ವಿಶ್ವಕರ್ಮ ಅಮರಶಿಲ್ಪಿ ಜಕಣಾಚಾರಿ ಜಯಂತಿ

ವಿಜಯಪುರ:ಜ.2:ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಯೋಗದೊಂದಿಗೆ ವಿಶ್ವಕರ್ಮ ಅಮರ ಶಿಲ್ಪಿ ಜಕಣಾಚಾರಿ ಜಯಂತಿಯನ್ನು ಕೊವಿಡ್-19ರ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಪಿ.ಸುನೀಲಕುಮಾರ್ ಭಾವಚಿತ್ರಕ್ಕೆ ಪುಷ್ಪಾರ್ಚನೆಯ ಸಲ್ಲಿಸುವ ಮೂಲಕ ಸರಳವಾಗಿ ಆಚರಿಸಲಾಯಿತು.

ಸಭೆಯಲ್ಲಿ ವಿಜಯಪುರ, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಸಹಾಯಕ ನಿರ್ದೇಶಕರಾದ ಈರಣ್ಣ ಆಶಾಪೂರ, ಸೋಮನಗೌಡ ಕಲ್ಲೂರ, ದೇವೇಂದ್ರ, ಭೀಮರಾಯ ಜಿಗಜಿಣಗಿ, ಗಿರೀಶ ಕುಲಕರ್ಣಿ, ಸಮಾಜದ ಶ್ರೀಗಳಾದ ಶ್ರೀ ಶ್ರೀ ಪರಮಪೂಜ್ಯ ಮಹೇಂದ್ರ ಮಹಾಸ್ವಾಮಿಗಳು ಮೂರುಜಾವದ ಮಠ, ಶ್ರೀ ಶ್ರೀ ಪರಮಪೂಜ್ಯ ನಾಗೇಂದ್ರ ಮಹಾಸ್ವಾಮಿಜಿ, ಶ್ರೀಕಾಂತ ಕುಂದಣಗಾರ, ಪ್ರದೀಪ ಗಿರಗಾಂವ್‍ಕರ, ಪ್ರಮೋದ ಬಡಿಗೇರ, ಸಂತೋಷ ವಿಶ್ವಕರ್ಮ, ವಿನಾಯಕ ವಿಜಾಪೂರಕರ್, ಉದಯ ಸೋನಾರ, ಗಾಯತ್ರಿ ವಿಶ್ವಕರ್ಮ ಮಹಿಳಾ ಮಂಡಳಿಯ ಸದಸ್ಯರು ಜಿಲ್ಲಾಧಿಕಾರಿಗಳ ಕಚೇರಿಯ ಸಿಬ್ಬಂದಿಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು.