ವಿಶೇಷ ಪೂಜೆ

ಬಾದಾಮಿ,ಏ18: ಬಾದಾಮಿಯ ಸಾಯಿಬಾಬಾ ಮಂದಿರದಲ್ಲಿ ಸಾಯಿಬಾಬಾ ಅವರಿಗೆ ವಿಶೇಷ ಅಲಂಕಾರ ಪೂಜೆ ಮಾಡಿ ರಾಮನವಮಿ ಅಂಗವಾಗಿ ರಾಮನ ಮೂರ್ತಿ ತೊಟ್ಟಿಲಲ್ಲಿ ತೂಗಿ ರಾಮಜಪ, ರಾಮನಾಮ ಜಪ ವನ್ನು ಸಾಯಿಬಾಬಾ ಮಹಿಳಾ ಸಮಿತಿಯವರು ನೆರವೇರಿಸಿದರು.
ಈ ಸಂದರ್ಭದಲ್ಲಿ ಕಮಲಮ್ಮ ಜಿಗಬಡ್ಡಿ, ಗೌರಮ್ಮ ಚಿನಿವಾಲರ, ವಾಣಿ ಶೆಟ್ಟರ್, ಶೈಲಾ ಬೆಣ್ಣಿ, ಅನಸೂಯ ಹೊಸಮನಿ, ಅನಸೂಯ ಕಲ್ಯಾಣಶೆಟ್ಟಿ ಸೇರಿದಂತೆ ಅನೇಕ ಮಹಿಳೆಯರು ಬಾಬಾ ಟ್ರಸ್ಟ್ ಸಮಿತಿ ಸದಸ್ಯರು ಇದ್ದರು.