ವಿಶೇಷ ಭತ್ಯೆ ನೀಡಿದಿದ್ದರೆ ಜೂ.7ರಿಂದ ಕೋವಿಡ್ ಕಾರ್ಯ ಸ್ಥಗಿತ

ದಾವಣಗೆರೆ.ಜೂ.೧: ರಾಜ್ಯದ ಆಯುಷ್ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ವೈದ್ಯಾಧಿಕಾರಿಗಳಿಗೆ ಎಂಬಿಬಿಎಸ್ ಮತ್ತು ಬಿಡಿಎಸ್ ವೈದ್ಯಾಧಿಕಾರಿಗಳಿಗೆ ನೀಡಿರುವ ವಿಶೇಷ ಭತ್ಯೆ ರೀತಿಯಲ್ಲೇ ಆಯುಷ್ ಇಲಾಖೆಯ ವೈದ್ಯಾಧಿಕಾರಿಗಳಿಗೆ ವಿಶೇಷ ಭತ್ಯೆ ನೀಡುವಂತೆ ದಾವಣಗೆರೆ ಜಿಲ್ಲಾ ಸರ್ಕಾರಿ ಆಯುಷ್ ವೈದ್ಯಾಧಿಕಾರಿಗಳ ಸಂಘ ರಾಜ್ಯ ಸರ್ಕಾರವನ್ನು ಆಗ್ರಹಿಸಿದೆ.ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ವೈದ್ಯಾಧಿಕಾರಿಗಳಿಗೆ ವಿಶೇಷ ಭತ್ಯೆ ಹೆಚ್ಚಿಸಿ ಆದೇಶಿಸಲಾಗಿದೆ. ಅಲ್ಲದೇ ಕಾಲಕಾಲಕ್ಕೆ ನೀಡಲಾಗುವ ವೇತನ, ಭತ್ಯೆ, ಸ್ಥಾನಮಾನಗಳನ್ನು ಆಯುಷ್ ವೈದ್ಯಾಧಿಕಾರಿಗಳಿಗೂ ವಿಸ್ತರಿಸಬೇಕೆಂದು ಸಚಿವ ಸಂಪುಟದಲ್ಲಿ ನಿರ್ಣಯಿಸಲಾಗಿದೆ. ಹೀಗಿದ್ದೂ ಆರೋಗ್ಯ ಇಲಾಖೆಯ ಆದೇಶದಲ್ಲಿ ಆಯುಷ್ ವೈದ್ಯಾಧಿಕಾರಿಗಳನ್ನು ಹೊರತುಪಡಿಸಿ ಎಂಬಿಬಿಎಸ್ ಹಾಗೂ ಬಿಡಿಎಸ್ ವೈದ್ಯಾಧಿಕಾರಿಗಳಿಗೆ ವಿಶೇಷ ಭತ್ಯೆಯನ್ನು ನೀಡಿರುವುದು ಅಸಮಂಜಸ ಎಂದು ಸಂಘವು ಅಸಮಾಧಾನ ವ್ಯಕ್ತ ಪಡಿಸಿದೆ.
ಈ ಕುರಿತು ಕರ್ನಾಟಕ ಸರ್ಕಾರಿ ಆಯುಷ್ ವೈದ್ಯಾಧಿಕಾರಿಗಳ ಸಂಘವು ಹಲವಾರು ಬಾರಿ ಸರ್ಕಾರಕ್ಕೆ ಮನವಿ ಸಲ್ಲಿಸಿದೆ. ಅಲ್ಲದೇ ಈ ತಾರತಮ್ಯ ನೀತಿಯನ್ನು ಹೋಗಲಾಡಿಸಿ ಮೇ 31ರೊಳಗೆ ಆದೇಶ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಈ ಬೇಡಿಕೆ ಈಡೇರದಿದ್ದರೆ ಕಪ್ಪು ಪಟ್ಟಿ ಧರಿಸುವ ಮೂಲಕ ಪ್ರತಿಭಟನಾ ನಿರತರಾಗಿ ಕರ್ತವ್ಯ ನಿರ್ವಹಿಸಲಿದ್ದೇವೆ. ಶೀಘ್ರವೇ ಸರ್ಕಾರ ಆಯುಷ್ ವೈದ್ಯಾಧಿಕಾರಿಗಳ ಬೇಡಿಕೆ ಈಡೇರಿಸದಿದ್ದರೆ ಜೂನ್ 7ರಿಂದ ಕೋವಿಡ್ ಸಂಬAಧಿತ ಎಲ್ಲಾ ಕೆಲಸ ಕಾರ್ಯ ಬಹಿಷ್ಕರಿಸಿ ಕೇವಲ ಆಯುಷ್ ಇಲಾಖೆಯ ಚಿಕಿತ್ಸಾಲಯ, ಆಸ್ಪತ್ರೆಗಳಿಗೆ ಸೀಮಿತವಾಗಿ ಕರ್ತವ್ಯ ನಿರ್ವಹಿಸಲಾಗುವುದು ಎಂದು ತಿಳಿಸಿದೆ.

