ವಿಶ್ವಕಪ್‌ನಲ್ಲಿ ನಾಯಕರ ಬ್ಯಾಟಿಂಗ್ ವೈಫಲ್ಯ: ಬಟ್


ಕರಾಚಿ, ನ.೯- ಪ್ರಸಕ್ತ ವಿಶ್ವಕಪ್‌ನಲ್ಲಿ ಹಲವು ತಂಡಗಳ ನಾಯಕರು ಬ್ಯಾಟಿಂಗ್ ವೈಫಲ್ಯ ಕಾಣುತ್ತಿದ್ದಾರೆ. ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ, ಪಾಕ್‌ನ ಬಾಬರ್ ಅಝಮ್ ಸೇರಿದಂತೆ ಹಲವರು ಫಾರ್ಮ್ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ಪಾಕ್‌ನ ಮಾಜಿ ಕ್ರಿಕೆಟ್ ಆಟಗಾರ ಸಲ್ಮಾನ್ ಬಟ್ ತಿಳಿಸಿದ್ದಾರೆ.
ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ ಬಟ್, ರೋಹಿತ್ ಅವರನ್ನು ನೋಡಿದರೆ ಕೇನ್ ವಿಲಿಯಮ್ಸನ್ ಅವರಂತೆಯೇ ಸಿಲುಕಿದ್ದಾರೆ. ವಿಲಿಯಮ್ಸನ್ ೩೦ ಮತ್ತು ೪೦ ರನ್ ಗಳಿಸುತ್ತಿದ್ದರೂ ಸ್ಟ್ರೈಕ್ ರೇಟ್ ಅಷ್ಟು ಉತ್ತಮವಾಗಿಲ್ಲ.
ದಕ್ಷಿಣ ಆಫ್ರಿಕಾ ನಾಯಕ ತೆಂಬಾ ಬವುಮಾ ಅವರ ಉದಾಹರಣೆಯನ್ನು ತೆಗೆದುಕೊಳ್ಳಿ. ಕಳಪೆ ಫಾರ್ಮ್‌ನಿಂದ ಇತರರ ಆಯ್ಕೆಗೆ ತೊಡಕಾಗಿದ್ದಾರೆ. ಆದರೆ ರೋಹಿತ್ ಹಾಗೂ ಬಾಬರ್ ನಡುವೆ ಭಾರತದ ನಾಯಕ ಮುಂದಿದ್ದಾರೆ. ಕನಿಷ್ಟಪಕ್ಷ ರೋಹಿತ್ ದೊಡ್ಡ ಹೊಡೆತಕ್ಕೆ ಯತ್ನಿಸಿ ಔಟಾಗುತ್ತಿದ್ದರೆ ಬಾಬರ್ ಇನ್ನೂ ಕವಚದೊಳಗೆ ಬಂಧಿಯಾಗಿರುವಂತೆ ತೋರುತ್ತಿದೆ. ನಾವು ಬಾಬರ್ ಆಜಮ್ ಬಗ್ಗೆ ಮಾತನಾಡಿದರೆ, ಅವರು ಮೂಲತಃ ಫಾರ್ಮ್‌ನಿಂದ ಹೊರಗಿ ದ್ದಾರೆ.
ರೋಹಿತ್ ಶರ್ಮಾ ಸಾಕಷ್ಟು ದೊಡ್ಡ ಹೊಡೆತಕ್ಕೆ ಇಂಗಿತ ತೋರಿಸಿದ್ದಾರೆ. ಆದರೆ ಅವರ ಬ್ಯಾಟ್‌ನಿಂದ ಹೊಡೆತಗಳು ಹೊರಬರಲಿಲ್ಲ. ರೋಹಿತ್ ಮತ್ತು ಬಾಬರ್ ಇಬ್ಬರಿಗೂ ಫಾರ್ಮ್ ಸಮಸ್ಯೆಗಳಿವೆ ಆದರೆ ರೋಹಿತ್ ಅವರ ಉದ್ದೇಶವು ಇಬ್ಬರ ನಡುವಿನ ವ್ಯತ್ಯಾಸವಾಗಿದೆ.
ಬಾಬರ್ ಅಜಮ್ ಅವರು ಒತ್ತಡದಲ್ಲಿದ್ದಾರೆ. ಅಲ್ಲದೆ ಬಾಬರ್ ನಿಧಾನವಾಗಿ ವೇಗವನ್ನು ಪಡೆಯಲು ಪ್ರಯತ್ನಿಸುತ್ತಿದ್ದರೂ ಅದು ಸಾಧ್ಯವಾಗುತ್ತಿಲ್ಲ ಎಂದು ಬಟ್ ತಿಳಿಸಿದ್ದಾರೆ.