ವಿಶ್ವಅಂಗವಿಕಲರ ದಿನಾಚರಣೆ: ಹೊಸ ವರ್ಷದ 2021ನೇ ದಿನಚರಿ ಬಿಡುಗಡೆ

ಚಿಂಚೋಳಿ,ಡಿ.28- ಇಲ್ಲಿನ ಚಂದಾಪುರ ಪಟ್ಟಣದ ಸರಕಾರಿ ಕಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಇಂದು ಚೈತನ್ಯ ವಿಶೇಷಚೇತನರ ಹೋರಾಟ ಸಮಿತಿ ಆಯೋಜಿಸಿದ್ದ ವಿಶ್ವ ಅಂಗವಿಕಲರ ದಿನಾಚರಣೆ ಕಾರ್ಯಕ್ರಮಕ್ಕೆ ಪುರಸಭೆ ಅಧಿಕಾರಿ ಅಭಯಕುಮಾರ್ ಅವರು ಚಾಲನೆ ನೀಡಿದರು.
ಈ ಕಾರ್ಯಕ್ರಮದಲ್ಲಿ ಚೈತನ್ಯ ವಿಶೇಷಚೇತನರ ಹೋರಾಟ ಸಮಿತಿಯ ಹೊರ ತಂದಿರುವ 2021ನೇ ನೂತನ ವರ್ಷದ ದಿನಚರಿಯನ್ನು ಸರ್ಕಾರಿ ಆಸ್ಪತ್ರೆಯ ವೈದ್ಯರಾದ ಡಾ. ಸಂತೋಷ್ ಪಾಟೀಲ ಅವರು ಬಿಡುಗಡೆ ಮಾಡಿದರು.
ಈ ಸಂದರ್ಭದಲ್ಲಿ ಡಾ. ಅಜಯ ಕುಮಾರ್ ಕಾಟಾಪುರ. ಪುರಸಭೆ ಸದಸ್ಯರಾದ ರೂಪಕಲಾ ಗೋಪಾಲರಾವ ಕಟ್ಟಿಮನಿ. ಚೈತನ್ಯ ವಿಶೇಷಚೇತನರ ಹೋರಾಟ ಸಮಿತಿಯ ಅಧ್ಯಕ್ಷರಾದ ಮಂಜೂರು ಅಹ್ಮದ್.ಚೈತನ್ಯ ವಿಶೇಷಚೇತನರ ಹೋರಾಟ ಸಮಿತಿಯ ಉಪಾಧ್ಯಕ್ಷರಾದ ವಿಶ್ವಥ್ ಕಟ್ಟಿಮನಿ. ವೀರಶೆಟ್ಟಿ ಗಾರಂಪಳ್ಳಿ. ಮಲ್ಲಿಕಾರ್ಜುನ. ನರೇಂದ್ರ ಚಲವಾದಿ. ಅನೀಲ ಕುಮಾರ. ಸೇಡಂ. ರಮೇಶ ಭಕ್ತಂಪಲ್ಲಿ. ಈರಪ್ಪ ಕನಕಪುರ. ಶರಣು ಕೇಶ್ವರ. ಮಹೇತಾಬ್ ಸಾಬ್. ಅಶೋಕ ಕುಮಾರ ದೇಗಲಮಡಿ. ಸುಮಂತ. ಮತ್ತು ಅನೇಕ ಚೈತನ್ಯ ವಿಶೇಷಚೇತನರ ಹೋರಾಟ ಸಮಿತಿಯ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.