ಕಾರಣ ಸರ್ಕಾರದೊಂದಿಗೆ ಅನಗತ್ಯವಾಗಿ ಸಂಘರ್ಷಕ್ಕೆ ಇಳಿಯುವ ಅವಕಾಶ ಮಾಡಿಕೊಡಬಾರದೆಂದು ದಾವಣಗೆರೆ ಜಿಲ್ಲಾ ಸರ್ಕಾರಿ ಆಯುಷ್ ವೈದ್ಯಾಧಿಕಾರಿಗಳ ಸಂಘದ ಗೌರವಾಧ್ಯಕ್ಷ ಡಾ.ಶಂಕರಗೌಡ, ಅಧ್ಯಕ್ಷ ಡಾ.ಬಿ.ಎಸ್.ಮಲ್ಲಿಕಾರ್ಜುನ್, ಉಪಾಧ್ಯಕ್ಷೆ ಡಾ.ಎಸ್.ಎಸ್.ಸುಚಿತ್ರ, ಪ್ರಧಾನ ಕಾರ್ಯದರ್ಶಿ ಡಾ.ಸಿದ್ದೇಶ್ ಈ.ಬಿಸನಳ್ಳಿ, ಖಜಾಂಚಿ ಡಾ.ಎಂ.ಸಿ.ಸುರೇಶ್‌ಕುಮಾರ್, ಸಹ ಕಾರ್ಯದರ್ಶಿ ಡಾ.ರೇವ್ಯಾನಾಯ್ಕ, ಸಂಘಟನಾ ಕಾರ್ಯದರ್ಶಿ ಡಾ.ಸಯ್ಯದ್ ಶಂಷುದ್ದೀನ್, ರಾಜ್ಯ ಸಂಘದ ಪ್ರತಿನಿಧಿಗಳಾದ ಡಾ.ಚಂದ್ರಕಾAತ್ ಎಸ್.ನಾಗಸಮುದ್ರ, ಡಾ.ಬಿ.ಯು.ಯೋಗೇಂದ್ರಕುಮಾರ್, ವಿವಿಧ ತಾಲೂಕಿನ ಪ್ರತಿನಿಧಿಗಳಾದ ದಾವಣಗೆರೆಯ ಡಾ.ಬಿ.ಹೆಚ್.ದ್ಯಾವನಗೌಡರ, ನ್ಯಾಮತಿಯ ಡಾ.ಎನ್.ಕೆ.ಲಿಂಗರಾಜೇAದ್ರ, ಹೊನ್ನಾಳಿಯ ಡಾ.ಯಶವಂತ್, ಚನ್ನಗಿರಿಯ ಡಾ.ಕೆ.ಸದಾಶಿವ, ಹರಿಹರದ ಡಾ.ಯೋಗೀಶ್ವರಗೌಡ ಮನವಿ ಮಾಡಿದ್ದಾರೆ. ವಿಶೇಷ ಭತ್ಯೆ ನೀಡಿದಿದ್ದರೆ ಜೂ.7ರಿಂದ ಕೋವಿಡ್ ಕಾರ್ಯ ಸ್ಥಗಿತ