ಸಂಜೆವಾಣಿ ವಾರ್ತೆ
ಮೊಳಕಾಲ್ಮೂರು, ಮೇ.27 ಎಲ್ಲಾ ತಂದೆ ತಾಯಿಗಳಿಗೂ ನಮ್ಮ ಮಕ್ಕಳು ಚೆನ್ನಾಗಿ ರಲ್ಲಿ ಅರೋಗ್ಯ ವಂತ ಮಕ್ಕಳಾಗಿ ಹುಟ್ಟಲ್ಲಿ ಎಂಬ ಆಸೆ ಇದೇ ಇರುತ್ತದೆ ಆದರೆ ವಿಶೇಷ ವಾದ ಮಗುವಾಗಿ ಹುಟ್ಟಿದಾಗ ಎಲ್ಲಾರಿಗೂ ದು:ಖವಾಗುತ್ತದೆ ಎಂದು ಸಾಹಿತಿ ಹಾಗೂ ನಮ್ಮ ಆಶ್ರಯ ಸಂಸ್ಥೆಯ ಸಂಸ್ಥಾಪಕರಾದ ಮೊಳಕಾಲ್ಮೂರು ಶ್ರೀನಿವಾಸ ಮೂರ್ತಿ ತಿಳಿಸಿದರು.
ಅವರು ಇಂದು ಪಟ್ಟಣದ ಹಳೇ ಸಂತೆ ಮೈದಾನದಲ್ಲಿ ಮಹಾವನ ಬೌದ್ಧಿಕ ವಿಕಲಚೇತನ ಮಕ್ಕಳ ವಸತಿ ಶಾಲೆಯ ಉದ್ಘಾಟನಾ ಸಮಾರಂಭದ ಕಾರ್ಯ ಕ್ರಮದಲ್ಲಿ ಭಾಗವಹಿಸಿ ಪ್ರಸ್ತಾವಿಕ ವಾಗಿ ಮಾತನಾಡುತ್ತಾ, ಬಡತನದ ಕುಟುಂಬದಲ್ಲಿ ಅಂಗವಿಕಲ ಮಕ್ಕಳು ಜನಿಸಿದರೆ ತಂದೆ ತಾಯಿಗೆ ಅದರ ಪೋಷಣೆ, ಲಾಲನೆ ಪಾಲನೆ ತುಂಬ ಕಷ್ಟ ಕರವಾಗಿತ್ತದೆ, ಅಂತ ಮಕ್ಕಳಿಗಾಗಿ ನಾವು ಮಹಾವನ ಬೌದ್ಧಿಕ ವಿಕಲಚೇತನ ಮಕ್ಕಳ ವಸತಿ ಶಾಲೆಯನ್ನು ಪ್ರಾರಂಭಿಸಿದ್ದೆವೆ. ಅಂಗವಿಕಲ ಮಕ್ಕಳು ನಮ್ಮ ಮಕ್ಕಳಲ್ಲ ಅವು ಸಮಾಜದ ಮಕ್ಕಳು ಅವುಗಳನ್ನು ಜಗದ ಮುಖ್ಯ ವಾಹಿನಿಗೆ ತರುವುದು ನಮ್ಮ ಕರ್ತವ್ಯ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕೆ.ವಿ.ರಾಜಣ್ಣ ನಿವೃತ್ತ ಆಯುಕ್ತರು ಅಂಗವಿಕಲ ಕಲ್ಯಾಣ ಇಲಾಖೆ ಬೆಂಗಳೂರು ಇವರು ಮಾತನಾಡಿ, ಅಂಗವಿಕಲ ಮಕ್ಕಳ ಮತ್ತು ಬುದ್ಧಿ ಮಾಂದ್ಯ ಮಕ್ಕಳ ಪೋಷಣೆ ಮತ್ತು ಶಿಕ್ಷಣ ಕ್ಕಾಗಿ ಶ್ರಮಿಸುವ ಪೋಷಕರಲ್ಲಿ ಆತಂಕ ಮನೆ ಮಾಡಿರುತ್ತದೆ ತಮ್ಮ ಮಕ್ಕಳು ಬೇಗ ಗುಣಮುಖರಾಗಿ ಸಮ ಸಮಾಜ ನಾಗರಿಕ ರಗಿ ಶಕ್ತಿ ವಂತವಗಿ ಬದುಕಲ್ಲಿ ಎಂದು. ಅಂಗವಿಕಲ ಮಕ್ಕಳ ಕಲ್ಯಾಣ ಗಾಗಿ ದುಡಿಯುವ ಪ್ರತಿ ಯೊಬ್ಬರು ಸಮಾಜ ಮುಖಗಳು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಡಾ. ಅಭಿನವ ಡಿ. ಎಂ. ಆಡಳಿತ ವೈದ್ಯಾಧಿಕಾರಿಗಳು, ಶ್ರೀ ಮತಿ ವೈಶಾಲಿ ಜೆ. ಜಿಲ್ಲಾ ಅಂಗವಿಕಲ ಕಲ್ಯಾಣ ಅಧಿಕಾರಿ ಚಿತ್ರದುರ್ಗ, ತಿಮ್ಮಪ್ಪ ನಿವೃತ್ತ ಡಿವೈಎಸ್ಪಿ, ಎಂ. ಸದಾಶಿವ ಕೃಷ್ಣ ಚೈತನ್ಯ ಬುದ್ಧಿ ಮಾಂದ್ಯ ಮಕ್ಕಳ ಶಾಲೆ ಬೆಂಗಳೂರು ಹಾಗೂ ವಿರೂಪಾಕ್ಷಪ್ಪ, ಜನಾ ಸಂಸ್ಥಾನ ಸಂಸ್ಥೆ, ಹಾಗೂ ಇನ್ನು ಮುಂತಾದವರಿದ್ದರು.
One attachment • Scanned by Gmail