ವಿಶ್ವಕರ್ಮದ ಸಮಾಜದ ಅಭಿವೃದ್ದಿಗೆ ನೆರವು ಅವಶ್ಯ. – ಆಚಾರ್ಯ

ಸಂಡೂರು :ಜ:11 ವಿಶ್ವಕರ್ಮ ಸಮಾಜವು ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿದ್ದು, ಸರ್ಕಾರ ಸಮಾಜದ ಅಭಿವೃದ್ದಿಗೆ ನೆರವು ನೀಡಬೇಕಾಗಿರುವುದು ಅತೀ ಅವಶ್ಯ. ಎಲ್ಲಾ ಸಮಾಜದವರಂತೆ ವಿಶ್ವಕರ್ಮ ಸಮಾಜದವರು ಪ್ರಗತಿದಾಯಕವಾದ ಆಶಾಭಾವನೆಗಳನ್ನು ಹೊಂದಬೇಕಾದರೆ, ಪ್ರತಿವೋರ್ವರು ವಿದ್ಯಾವಂತರರಾಗಬೇಕಾದುದು ಅವಶ್ಯಕತೆ ಇದೆ. ಜ್ಞಾನಾರ್ಜನೆಯಿಂದ ಮಾತ್ರ ಸಮಾಜವನ್ನ ಮುನ್ನಡೆಸಬೇಕಾಗಿದೆ. ಅನಕ್ಷರಸ್ತರಾದಲ್ಲಿ ಸಮಾಜವನ್ನು ಮುನ್ನಡೆಸಲು ಸಾಧ್ಯವೇ ಇಲ್ಲದ ಕಾರಣ. ನಮ್ಮ ಸಮಾಜ ಹಿನ್ನಡೆಯಾಗಿದೆ. ನಾಡಿನ ಜನರ ಕಲ್ಯಾಣಕ್ಕಾಗಿ ಧಾರ್ಮಿಕ ಕಾರ್ಯಕ್ರಮಗಳು ಅವಶ್ಯವಾಗಿದ್ದು, ಪ್ರತಿವೋರ್ವರು ಎಷ್ಟೇ ತಾಪತ್ರೆಯಗಳಿದ್ದರು, ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ನಮ್ಮ ಒಗ್ಗಟ್ಟನ್ನು ಪ್ರದರ್ಶಿಸಬೇಕಾಗಿದೆ ಎಂದು ವಿಶ್ವಕರ್ಮ ಸೇವಾ ಸಮಿತಿ ಅಧ್ಯಕ್ಷ ಬಿ. ನಾಗಲಿಂಗಪ್ಪ ಆಚಾರಿ ತಿಳಿಸಿದರು.
ಅವರು ತಾರಿಖು :10-01-2021ರಂದು ತೋರಣಗಲ್ಲು ಗ್ರಾಮದ ವಿಶ್ವಕರ್ಮ ಜಗದ್ಗುರು ಕಾಳ ಹಸ್ತೆಂದ್ರ ಸ್ವಾಮಿ ದೇವಸ್ಥಾನದಲ್ಲಿ ಸ್ವಾಮಿಯ ಆರಾಧನ ಮುಹೋತ್ಸವದ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದರು. ಪರುಸಭಾ ಮುಖ್ಯಾಧಿಕಾರಿ ಸತ್ಯನಾರಾಯಣ ರಾವ್, ಅಧ್ಯಕ್ಷ ವಿ. ರಾಜೇಶಖರ, ಸದಸ್ಯರಾದ ಜಿ.ಎಸ್. ವೆಂಕಟರಮಣ ಮಂಜುನಾಥ, ಸುನೀಲಾ, ಕನ್ನಿಕೇರಿ ಪಂಪಾಪತಿ, ರಾಮಚಂದ್ರಪ್ಪ ಗೋಪಾಲ ಉಪಸ್ಥಿತರಿದ್ದರು.