ವಿಶ್ವಕರ್ಮರು ದೇವತೆಗಳ ಇಂಜನೀಯರರಾಗಿದ್ದರು:ಪ್ಯಾಟಿ

ಆಳಂದ :ಸೆ.18: ತಾಲೂಕಿನ ಮಾಡಿಯಾಳದ ಜೆಪಿ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಹಮ್ಮಿ ಕೊಂಡಿದ್ದ ಭಗವಾನ್ ವಿಶ್ವಕರ್ಮ ಜಯಂತಿ ಅಂಗವಾಗಿ ಅಧ್ಯಕ್ಷರ ನುಡಿ ಭವಾನ ವಿಶ್ವಕರ್ಮ ಹಿಂದೂ ದೇವತೆಗಳ ವಾಸ್ತುಶಿಲ್ಪಿ ವಿನ್ಯಾಸಕರಾಗಿ ಶಿವನ ತ್ರಿಶೂಲ ವಿಷ್ಣುವಿನ ಸುದರ್ಶನ ಚಕ್ರ ಇಂದ್ರದೇವನ ಧನುಷ್ಯಾ ಕುಬೇರನ ಪುಷ್ಪಕ ವಿಮಾನ ರಾವಣನ ಸ್ವರ್ಣ ಲಂಕೆ ಶ್ರೀ ಕೃಷ್ಣನ ದ್ವಾರಕಾ ನಗರ ಕೌರವ ಪಾಂಡವರ ಇಂದ್ರಪ್ರಸ್ಥ ಹಿಂದೂ ದೇವಾಲಯಗಳ ಸುಂದರ ತೆಯಲ್ಲಿ ನಿರ್ಮಾಣ ಮಾಡಿದ ಭಗವಾನ್ ವಿಶ್ವಕರ್ಮರು ಸ್ಕಂದ ಪುರಾಣದ ಉಲ್ಲೇಖದಂತೆ ಹಿಂದೂ ದೇವತೆಗಳ ಆರ್ಕಿಟೆಕ್ಟ್ ಇಂಜಿನಿಯರ್ ಆಗಿದ್ದರು ಎಂದು ಕಲ್ಬುರ್ಗಿ ನಗರ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಹಾಗೂ ಬಿಜೆಪಿ ಹಿರಿಯ ಮುಖಂಡ ರಾದ ಶಾಮರಾವ್ ಪ್ಯಾಟಿ ಹೇಳಿದರು
ದಿವ್ಯ ಸಾನಿಧ್ಯ ವಹಿಸಿದ ಪರಮಪೂಜ್ಯ ಸದ್ಗುರು ಶ್ರೀ ಪರಮಾನಂದ ಸ್ವಾಮೀಜಿ ಶ್ರೀ ಸಿದ್ಧಾರೂಢ ಮಠ ಯಳಸಂಗಿ ಇವರು ತಮ್ಮ ಆಶೀರ್ವಚನದಲ್ಲಿ ಈ ಭಾಗದ ಕಲ್ಯಾಣ ಕರ್ನಾಟಕ ಅಮೃತ ಮಹೋತ್ಸವದ ಬಗ್ಗೆ ವಿಶ್ವಕರ್ಮರ ಬಗ್ಗೆ ಸುದೀರ್ಘವಾಗಿ ಮಾರ್ಮಿಕವಾಗಿ ಮಾತನಾಡಿದರು ಸರ್ದಾರ ವಲ್ಲಬಾಯ್ ಪಟೇಲರ ಭಾವಚಿತ್ರ ಕ್ಕೆ ವಿಶ್ವನಾಥ್ ಉ ಡಗಿ ಅವರು ಪೂಜಾ ನೆರವೇರಿಸಿದರು ಅದರಂತೆ ಭಗವಾನ್ ವಿಶ್ವಕರ್ಮರ ಭಾವಚಿತ್ರಕ್ಕೆ ಸಿದ್ದರಾಮಯ್ಯ ಕಂಬಾರ್ ಪೂಜೆ ನೆರವೇರಿಸಿದರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಡಾಕ್ಟರ್ ಮುಕುಂದ ಔಟೆ ಡಾಕ್ಟರ್ ಪ್ರಭಾಕರ ಔಟೆ ಡಾ. ರವಿ ಗಾಯಕ್ವಾಡ್ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಶ್ರೀಕಾಂತ ಕೌಲಗಿ ಮುಖ್ಯ ಗುರುಗಳಾದ ಎಸ್ ವಿ ಸೋಲಾಪುರ್ ಶ್ರೀಮತಿ ಆರತಿ ಬೆಳಮಗಿ ಸಿಬ್ಬಂದಿ ಶಿಕ್ಷಕ ವರ್ಗ ಮಕ್ಕಳು ಭಾಗವಹಿಸಿದ್ದರು. ಶರಣಬಸವಪ್ಪ ಉಪ್ಪಿನ್ ಅವರು ನಿರೂಪಿಸಿದರು ಸ್ವಾಗತ ಎಸ್ ವಿ ಸೋಲಾಪುರ್ ಮಾಡಿದರು ವಂದನಾರ್ಪಣೆ ಸಂತೋಷ್ ಖಾನಾಪುರ ಮಾಡಿದರು ರಾಷ್ಟ್ರಗೀತೆಯೊಂದಿಗೆ ಸಭೆಯು ಮುಕ್ತಾಯಗೊಳಿಸಲಾಯಿತು