
ಮುಂಬೈ,ನ.೪: ಗಾಯಾಳುವಾಗಿರುವ ಭಾರತೀಯ ಕ್ರಿಕೆಟ್ ತಂಡದ ಆಲ್‌ರೌಂಡರ್ ಹಾರ್ದಿಕ್‌ಪಾಂಡ್ಯ, ವಿಶ್ವಕಪ್‌ನಿಂದ ಹೊಗ ಬಿದ್ದಿದ್ದಾರೆ. ಪಾಂಡ್ಯ ಬದಲಿಗೆ ಕರ್ನಾಟಕದ ವೇಗದ ಬೌಲರ್ ಪ್ರಸಿದ್ಧ್‌ಕೃಷ್ಣ ಅವರನ್ನು ಬಿಸಿಸಿಐ ಆಯ್ಕೆ ಮಾಡಿದೆ. ಆಲ್‌ರೌಂಡರ್ ಅಲಭ್ಯತೆಯಿಂದ ಭಾರತ ತಂಡಕ್ಕೆ ದೊಡ್ಡ ಆಘಾತ ಉಂಟು ಮಾಡಿದೆ.ಸೆಮಿಫೈನಲ್ ಅಥವಾ ಫೈನಲ್‌ಗೂ ಮೊದಲು ಹಾರ್ದಿಕ್‌ಪಂಡ್ಯ ಗುಣಮುಖರಾಗಿ ತಂಡಕ್ಕೆ ವಾಪಸ್ ಆಗುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ಈಗ ಅವರು ಗುಣಮುಖರಾಗದ ಕಾರಣ ಉಳಿದ ಪಂದ್ಯಗಳಿಂದ ಹೊರಗುಳಿದಿದ್ದಾರೆ.
ಇತ್ತೀಚಿನ ಮಾಹಿತಿಯ ಪ್ರಕಾರ ಆಲ್‌ರೌಂಡರ್ ಪಾಂಡ್ಯ ಅವರ ಪಾದಕ್ಕೆ ಗಾಯವಾಗಿದ್ದು, ಚೇತರಿಸಿಕೊಳ್ಳಲು ಇನ್ನಷ್ಟು ಕಾಲಾವಕಾಶ ಬೇಕಾಗಿದೆ. ಈಗಾಗಲೇ ರೋಹಿತ್ ಪಡೆ ಎಲ್ಲ ೭ ಪಂದ್ಯಗಳಲ್ಲೂ ಜಯಭೇರಿ ಬಾರಿಸಿ ಈ ಬಾರಿಯ ವಿಶ್ವಕಪ್‌ನಲ್ಲಿ ಸೆಮಿಫೈನಲ್‌ಗೆ ಲಗ್ಗೆ ಹಾಕಿರುವ ಮೊದಲ ತಂಡವೆನಿಸಿದೆ. ನಾಳೆ ದಕ್ಷಿಣ ಆಫ್ರಿಕಾ ಹಾಗೂ ನ. ೧೨ ರಂದು ನೆದರ್‌ಲ್ಯಾಂಡ್ಸ್ ವಿರುದ್ಧ ಬಾಕಿ ಉಳಿದಿರುವ ಲೀಗ್ ಪಂದ್ಯಗಳನ್ನು ಆಡಲಿದೆ. ಈ ಪಂದ್ಯಗಳ ನಂತರ ನ. ೧೫ ಮತ್ತು ೧೬ ಸೆಮಿಫೈನಲ್ ಪಂದ್ಯಗಳು ನಡೆಯಲಿದ್ದು, ಈ ತಿಂಗಳ ೧೯ ರಂದು ಫೈನಲ್ ಪಂದ್ಯ ನಡೆಯಲಿದೆ.