ವಿಶ್ವಕರ್ಮರ ಸಕಾರಾತ್ಮಕ ಬೇಡಿಕೆಗೆ ಸ್ಪಂಧನೆ-ಡಿಸಿ

ಕೋಲಾರ,ಸೆ.೨೩: ಜಿಲ್ಲೆಯ ವಿಶ್ವಕರ್ಮರ ಹಲವು ಬೇಡಿಕೆಗಳನ್ನು ಜಿಲ್ಲಾಡಳಿತ ಸರ್ಕಾರದ ಮಿತಿಯಲ್ಲಿ ಈಡೇರಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ. ಆರ್. ಸೆಲ್ವಮಣಿ ಅವರು ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕೋಲಾರ ಜಿಲ್ಲಾ ವಿಶ್ವಕರ್ಮ ಮಹಾಸಭಾದ ನಿಯೋಗದ ಮನವಿ ಸ್ವೀಕರಿಸಿ ಮಾತನಾಡಿದರು.
ವಿಶ್ವಕರ್ಮರ ಮೂಲ ಕಸುಬುಗಳ ಜೊತೆಗೆ ಕೌಶಲ್ಯಾಭಿವೃದ್ಧಿಯ ಅಡಿಯಲ್ಲಿ ಬರುವ ವಿವಿಧ ತರಬೇತಿ ನೀಡಲು ಸಾಧ್ಯವಿದ್ದು ಮಹಾಸಭಾದ ಅಧ್ಯಕ್ಷರು ಈ ಬಗ್ಗೆ ನಿರಂತರ ಸಂಪರ್ಕದಲ್ಲಿರಲು ಸೂಚಿಚಿದರು.
ಈಗಲೇ ಶಿವಾರಪಟ್ಟಣ್ಣದಲ್ಲಿ ಶಿಲ್ಪ ಗ್ರಾಮ ನಿರ್ಮಾಣಕ್ಕೆ ಸರ್ಕಾರದಿಂದ ಎರಡು ಕೋಟಿ ಬಿಡುಗಡೆ ಮಾಡಲಾಗಿದೆ. ನಾಲ್ಕು ಎಕರೆ ಭೂಮಿಯನ್ನು ಸಕ್ರಮಗೊಳಿಸುತ್ತಿದ್ದು, ಕೆಲ ಭಾಗದಲ್ಲಿ ಒತ್ತುವರಿಯನ್ನು ಸ್ವಾಧೀನಕ್ಕೆ ಪಡೆಯಾಲಾಗುತ್ತಿದೆ ಎಂದರು.
ಶಿಲ್ಪ ಗ್ರಾಮದ ನೀಲಿನಕ್ಷೆ ಕುರಿತು ಜಿಲ್ಲಾಧಿಕಾರಿಗಳು, ವಿಶ್ವಕರ್ಮ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಬಾಬು ಪತ್ತಾರ್ ಅವರೊಂದಿಗೆ ದೂರವಾಣಿ ಮುಖಾಂತರ ಮಾತನಾಡಿದರು.
ಸೆಪ್ಟೆಂಬರ್ ೧೭ ರಂದು ವಿಶ್ವಕರ್ಮ ಜಯಂತಿ ಆಚರಣೆ ಮಾಡುವ ವಿಚಾರದಲ್ಲಿ ಮಾಲೂರು ತಾಲ್ಲೂಕು ವಿಶ್ವಕರ್ಮ ಸಂಘಟನೆಯನ್ನು ನಿರ್ಲಕ್ಷ್ಯ ಮಾಡಿ, ವಿಶ್ವಕರ್ಮರನ್ನು ಬಿಟ್ಟು ಕೆಲವೇ ಅಧಿಕಾರಿಗಳು ಕಾಟಾಚಾರಕ್ಕೆ ಜಯಂತಿ ಆಚರಿಸಿರುವ ಬಗ್ಗೆ ಮಾಲೂರು ತಾಲ್ಲೂಕು ವಿಶ್ವಕರ್ಮ ಸಂಘದ ಅಧ್ಯಕ್ಷರಾದ ಕೃ??ಣಚಾರ್ ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಲಾಗಿ, ಕೂಡಲೇ ವಿಭಾಗಾಧಿಕಾರಿಗಳ ಮಟ್ಟದಲ್ಲಿ ತನಿಖೆ ನಡೆಸುವುದಾಗಿ ಡಿಸಿ ತಿಳಿಸಿದರು.
ಈ ಸಂದರ್ಭದಲ್ಲಿ ಕೋಲಾರ ವಿಶ್ವಕರ್ಮ ಮಹಾಸಭಾದ ಜಿಲ್ಲಾ ಅಧ್ಯಕ್ಷರಾದ ಕಲಾವಿದ ವಿಷ್ಣು, ಗೌರವಾಧ್ಯಕ್ಷ ಪ್ರಭಾಕರಾಚಾರ್, ಖಜಾಂಚಿ ಡಿ. ಹರಿಪ್ರಕಾಶ್, ಪ್ರಧಾನ ಕಾರ್ಯದರ್ಶಿ ಕೆ. ಎನ್. ಶ್ರೀನಿವಾಸಚಾರ್, ಸದಸ್ಯರಾದ ಕೆ.ಕೆ. ಸುರೇಶ್ ಜಿ.ಎನ್. ಶಿವಣ್ಣಾಚಾರ್, ಮಾಲೂರು ತಾಲ್ಲೂಕು ವಿಶ್ವಕರ್ಮ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ಕೃಷ್ಣಾಚಾರಿ, ನಗರಾದ್ಯಕ್ಷರಾದ ಸದಾಶಿವಾಚಾರಿ, ಪದಾಧಿಕಾರಿಗಳಾದ ಸಿ.ಮೋಹನ್, ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್, ಸದಸ್ಯರಾದ ಮೋಹನ್ ಗೋಲ್ಡ್, ಮಂಜುನಾಥಚಾರಿ ಹಾಗೂ ಮತ್ತಿತರರು.