ವಿಶೇಷ ಮಕ್ಕಳನ್ನು ಗುರುತಿಸಿ ಹೆಚ್ಚಿನ ತರಬೇತಿ ನೀಡಿ

ಬಾಗಲಕೋಟೆ,ಏ.6 : ಪ್ರತಿ ಮಕ್ಕಳು ತನ್ನದೇಯಾದ ಪ್ರತಿಭೆಯನ್ನು ಹೊಂದಿರುತ್ತವೆ ಅಂತಹ ಪ್ರತಭಾನ್ವಿತ ಮಕ್ಕಳಿಗೆ ವಿಶೇಷ ತರಬೇತಿಯನ್ನು ನೀಡಿ ಜಿಲ್ಲೆ, ರಾಜ್ಯ, ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಮಿಂಚುವಂತೆ ತರಬೇತಿದಾರರು ಕಾರ್ಯಮಾಡಬೇಕು ಎಂದು ಜಿಲ್ಲಾ ಕನ್ನಡ ಸಂಸ್ಕøತಿ ಇಲಾಖೆ ಉಪನಿರ್ದೇಶಕಿ ಹೇಮಾವತಿ ಎನ್ ಸಂಗೀತ ವಿದ್ಯಾರ್ಥಿಗಳನ್ನು ಮತ್ತು ಸುಗಮ ಸಂಗೀತ ಶಿಕ್ಷಕರನ್ನುದ್ದೇಶಿಸಿ ಮಾತನಾಡಿದರು.
ತಾಲೂಕಿನ ಮುರನಾಳ ಪು.ಕೇ.ದ ಶ್ರೀ ಮಂಜುನಾಥ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಬೆಂಗಳೂರು ಇವರ ಸಂಯೋಗದದಲ್ಲಿ ಸನ್2020-21 ನೇ ಸಾಲಿನ ವಿಶೇಷ ಘಟಕ ಹಾಗೂ ಗಿರಿಜನ ಉಪಯೋಜನೆಯಡಿ ಗುರು ಶಿಷ್ಯ ಪರಂಪರೆ ಯೋಜನೆಯಡಿಯಲ್ಲಿ ಗುರುಮುಖೇನ ಸುಗಮ ಸಂಗೀತ ತರಬೇತಿ ಶಿಬಿರ ಕಾರ್ಯಕ್ರಮದ ಉದ್ಘಾಟನೆಯನ್ನು ಹಾರ್ಮೋನಿಯಂ ನುಡಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು.
ಒಟ್ಟು 16 ವಿದ್ಯಾರ್ಥಿಗಳು ಈ ತರಬೇತಿಯಲ್ಲಿರುತ್ತಾರೆ ಅದರಲ್ಲಿ ವಿಶೇಷ ಸಂಗೀತ ಆಸಕ್ತವುಳ್ಳ ಮಕ್ಕಳಿರುತ್ತವೆ ಅಂತವರನ್ನು ಗುರುತಿಸಿ ಮುಖ್ಯವಾಹಿನಿಗೆ ತರಬೇಕೆಂದು ಸಂಗೀತ ಶಿಕ್ಷಕರಿಗೆ ಕರೆ ನೀಡಿದರು. ಗ್ರಾಮೀಣ ಮಟ್ಟದಲ್ಲಿ ಜನಪದ ಸಾಹಿತ್ಯದಲ್ಲಿ ಉತ್ತಮವಾಗಿ ಆಸಕ್ತಿ ಹೊಂದಿದ ವಿದ್ಯಾರ್ಥಿಗಳು ಇರುತ್ತಾರೆ ಅವರಿಗೆ ವೇದಿಕೆ ಸಿಕ್ಕಿರುವುದಿಲ್ಲ ಸಂಗೀತ ಶಿಕ್ಷಕರು ಗ್ರಾಮೀಣ ಪ್ರತಿಭೆಗಳನ್ನು ಗುರುತಿಸಿ ಉತ್ತಮವಾದ ತರಬೇತಿ ನೀಡಿ ಮುಂದೆ ಮುಖ್ಯವಾಹಿನಿಗಳಲ್ಲಿ ಸ್ಪರ್ಧಿಸಲು ಅವಕಾಶಗಳನ್ನು ಕಲ್ಪಿಸಿಕೊಡಬೇಕೆಂದರು.
ಕಾರ್ಯಕ್ರಮದಲ್ಲಿ ಸಂಗೀತ ನೃತ್ಯ ಅಕಾಡೆಮಿ ಸದಸ್ಯ ಹಣಮಂತ ಮೇತ್ರಿ, ಸುಗಮ ಸಂಗೀತ ತರಬೇತಿ ಶಿಕ್ಷಕ ಚಂದ್ರಕಾಂತ ಆಲೂರ, ಸಂಸ್ಥೆಯ ಉಪಾಧ್ಯಕ್ಷ ಎ.ಆರ್.ಪೂಜಾರಿ, ಶ್ರೀ ಹುಚ್ಚೇಶ್ವರ ಪಜಾ/ಪಪಂ ಶಿಕ್ಷಣ ಹಾಗೂ ಗ್ರಾಮನಗರಾಭಿವೃದ್ಧಿ ಸಂಸ್ಥೆಯ ಸಂಸ್ಥಾಪಕ ಗೌರವ ಡಾ.ಟಿ.ಎಚ್.ಸನಗಿನ, ಶಾಲಾ ಮುಖ್ಯಗುರು ಎಸ್.ಪಿ.ಮಂಗಳಗುಡ್ಡ ಮತ್ತು ಕೃಷ್ಣಾ ರಂಗಣ್ಣವರ, ಹನಮಂತ ಬೆಣ್ಣೂರ ಮುಂತಾದವರು ಉಪಸ್ಥಿತರಿದ್ದರು.