ವಿಶೇಷ ಸಾಧಕರಿಗೆ ಸನ್ಮಾನ

ಕೋಲಾರ,ಏ.೧೭: ಬೆಂಗಳೂರು ವಿಶ್ವವಿದ್ಯಾಲಯದ ೨೦೨೧ನೇ ಸಾಲಿನ ಪತ್ರಿಕೋದ್ಯಮ ಸಮೂಹ ಸಂವಹನ ಸ್ನಾತಕೋತ್ತರ ಪದವಿಯಲ್ಲಿ ಮೊದಲ ರ್ಯಾಂಕ್ ಪಡೆದ ಗೌತಮಿ ಎಂ, ೨ನೇ ಅಂತರರಾಷ್ಟ್ರೀಯ ೧೭ರ ವಯೋಮಿತಿ ಕ್ರೀಡಾಕೂಟದಲ್ಲಿ ಭಾರತವನ್ನು ಪ್ರತಿನಿಧಿಸಿ ಎತ್ತರ ಜಿಗಿತದಲ್ಲಿ ಚಿನ್ನದ ಪದಕ ಪಡೆದ ಹರ್ಷಿತ ಡಿ. ರವರನ್ನ, ಕೋಟಿಗಾನಹಳ್ಳಿ ಗ್ರಾಮಸ್ಥರು ಸೇರಿ ವಿಶೇಷ ಸಾಧನೆ ಮಾಡಿದಂತಹ ತಮ್ಮ ಗ್ರಾಮದ ಹೆಮ್ಮೆ ಪುತ್ರರನ್ನು ಗೌರವಪೂರ್ವಕವಾಗಿ ಸನ್ಮಾನಿಸಿದರು.
ಯುಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಕೆ.ಎನ್ ಮಂಜುನಾಥ್ ಮಾತನಾಡಿ, ಕೆ.ಎನ್ ಗಣೇಶಯ್ಯ, ಗೌತಮಿ ಎಂ, ಹರ್ಷಿತ ಡಿ ಇವರುಗಳು ಮಾಡಿರುವ ಸಾಧನೆ ಕೋಟಿಗಾನಹಳ್ಳಿ ಮತ್ತು ಕೋಲಾರ ಜಿಲ್ಲೆಯೂ ಹೆಮ್ಮೆ ಪಡುವಂತಾಗಿದೆ. ವಿಶೇಷವಾಗಿ ಕ್ರೀಡೆಯಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ಪದಕ ಪಡೆದ ಹರ್ಷಿತ ಡಿ ರವರಿಗೆ ನಮ್ಮ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯಿಂದ ಸಿಗುವ ಎಲ್ಲಾ ಸೌಲಭ್ಯಗಳನ್ನು ಒದಗಿಸುವ ಭರವಸೆ ನೀಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕಲಾವಿದ ಕೆ.ವಿ ಕಾಳಿದಾಸ, ಸಾಂಸ್ಕೃತಿಕ ಮತ್ತು ಶೈಕ್ಷಣಿಕವಾಗಿ ಹೆಸರನ್ನು ಗಳಿಸಿದ ಈ ಗ್ರಾಮ ಈಗ ಹರ್ಷಿತ ಡಿ ಮೂಲಕ ಕ್ರೀಡೆಯಲ್ಲಿ ತನ್ನ ಹೆಸರನ್ನು ಪ್ರಖ್ಯಾತಗೊಳಿಸಿದೆ. ಕೋಟಿಗಾನಹಳ್ಳಿ ರಾಮಯ್ಯ ನವರು ಈ ಗ್ರಾಮಕ್ಕೆ ಕೀರ್ತಿ ತಂದಂತೆ ಈ ಮೂರು ಜನ ಸಾಧಕರು ಕೀರ್ತಿಯನ್ನು ತರುವಂತಾಗಲಿ ಎಂದು ನುಡಿದ ಅವರು, ಈ ಹಳ್ಳಿಯಲ್ಲಿ ಪ್ರತಿಭೆಗಳು ಬೆಳೆಯಲಿ ಎಂದು ಹಾರೈಸಿದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿ ಸದಸ್ಯರಾದ ಮಂಜುಳ ಕೆ.ಪ್ರಕಾಶ್, ನಾರಾಯಣಪ್ಪ(ಗ್ವಾರಪ್ಪ) ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.
ಕೆ.ಪ್ರಕಾಶ್ ಸ್ವಾಗತಿಸಿ, ಕೆ.ಎಸ್ ರಾಜಗೋಪಾಲಕೃಷ್ಣ ನಿರೂಪಿಸಿ, ಕೆ.ಎಂ ನೀಲಕಂಠೇಗೌಡ ವಂದಿಸಿದರು.