ವಿಶ್ವಆತ್ಮಹತ್ಯೆ ತಡೆ ದಿನಾಚರಣೆ


ಗದಗ, ಸೆ.132: ಆತ್ಮಹತ್ಯೆ ಒಂದು ಸಾಮಾಜಿಕ ಪಿಡುಗಾಗಿದ್ದು ಆತ್ಮಹತ್ಯೆಯನ್ನು ಎಲ್ಲರೂ ಸೇರಿ ತಡೆಗಟ್ಟೋಣ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕೆ. ಗುರುಪ್ರಸಾದ ತಿಳಿಸಿದರು.
ಗದಗ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಾಕ್ರಮ, ವೈದ್ಯಕೀಯ ಮಹಾವಿದ್ಯಾಲಯ-ಮನೋವೈದ್ಯಕೀಯ ವಿಭಾಗ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ , ಜಿಲ್ಲಾ ವಕೀಲರ ಸಂಘ ಜಿಲ್ಲಾ ವಾರ್ತಾ ಇಲಾಖೆ, ತಾಲೂಕಾ ಆರೋಗ್ಯ ಅಧಿಕಾರಿಗಳ ಕಾರ್ಯಾಲಯ ಹಾಗೂ ಕೆ.ಎಲ್.ಇ. ಸಂಸ್ಥೆಯ ಜಗದ್ಗುರು ತೋಂಟದಾರ್ಯ ಮಹಾವಿದ್ಯಾಲಯ-ಯುವ ರೆಡ್ ಕ್ರಾಸ್ ಘಟಕ ಗದಗ ಇವರುಗಳ ಸಂಯುಕ್ತ ಆಶ್ರಯದಲ್ಲಿ ನಗರದ ಕೆ.ಎಲ್.ಇ. ಸಂಸ್ಥೆಯ ಜಗದ್ಗುರು ತೋಂಟದಾರ್ಯ ಮಹಾವಿದ್ಯಾಲಯದಲ್ಲಿ ಜರುಗಿದ ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮದ್ಯ ಹಾಗೂ ಮಾದಕ ವಸ್ತುಗಳ ವ್ಯಸನದಿಂದ ವಿದ್ಯಾರ್ಥಿಗಳು ತಪ್ಪು ಮಾರ್ಗವನ್ನು ಹಿಡಿಯುತ್ತಿದ್ದು ಇದರಿಂದ ಹೊರಬರಬೇಕೆಂದು ಅವರು ಕರೆ ನೀಡಿದರು.
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಎಮ್. ಎ.ಮೌಲ್ವಿ ಮಾತನಾಡಿ ಆತ್ಮಹತ್ಯೆಯು ಶ್ರೀಮಂತರಿಂದ ಬಡವರವರೆಗೂ, ಮಕ್ಕಳಿಂದ ಮುದುಕರವರೆಗೂ, ಅನಕ್ಷರರಿಂದ ಸುಶಿಕ್ಷಿತರವರೆಗೂ ಯಾರನ್ನು ಬಿಟ್ಟಿಲ್ಲ. ಪಾಲಕರ ಅತೀಯಾದ ನಿರಿಕ್ಷೆಗಳು ವಿದ್ಯಾರ್ಥಿಗಳಲ್ಲಿ ಒತ್ತಡವನ್ನು ಉಂಟುಮಾಡಿ ಆತ್ಮಹತ್ಯೆಗೆ ಕಾರಣವಾಗುತ್ತಿವೆ. ಯಶಸ್ವಿ ಜೀವನಕ್ಕೆ ಅಂಕಗಳು ಮುಖ್ಯವಲ್ಲ ದೃಢಮನಸ್ಸು ಮುಖ್ಯವೆಂದು ತಿಳಿಸಿದರು. ಎಲ್ಲರೂ ಆತ್ಮಹತ್ಯೆ ತಡೆಗಟ್ಟುವಲ್ಲಿ ಶ್ರಮಿಸಿ ಆತ್ಮಹತ್ಯೆ ತಡೆಯುವ ಕುರಿತು ಸಮಾಜದಲ್ಲಿ ಅರಿವು ಮುಡಿಸಿ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ|| ಜಗದೀಶ ನುಚ್ಚಿನ ಆತ್ಮಹತ್ಯೆ ಪ್ರಕರಣಗಳು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿವೆ, ಕರ್ನಾಟಕವು ಆತ್ಮಹತ್ಯೆ ಪ್ರಕರಣಗಳಲ್ಲಿ 5ನೇ ಸ್ಥಾನವನ್ನು ಪಡೆದಿದೆ. ವಿದ್ಯಾರ್ಥಿಗಳು ಒಳ್ಳೆಯ ಜೀವನಶೈಲಿ ಹಾಗೂ ಒಳ್ಳೆಯ ಪುಸ್ತಕಗಳನ್ನು ಓದಿ ಜೀವನದಲ್ಲಿ ಯಶಸ್ಸು ಕಾಣಬೇಕೆಂದು ಎಂದು ಕರೆಕೊಟ್ಟರು.
