ವಿಶೇಷ ಬಿಇಡಿ ಕೋರ್ಸ್ ಗೆ ಅವಕಾಶ ನೀಡಲು ಮನವಿ

ದಾವಣಗೆರೆ.ಡಿ.೨೧; ಖಾಸಗಿ ಅನುದಾನಿತ ಪದವಿ ಪೂರ್ವ ಕಾಲೇಜುಗಳಲ್ಲಿ 2008ರ ನಂತರದ ಬಿಇಡಿ ಕೋರ್ಸನ್ನು ನೇರ ಶಿಕ್ಷಣದ ಮೂಲಕ ಪಡೆದುಕೊಳ್ಳಲು ಸಾಧ್ಯವಾಗದ ಕಾರಣ, ಇಲಾಖಾ ನಿಯಮವನ್ನು ಕಡ್ಡಾಯವಾಗಿ ಪಾಲಿಸಲೇಬೇಕಾದ ಅನಿವಾರ್ಯತೆ ಇರುವ ಕಾರಣ, ದೂರಶಿಕ್ಷಣದಲ್ಲಿ ಬಿಇಡಿ ಕೋರ್ಸನ್ನು ಅಧ್ಯಯನ ಮಾಡಬೇಕಾದ ತೀವ್ರ ಅಗತ್ಯತೆ ಉದ್ಭವಿಸಿದೆ ಆದ್ದರಿಂದ ಕರ್ನಾಟಕ ರಾಜ್ಯ ಮುಕ್ತ ವಿವಿ ಮೂಲಕ ಬಿಇಡಿ ಕೋರ್ಸ್ ಪಡೆಯಬಹುದಾಗಿದೆ  ಇದಕ್ಕೆ ಅವಕಾಶ ನೀಡಬೇಕೆಂದು ರಾಜ್ಯ ಶೈಕ್ಷಣಿಕ ದಿಕ್ಸೂಚಿ ಮತ್ತು ಸುಧಾರಣಾ ಸಮಿತಿ ರಾಜ್ಯಾಧ್ಯಕ್ಷ ಡಾ ಸುಧಾಕರ ಹೊಸಳ್ಳಿ ಹಾಗೂ ರವಿಶಂಕರ್ ಅವರು ಮುಕ್ತ ವಿವಿ ಕುಲಪತಿಗಳಿಗೆ ಮನವಿ ಸಲ್ಲಿಸಿದ್ದಾರೆ. ಪ್ರಸ್ತುತ  ಪ್ರತಿ ವರ್ಷವೊಂದಕ್ಕೆ ಐದುನೂರು ಜನರಿಗೆ ಮಾತ್ರ ಸಾಮಾನ್ಯ ಪ್ರವೇಶ ಪರೀಕ್ಷೆಯ ಮೂಲಕ ಬಿಇಡಿ 
ಶಿಕ್ಷಣವನ್ನು ನೀಡುತ್ತಿದ್ದು, ಸದರಿ ಪ್ರಕರಣವನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ, ಉಪನ್ಯಾಸಕರಿಗೆ ಸಾಮಾನ್ಯ ಪ್ರವೇಶ ಪರೀಕ್ಷೆಯ ವಿನಾಯಿತಿ ನೀಡಿ, ಬಿಇಡಿ ಕೋರ್ಸಿಗೆ ಅವಕಾಶ ಮಾಡಿಕೊಡಬೇಕು.  ಕರ್ನಾಟಕದಲ್ಲಿ ದೂರಶಿಕ್ಷಣಕ್ಕೆ ಕೆಎಸ್ಒಯು ಮಾತ್ರ ಅವಕಾಶ ನೀಡಬೇಕೆಂಬ ಘನ ಆದೇಶ ಹೊರಬಿದ್ದಿದ್ದು ,ತಾವು ಜರೂರು ಎಂದು ಈ ಪ್ರಕರಣವನ್ನು ಭಾವಿಸಿ ಅವಕಾಶ ಮಾಡಿಕೊಡಬೇಕೆಂದು ಸಮಿತಿಯು ತಮ್ಮನ್ನು ಒತ್ತಾಯಿಸುತ್ತದೆ.ಎನ್ ಸಿ ಟಿ ಇ ಇಂದ ವಿಶೇಷ ಅನುಮೋದನೆ ತೆಗೆದುಕೊಳ್ಳಲು ತಾವು ಪ್ರಯತ್ನ ಮಾಡುವ ಭಾಗವಾಗಿ, ಈಗಾಗಲೇ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರ ಸುರೇಶ್ ಕುಮಾರ್ ರವರ ಬಳಿಯೂ ಸಮಸ್ಯೆ ಕುರಿತು ವಿನಂತಿಸಲಾಗಿದೆ.