ವಿಶ್ವಕರ್ಮರ ಕೈಯಲ್ಲಿ ಮೂರ್ತಿ ದೇವರ ರೂಪ ಪಡೆಯುತ್ತದೆ:ಶಾಸಕ ರಹೀಂ ಖಾನ

ಬೀದರ ಸೆ.18: ವಿಶ್ವಕರ್ಮ ಸಮುದಾಯದವರು ತೈಯಾರಿಸುವ ಮೂರ್ತಿಗಳು ದೇವರ ಗುಡಿಯಲ್ಲಿ ಅದು ದೇವರ ರೂಪ ಪಡೆಯುತ್ತದೆ ಎಂದು ಬೀದರ ಶಾಸಕರಾದ ರಹೀಂ ಖಾನ ಹೇಳಿದರು.

ಅವರು ಶನಿವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಇವರ ಸಹಯೋಗದಲ್ಲಿ ಪೂಜ್ಯ ಡಾ. ಚನ್ನಬಸವ ಪಟ್ಟದೇವರು ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ ವಿಶ್ವಕರ್ಮ ಜಯಂತಿ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ವಿಶ್ವಕರ್ಮ ಸಮುದಾಯವು ಶ್ರಮಿಕ ವರ್ಗದ ಸಮುದಾಯವಾಗಿದ್ದು, ಇವರು ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಇನ್ನು ಮುಂದೆ ಬಂದಿಲ್ಲ ತಮ್ಮ ತಮ್ಮ ಕಾಯಕದಲ್ಲಿಯೇ ಯಾವಾಗಲೂ ತೊಡಗಿಸಿಕೊಂಡಿರುತ್ತಾರೆ. ಸರ್ಕಾರದಿಂದ ಸಿಗುವ ಸೌಲಭ್ಯಗಳು ಪಡೆಯುವ ಸಲುವಾದರು ತಾವುಗಳು ಮುಂದೆ ಬರಬೇಕು. ಇಂದು ತಂತ್ರಜ್ಞಾನ ಯುಗ ಆಗಿರುವುದರಿಂದ ತಮ್ಮ ಮಕ್ಕಳಿಗೆ ಶಿಕ್ಷಣ ನೀಡಲು ಒತ್ತು ಕೊಡಬೇಕು ಮತ್ತು ತಮಗೆ ಯಾವುದೇ ಸಹಾಯ ಸಹಕಾರ ಬೇಕಾದರೆ ನಿಮ್ಮೊಂದಿಗೆ ನಾನು ಯಾವಾಗಲೂ ಇದ್ದೇನೆ ಎಂದು ಹೇಳಿದರು.

ನನ್ನ ಅವದಿಯಲ್ಲಿ ಯಾವುದೇ ಜಾತಿ, ಬಡವ ಶ್ರೀಮಂತ ಎನ್ನುವ ತಾರತಮ್ಯ ಎಂದಿಗೂ ಮಾಡಿಲ್ಲ ಮತ್ತು ಜಿಲ್ಲೆಯಲ್ಲಿ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ನನ್ನ ಅವದಿಯಲ್ಲಿ ಮಾಡಿದ್ದೇನೆ, ತಮ್ಮೆಲ್ಲರ ಆರ್ಶೀವಾದ ಸದಾಕಾಲ ನನ್ನ ಮೇಲೆ ಇರಲಿ ಎಂದು ಹೇಳಿದರು.

ವಿಶ್ವಕರ್ಮರ ಕುರಿತು ವಿಶೇಷ ಉಪನ್ಯಾಸ ನೀಡಿದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದ ಪ್ರತಿಮಾ ಬೇಹನಜಿ ಅವರು ಮಾತನಾಡಿ ವಿಶ್ವದ ಪ್ರಥಮ ಶಿಲ್ಪಿ ವಿಶ್ವಕರ್ಮನಾಗಿದ್ದಾನೆ. ಅವನು ದುಷ್ಟರನ್ನು ಸಂಹಾರ ಮಾಡಲು ದೇವಾನು ದೇವತೆಗಳಿಗೆ ತ್ರಿಶುಲ ತಯ್ಯಾರಿಸಿಕೊಟ್ಟ ಮತ್ತು ಪ್ರತಿ ಕರ್ಮದಲ್ಲಿಯೂ ಆಧ್ಯಾತ್ಮಿಕ ಸಂದೇಶವನ್ನು ನೀಡಿದ ಹಾಗೂ ಭಾರತವನ್ನು ಸುಂದರ ಸ್ವರ್ಗವನ್ನಾಗಿ ರೂಪಿಸಿದ ಎಂದು ಹೇಳಿದರು.

ಅಪರ ಜಿಲ್ಲಾಧಿಕಾರಿಗಳಾದ ಶಿವಕುಮಾರ ಶೀಲವಂತ ಅವರು ಮಾತನಾಡಿ ವಿಶ್ವಕರ್ಮನು ದ್ವಾರಕ. ಇಂದ್ರಪ್ರಸ್ತ ನಗರಗಳನ್ನು ಸೃಷ್ಟಿಸಿದನು. ವಿಶ್ವಕರ್ಮ ಜನಾಂಗದವರು ಒಗ್ಗೂಡಿ ತಮ್ಮ ಸಮಾಜದ ಅಭಿವೃದ್ಧಿ ಜೊತೆಗೆ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಎಂದು ಹೇಳಿದರು.

ಆನೆಗೊಂದಿ ಸಂಸ್ಥಾನ ಯಾದಗಿರಿ ಮಠದ ಶ್ರೀನಿವಾಸ ಮಹಾಸ್ವಾಮಿಗಳು ವಿಶ್ವಕರ್ಮ ವೃತಕಲ್ಪ ಪುಸ್ತಕವನ್ನು ಬಿಡುಗಡೆ ಮಾಡಿ ವಿಶ್ವಕರ್ಮರ ಕುರಿತು ಆರ್ಶೀವಚನ ನೀಡಿದರು. ಇದೇ ಸಂದರ್ಭದಲ್ಲಿ 2022ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ. ಯಲ್ಲಿ ಅತಿ ಹೆಚ್ಚು ಅಂಕಪಡೆದ ವಿಶ್ವಕರ್ಮ ಕರ್ಮ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಗಣ್ಯರಿಂದ ಸನ್ಮಾನಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಸಿದ್ರಾಮ ಶಿಂಧೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕರಾದ ಜಿ.ಸುರೇಶ, ವಿಶ್ವಕರ್ಮ ಸಮುದಾಯದ ಜಿಲ್ಲಾಧ್ಯಕ್ಷರಾದ ಮಹೇಶ ವಿಶ್ವಕರ್ಮ ಸೇರಿದಂತೆ ವಿಶ್ವಕರ್ಮ ಸಮುದಾಯದವರು ಹಾಗೂ ಇತರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.