ಕೆ.ಎಲ್.ಇ. ಸಂಸ್ಥೆಯ ಜಗದ್ಗುರು ತೋಂಟದಾರ್ಯ ಪದವಿ ಮಹಾವಿದ್ಯಾಲಯದ ಪ್ರಾಂಶುಪಾಲರು ಪಿ.ಜಿ.ಪಾಟೀಲ, ಮಾತನಾಡಿ ವಿದ್ಯಾರ್ಥಿಗಳಿಗೆ ಕಲಿಕೆಯು ಸಂತೋಷಕರವಾಗಿರಬೇಕು ಮನಸ್ಸನ್ನು ಹಿಡಿತದಲ್ಲಿ ಇಟ್ಟುಕೊಳ್ಳುವ ಕಲೆ, ಬರುವಂತಹ ಸಮಸ್ಯೆಗಳನ್ನು ಸ್ವಾಗತಿಸುವುದು ಬಹಳ ಮುಖ್ಯವಾದುದ್ದು ಈಗಿನ ಯುಗದಲ್ಲಿ ಮಾನಸಿಕ ಆರೊಗ್ಯವು ಪ್ರಮುಖವಾದ ಪಾತ್ರವನ್ನು ವಹಿಸುತ್ತಿದೆ . ವಿದ್ಯಾರ್ಥಿಗಳು ಧನಾತ್ಮಕ ಚಿಂತನೆ ರೂಢಿಸಿಕೊಂಡು ಆಧ್ಯಾತ್ಮಿಕ ಕಡೆ ಗಮನ ನೀಡಿ ಉತ್ತಮ ಮಾನಸಿಕ ಆರೊಗ್ಯವನ್ನು ರೂಢಿಸಿಕೊಂಡು ಸುಂದರ ಸಮಾಜವನ್ನು ನಿರ್ಮಾಣ ಮಾಡುವಲ್ಲಿ ಸುಂದರ ಸಮಾಜವನ್ನು ನಿರ್ಮಾಣ ಮಾಡಿ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಉಪನ್ಯಾಸಕರಾಗಿ ಆಗಮಿಸಿದ ಡಾ|| ಸೋಮಶೇಖರ ಬಿಜ್ಜಳ ಇವರು ಉಪನ್ಯಾಸದಲ್ಲಿ ಆತ್ಮಹತ್ಯೆ ತಡೆ ಕುರಿತು ವಿದ್ಯಾರ್ಥಿಗಳಿಗೆ ಸಲಹೆ ಸೂಚನೆಗಳನ್ನು ನೀಡಿದರು.
ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಅನುಷ್ಠಾನಾಧಿಕಾರಿ ಡಾ|| ರಾಜೇಂದ್ರ ಬಸರಿಗಿಡದ ಪ್ರಾಸ್ಥಾವಿಕವಾಗಿ ಇವರು ಮಾತನಾಡಿ ವಿಶ್ವ ಆತ್ಮಹತ್ಯೆ ತಡೆ ದಿನಾಚರಣೆಯ ಉದ್ದೇಶ ಹಾಗೂ ಅಂಕಿ ಅಂಶಗಳನ್ನು ತಿಳಿಸಿದರು.
ಕಾರ್ಯಕ್ರಮದಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿಗಳಾದ ಶ್ರೀಧರ ಎಮ್ ಸಿ. ವಿನಾಯಕ ವಾಗಮೋರೆ, ಕು.ಶೋಭಾ ವಡ್ಡರ, ಕು.ನೂತನ ಹೊಸಮನಿ, ಉಮೇಶ ಕರಮುಡಿ, ಪ್ರಭು ಹೊನಗುಡಿ, ಎಸ್.ದೇವರವರ, ವ್ಹಿ.ಜಿ ಲಿಂಬಿಕಾಯಿ, ಎಸ್. ಕುಬಸದ, ಶಿರಸ್ತೆದಾರರಾದ ಬಿ.ಎಮ್.ಕುಕನೂರ, ಕೆ.ಎಲ್.ಇ. ಸಂಸ್ಥೆಯ ಜಗದ್ಗುರು ತೋಂಟದಾರ್ಯ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು ಹಾಜರಿದ್ದರು. ಸುಶ್ಮಿತಾ ಪೂಜಾರ ಪ್ರಾರ್ಥಿಸಿದರು. ಪೆÇ್ರ. ಎಸ್.ಬಿ. ಹಾವೇರಿ ಸ್ವಾಗತಿಸಿದರು, ಉಪನ್ಯಾಸಕರಾದ ಜ್ಯೋತಿ ಡುಮ್ಮಾಳ ಕಾರ್ಯಕ್ರಮ ನಿರೂಪಿಸಿದರು. ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದ ಮನೋವೈದ್ಯರಾದ ಡಾ. ರಾಘವೇಂದ್ರ ಪಾಟೀಲ್ ವಂದಿಸಿದರು.