ವಿಶ್ವಕರ್ಮರ ಪರಿಗಣನೆ ಸ್ವಾಗತಾರ್ಹ

ಕಲಬುರಗಿ:ಮೇ.21:ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪವನರು ಘೋಷಿಸಿರುವ ಕೋರೋನಾ ಬೆಂಬಲದ ಪ್ಯಾಕೇಜನಲ್ಲಿ ಈ ಬಾರಿ ವಿಶ್ವಕರ್ಮ ಸಮಾಜವನ್ನು ಪರಿಗಣಿಸಿರುವುದಕ್ಕೆ ಬಿಜೆಪಿ ಜಿಲ್ಲಾ ಗ್ರಾಮಾಂತರ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಸುಜ್ಞಾನಿ ಪೋತದಾರ ಹರ್ಷ ವ್ಯಕ್ತಪಡಿಸಿದ್ದಾರೆ.

ಕಳೆದ ಬಾರಿ ಘೋಷಿಸಿದ್ದ ಪ್ಯಾಕೇಜ್‍ನಲ್ಲಿ ಸಮಾಜಕ್ಕೆ ಏನೂ ಕೊಟ್ಟಿರಲಿಲ್ಲ ಆದರೆ ಮುಖ್ಯಮಂತ್ರಿಗಳು ಈ ಬಾರಿ ಕರಕುಶಲ ಕಲೆಯಲ್ಲಿ ನಿಪುಣರಾಗಿರುವ ವಿಶ್ವಕರ್ಮ ಸಮಾಜವನ್ನು ಪರಿಗಣಿಸಿರುವುದಕ್ಕೆ ಮುಖ್ಯಮಂತ್ರಿಗಳಾದ ಬಿ ಎಸ್ ಯಡಿಯೂರಪ್ಪ ಅವರನ್ನು ಅಭಿನಂದಿಸುವುದಾಗಿ ತಿಳಿಸಿದ್ದಾರೆ.

ವಿಶ್ವಕರ್ಮ ಸಮಾಜದ ಮಹಿಳಾ ಘಟಕದ ಪದಾಧಿಕಾರಿಗಳಾದ ವೈಶಾಲಿ ಪೋತದಾರ, ಭಾರತಿ ಪೋತದಾರ, ವಂದನಾ ಪೋತದಾರ, ತುಳಸಿ ಪೋತದಾರ, ಪುಷ್ಪ ಪೋತದಾರ, ಸುಜಾತಾ ಪೋತದಾರ, ಲಲಿತಾ ಪೋತದಾರ ಮುಖ್ಯಮಂತ್ರಿಗಳ ನಿರ್ಧಾರಕ್ಕೆ ಹರ್ಷ ವ್ಯಕ್ತಪಡಿಸಿದ್ದಾರೆ.