಂತಿಯನ್ನು ಸರ್ಕಾರದ ವತಿಯಿಂದ ಆಚರಿಸಲಾಗುತ್ತಿದೆ. ವಿವಿಧ ಸಮುದಾಯಗಳ ಮಹನೀಯರ ಜಯಂತಿ ಆಚರಣೆಯಿಂದ ಸಮಾಜದಲ್ಲಿ ಸಮುದಾಯ ಭೇದವಿಲ್ಲದ ಸ್ವಾಸ್ಥ್ಯ ವಾತಾವರಣ ನಿರ್ಮಾಣವಾಗಲಿದೆ ಎಂದು ಅಭಿಪ್ರಾಯಪಟ್ಟರು.
ಅಖಿಲ ಭಾರತೀಯ ವಿಶ್ವಕರ್ಮ ಮಹಾಸಭಾದ ರಾಜ್ಯ ಸಂಚಾಲಕ ಎಂ.ಮಂಜುನಾಥ ಮಾತನಾಡಿ,ಎಲ್ಲಾ ಸರ್ಕಾರಿ ಕಚೇರಿ ಹಾಗು ಶಾಲಾ-ಕಾಲೇಜುಗಳಲ್ಲಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆ ಆಚರಿಸುವ ನಿಟ್ಟಿನಲ್ಲಿ ಸರ್ಕಾರ ಭಾವಚಿತ್ರ ಒದಗಿಸುವಲ್ಲಿ ಮುತುವರ್ಜಿ ತೋರಬೇಕು ಎಂದು ಆಗ್ರಹಿಸಿದರು.
ವಿಶ್ವಕರ್ಮ ಸಮಾಜದ ಪ್ರಮುಖರಾದ ರಾಮಚಂದ್ರಾಚಾರ್, ಅಳ್ಳಳ್ಳಿ ಮೌನೇಶಾಚಾರಿ, ಎ.ಯಂಕಪ್ಪ, ಗಿರಿರಾಜ, ಚಿಂತಕುಂಟಿ ಚಂದ್ರಶೇಖರ್, ಗೋವರ್ಧನ, ಕಂದಾಯ ನಿರೀಕ್ಷಕ ಎ.ಗಣೇಶ್, ವನಿತಾ, ಶ್ವೇತಾ, ಕಾವ್ಯ, ಗ್ರಾಲೆಗಳಾದ ಶರೀಫ್, ವಿರುಪಾಕ್ಷಗೌಡ, ಖುರೇಷಿ, ರಾಘವೇಂದ್ರ, ಪಿ.ಸಿ.ಅಂಜಿನಿ, ಸರ್ವೇಯರ್ ಮಹಾಂತೇಶ್ ಇತರರಿದ್ದರು.
ಪುರಸಭೆ: ಪುರಸಭೆ ಕಚೇರಿಯಲ್ಲೂ ಜಕಣಚಾರಿ ಸಂಸ್ಮರಣ ದಿನ ಜರುಗಿತು. ಮುಖ್ಯಾಧಿಕಾರಿ ರಮೇಶ್ ಬಡಿಗೇರ್, ಕಂದಾಯ ಅಧಿಕಾರಿ ಕೆ.ವೆಂಕೋಬಾ, ಜೆಇ ಗೋಪಾಲ್, ವ್ಯವಸ್ಥಾಪಕ ಅನಂತರಾಮ್, ಲೆಕ್ಕಿಗ ರಮೇಶ್ ಬೆಳಂಕರ್, ಸಮುದಾಯ ಸಂಘಟಕಿ ವಸಂತಮ್ಮ, ಸಿಬ್ಬಂದಿ ಅನೇಕರಿದ್ದರು.