ವಿಶ್ವಕಪ್ ಪ್ರಶಸ್ತಿ ಮರೆಯಲಾಗದ ಕ್ಷಣ:ಸೆಹ್ವಾಗ್


ನವದೆಹಲಿ.ಏ.೨- ಭಾರತೀಯ ಕ್ರಿಕೆಟ್ ತಂಡ ೨೦೧೧ರಲ್ಲಿ ವಿಶ್ವಕಪ್ ಕ್ರಿಕೆಟ್ ಪ್ರಶಸ್ತಿಯನ್ನು ಮುಡಿಗೇರಿಸಿ ಇಂದಿಗೆ ೧೦ ವರ್ಷ ಪೂರೈಸಿದೆ. ಆದರೆ, ಈ ಐತಿಹಾಸಿಕ ಘಳಿಗೆ ಇನ್ನು ಅಭಿಮಾನಿಗಳ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದೆ.
ಈ ಒಂದು ದಶಕದ ಸಂತಸವನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ನೆನಪುಗಳನ್ನು ಮೆಲುಕು ಹಾಕಿದೆ. ವಿಶ್ವಕಪ್ ಗೆದ್ದು ೧೦ ವರ್ಷದ ನಂತರವು ನಮ್ಮ ಮನಸ್ಸಿನಲ್ಲಿ ಆ ಅಭೂತಪೂರ್ವ ನೆನಪುಗಳು ಇನ್ನು ಅಚ್ಚಳಿಯದೆ ಉಳಿದಿದೆ ಎಂದು ಬಿಸಿಸಿಐ ಟ್ವೀಟ್ ಮಾಡಿದೆ.ತೆಯನ್ನು ಹಾಡಿ ಭರ್ಜರಿಯಾಗಿ ವಿಜಯೋತ್ಸವ ಆಚರಿಸಲಾಗಿತ್ತು.


ನವದೆಹಲಿ,ಏ.೨- ದಶಕದ ಹಿಂದೆ ಭಾರತೀಯ ಕ್ರಿಕೆಟ್ ತಂಡ ವಿಶ್ವಕಪ್ ಪ್ರಶಸಿ ಗೆದ್ದಿರುವುದು ತಮ್ಮ ಜೀವಮಾನದ ಮರೆಂiiಲಾಗದ ಅತ್ಯುತ್ತಮ ಕ್ಷಣ ಎಂದು ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್ ಬಣ್ಣಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಈ ಸ್ಮರಣೀಯ ನೆನಪುಗಳಿಗೆ ಮತ್ತೊಮ್ಮೆ ತಾಜಾತನ ತುಂಬಿರುವ ವಿಜೇತ ತಂಡದ ಸದಸ್ಯರಾಗಿರುವ ಸೆಹ್ವಾಗ್ ಈ ಐತಿಹಾಸಿಕ ಕ್ಷಣವನ್ನು ಹಂಚಿಕೊಂಡಿದ್ದಾರೆ. ಈ ವಿಶ್ವಕಪ್ ಟೂರ್ನಿಯಲ್ಲಿ ಸೆಹ್ವಾಗ್ ೮ ಪಂದ್ಯಗಳನ್ನಾಡಿ ೩೮೦ ರನ್ ಬಾರಿಸಿದ್ದರು. ಬಾಂಗ್ಲಾದೇಶದ ವಿರುದ್ಧ ನಡೆದ ಪಂದ್ಯದಲ್ಲಿ ಕನಿಷ್ಠ ೧೭೫ ರನ್ ಕೂಡ ಸೇರಿತ್ತು. ೨೭೫ ರನ್‌ಗಳ ಬೆನ್ನತ್ತಿದ್ದ ಭಾರತ, ೧೧೪ ರನ್‌ಗಳಿಗೆ ೩ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ಹಂತದಲ್ಲಿ ಸೆಹ್ವಾಗ್ ಮತ್ತು ಗಂಭೀರ್, ನಾಯಕ ಧೋನಿ ಜತೆಯಾಟದಲ್ಲಿ ಭಾರತವನ್ನು ಗೆಲುವಿನ ದಡ ಸೇರಿಸಿದ್ದರು.
ಗಂಭೀರ್ ೯೭, ಧೋನಿ ಅಜೇಯ ೯೧ ರನ್ ಗಳಿಸಿದ್ದರು. ಈ ಐತಿಹಾಸಿಕ ಕ್ಷಣವನ್ನು ವೀರೇಂದ್ರ ಸೆಹ್ವಾಗ್ ಮೆಲುಕು ಹಾಕಿದ್ದಾರೆ.